Skip to product information
1 of 1

ಎಲ್.ಎಸ್. ಶೇಷಗಿರಿ ರಾವ್

ಹೊಸಗನ್ನಡ ಸಾಹಿತ್ಯ ಚರಿತ್ರೆ

ಹೊಸಗನ್ನಡ ಸಾಹಿತ್ಯ ಚರಿತ್ರೆ

Publisher:

Regular price Rs. 195.00
Regular price Rs. 195.00 Sale price Rs. 195.00
Sale Sold out
Shipping calculated at checkout.
ಆಧುನಿಕ ಕನ್ನಡ ಸಾಹಿತ್ಯದ ಇತಿಹಾಸವನ್ನು ತಿಳಿಯಬೇಕೆನ್ನುವವರಿಗೆ ಎಲ್.ಎಸ್. ಶೇಷಗಿರಿರಾಯರ 'ಹೊಸಗನ್ನಡ ಸಾಹಿತ್ಯ ಚರಿತ್ರೆ' ಒಂದು ಉಪಯುಕ್ತ ಆಕರ ಗ್ರಂಥ.
ಈ ಶತಮಾನದಲ್ಲಿ, ಕನ್ನಡ ಸಾಹಿತ್ಯ ವೈವಿಧ್ಯಮಯವಾಗಿ, ಸಮೃದ್ಧವಾಗಿ ಬೆಳೆದಿದೆ. ಕನ್ನಡ ಸಾಹಿತ್ಯದ ಚರಿತ್ರೆಯಲ್ಲಿ ಯಾವ ಒಂದು ಶತಮಾನದಲ್ಲೂ, ಈ ಬಗೆಯ ವೈವಿಧ್ಯಮಯ ಸೃಷ್ಟಿಯನ್ನು, ಇಷ್ಟೊಂದು ಎತ್ತರದ ಪ್ರತಿಭೆಗಳನ್ನು ಕಾಣುವುದಿಲ್ಲ. ಅಷ್ಟೊಂದು ವಿಸ್ತಾರ, ವೈವಿಧ್ಯ, ಆಧುನಿಕ ಕನ್ನಡ ಸಾಹಿತ್ಯದ್ದು. ಇದನ್ನು ಸಮಗ್ರವಾಗಿ ಹಿಡಿದಿಡುವುದು ಅಸಾಮಾನ್ಯ ಸಾಹಸದ ಕೆಲಸವೇ ಸರಿ. ಶೇಷಗಿರಿರಾಯರು ಈ ಸವಾಲನ್ನು ಒಪ್ಪಿಕೊಂಡು, ಹೊಸಗನ್ನಡ ಸಾಹಿತ್ಯದ ಇತಿಹಾಸವನ್ನು ಅದರ ಚಾರಿತ್ರಿಕ, ಸಾಂಸ್ಕೃತಿಕ ಹಿನ್ನೆಲೆಯೊಂದಿಗೆ ಸಮರ್ಥವಾಗಿ ದಾಖಲಿಸಿದ್ದಾರೆ. ಅವರ ವಿಸ್ತಾರವಾದ ಅಧ್ಯಯನ, ವಿಶ್ಲೇಷಣಾತ್ಮಕ ಒಳನೋಟ, ಪರಿಪಕ್ವ ಮನಸ್ಸಿನ ಪ್ರಸನ್ನತೆ-ಪರಿಚಯಾತ್ಮಕ ರೂಪದ ಈ ಬರವಣಿಗೆಗೆ ಪ್ರಬುದ್ಧತೆಯನ್ನು ತಂದುಕೊಟ್ಟಿದೆ. ಈ ಕೃತಿಯ ರಚನೆಯ ಮೂಲಕ ಶೇಷಗಿರಿರಾಯರು ಸಾಹಿತ್ಯಾಭಿಮಾನಿಗಳೆಲ್ಲರ ಕೃತಜ್ಞತೆಗೆ ಪಾತ್ರರಾಗಿದ್ದಾರೆ.
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)