Skip to product information
1 of 2

Abdul Rasheed

ಹೂವಿನ ಕೊಲ್ಲಿ

ಹೂವಿನ ಕೊಲ್ಲಿ

Publisher - ವೀರಲೋಕ ಬುಕ್ಸ್

Regular price Rs. 270.00
Regular price Rs. 270.00 Sale price Rs. 270.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 236

Type - Paperback

ಕನಸಿನ ತೀವ್ರತೆಯಿಂದ ಇರವನ್ನು ಗ್ರಹಿಸುವ ಮತ್ತು ಕಂಡಿದ್ದನ್ನು ಸಕಲ ಸದ್ದು, ಪರಿಮಳಗಳೊಂದಿಗೆ, ಅದರ ಮೂಕ ಜೀವಾಳವನ್ನು ಕಿಂಚಿತ್ತೂ ಘಾಸಿಗೊಳಿಸದಂತೆ, ಅದೃಶ್ಯದೊಂದಿಗೇ, ಚಲನ ಚಿತ್ರದಂತೆ ಕಟ್ಟಿಕೊಡುವ ಅಬ್ದುಲ್ ರಶೀದನ ಬರವಣಿಗೆಯ ಸೆಳೆತವೇ ವಿಭಿನ್ನ. ಇವನ ಮೊದಲ ಕಾದಂಬರಿ 'ಹೂವಿನ ಕೊಲ್ಲಿ'ಯಲ್ಲಿ ಕಣ್ಣಿಗೆ ಕಾಣುವುದೂ ಮತ್ತು ಮನಗಾಣುವುದೂ ಒಟ್ಟಿಗೇ ಆಗುವ ನಮೂನೆ ವಿಶಿಷ್ಟವಾಗಿದೆ.

ಮಲೆಯ ಮಡಿಲಲ್ಲ ಉಳಿಗಕ್ಕಾಗಿ ವಲಸೆ ಬಂದವರ ಈ ಕಥನದಲ್ಲಿ "ಪಾಲವಾನದ ಗೆಲ್ಲುಗಳು ಒಂದಕ್ಕೊಂದು ಉಜ್ಜುವ ಸದ್ದು" ಮತ್ತು ಮಾಡಿನ ಗಾಜಿನಿಂದ ಕೋಣೆಯಲ್ಲಿ ತುಂಬಿಕೊಳ್ಳುವ ಬೆಳದಿಂಗಳು, ಮಕ್ಕಳು ಉಸಿರಾಡುವ ಸದ್ದು". ಬೇರೆಯಲ್ಲ, ಗೇರು ಬೀಜ ಸುಡುವ ಪರಿಮಳ' ಮತ್ತು ಹಾಜಿರಾಳ ಮುದ್ದು ಮುಖದಲ್ಲಿ ಬೆವರೊಡೆಯುವ ಪರಿಮಳ, ಬೇರೆಯಲ್ಲ, 'ಮೀನು ಹಿಡಿಯುವ ಮರಕಾಲ ಹೆಂಗಸು" ಮತ್ತು "ಸುಮ್ಮನೆ ಹಟ ಮಾಡಿಕೊಂಡು, ಅಲಂಕಾರ ಮಾಡಿಕೊಂಡು ಇರುವ ಜುಲೈಕಾ", ಬೇರೆಯಲ್ಲ. ಎಲ್ಲಂದಲೋ ಬಂದು ಬಣ್ಣ ಬಣ್ಣದ ಕನ್ನಡಿಗಳಿಗೆ ಮುತ್ತಿಡುವ ಜೇನು ಹುಳುಗಳು" ಮತ್ತು "ಶಾಲೆಯ ಮೈದಾನದಲ್ಲಿ ತಿರುಗುತ್ತಿರುವ ಚಿತ್ರದಂತೆ ಒಬ್ಬನೇ ಸೈಕಲ್ ಹೊಡೆಯುವ ಹಾರೂನ್", ಬೇರೆಯಲ್ಲ. ಎಲ್ಲವೂ ಅನನ್ಯ, ಅಭಿನ್ನ. ಪರಿಪೂರಕ.

ಪೊದೆಯೊಳಗಿನ ಹಕ್ಕಿಗಳಂತೆ, ತಮ್ಮದೇ ಪಾಡಿನ ನಿತ್ಯದ ಮಾತುಕತೆಯಲ್ಲಿದ್ದ ಜನ. ಯಾರೋ ಬಂದದ್ದೇ ಏಕ್ ದಂ ಮೌನ ತಾಳುವಂಥ, ಒಂದು ಬಗೆಯ ನೀರವ, ಈ ಕಥನದುದ್ದಕ್ಕೂ ಹೊಮ್ಮಿದೆ. ಆದರೂ ಎಲ್ಲವೂ ತಿಯುವಂತಿದೆ. "ಜೀವಗಳು ಬರುತ್ತವೆ. ಹೋಗುತ್ತವೆ. ಅದಕ್ಕೆಲ್ಲ ಕಾರಣ ಹುಡುಕಲು ಹೋದರೆ ಹುಚ್ಚು ಹಿಡಿಯುತ್ತದೆ ಎನ್ನುವ ಉಸ್ಮಾನ್ ರೈಟರ್ ಮತ್ತು ಹೆಂಗಸರು ಮರ ಹತ್ತಿ ಗಂಡಸರು ಒಲೆ ಊದಿ ಎಲ್ಲ ತಲೆಕೆಳಗಾಗಿ ಪ್ರಳಯವಾಗುವುದು"- ಎನ್ನುವ ಹಾಜಮ್ಮರ ನಡುವೆ ನಿಂತು "ಹೂವಿನ ಕೊಲ್ಲಿ"ಯ ಜೀವ, ದೂರದ ಚಡಾವು ಹತ್ತಿ ಬರುವ ಲಾರಿಯ ಸದ್ದು ಆಲಿಸುತ್ತ, ಗಾಳಿಗೆ ಅಲ್ಲಾಡುವ ಗೋಡೆಯಲ್ಲಿನ ಬೆಕ್ಕಿನ ಚಿತ್ರವನ್ನು ನೋಡುತ್ತದೆ.

ಒಲೆಯ ಬೆಳಕಿನ ಕಾವಿನಲ್ಲಿ ಹೊಳೆವ ಅಪಾರ ಮುಖಗಳ ಲೋಕ ಇದು. ಮಳೆಯಲ್ಲಿ ನೆರಳಿನಂತೆ ನಡೆವ ಲೋಕ. "ಸೂಫಿ ಸಂತನ ಬಳಿ ಹೋಗಿ, ಕನಸಿನಲ್ಲಿ ಕಾಯಿಲೆ ಗುಣಪಡಿಸಿಕೊಂಡು ಬರುವ " - ಪ್ರಸ್ತಾಪ ಒಂದು ಕಡೆ ಬರುತ್ತದೆ. ಈ ಕಾದಂಬರಿಯ ಓದಿಗೂ ಅದೊಂದು ರೂಪಕವಾದೀತು! ಇದಕ್ಕಾಗಿ ರಶೀದನನ್ನು ಅಭಿಮಾನದಿಂದ ಅಭಿನಂದಿಸುತ್ತೇನೆ.

- ಜಯಂತ ಕಾಯ್ಕಿಣಿ

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)