Skip to product information
1 of 2

Dr. Ravishankara. G. K.

ಹೊಳೆಯ ಮೇಲಿನ ಮಳೆ

ಹೊಳೆಯ ಮೇಲಿನ ಮಳೆ

Publisher - ಸಾಹಿತ್ಯ ಭಂಡಾರ

Regular price Rs. 300.00
Regular price Rs. 300.00 Sale price Rs. 300.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 248

Type - Hardcover

Gift Wrap
Gift Wrap Rs. 15.00

ಕನ್ನಡದ ಹಿರಿಯ ಸಾಹಿತಿ ಡಾ. ನಾ. ಮೊಗಸಾಲೆಯವರು (೧೯೪೪) ಎಂಬತ್ತು ವರ್ಷಗಳ ಪಯಣವನ್ನು ಮುಗಿಸಿ, ಬಯಲ ಬೆಟ್ಟದ ಅಡಿಯ ಮರದ ನೆರಳಲ್ಲಿ ಕುಳಿತು, ಮುಂದಡಿಯಿಡುವ ಮುನ್ನ ಹೊಳೆಯ ಮೇಲೆ ಬೀಳುತ್ತಿರುವ ಮಳೆಯನ್ನು ಸಾರ್ಥಕ ಭಾವದಿಂದ ಅವಲೋಕಿಸುತ್ತಿರುವ ಈ ತಂಪುಹೊತ್ತಿನಲ್ಲಿ ಹೊಸ ತಲೆಮಾರಿನ ಪ್ರತಿಭಾವಂತ ಸಾಹಿತ್ಯ ಚಿಂತಕ ಡಾ. ರವಿಶಂಕರ ಜಿ.ಕೆ. ಅವರು ಹಿರಿಯ ಸಾಹಿತಿಯ ಪಯಣದ ಕಥೆಯನ್ನು ಇಲ್ಲಿ ಹೀಗೆ ಗ್ರಥಿಸಿದ್ದಾರೆ. ವೈದ್ಯಾಧಿಕಾರಿಯಾಗಿ ಕಾಂತಾವರಕ್ಕೆ ಬಂದ ಮೊಗಸಾಲೆಯವರು ಕನ್ನಡ ಸಂಘ, ವರ್ಧಮಾನ ಪ್ರಶಸ್ತಿ ಪೀಠ, ಮತ್ತು ಅಲ್ಲಮಪ್ರಭು ಪೀಠದಂತಹ ಸಂಸ್ಥೆಗಳನ್ನು ಕಟ್ಟಿ ಈ ನಾಡಿನಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿಗಳನ್ನು ಪೋಷಿಸಿದವರು. ಇಪ್ಪತ್ತನಾಲ್ಕು ಕಾದಂಬರಿ, ಹದಿಮೂರು ಕವನ ಸಂಗ್ರಹ, ಏಳು ಕಥಾಸಂಗ್ರಹಗಳನ್ನು ಪ್ರಕಟಿಸಿದವರು. ದ.ಕ., ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಬದುಕನ್ನು ಅವರಂತೆ ಕೃತಿರೂಪದಲ್ಲಿ ದಾಖಲಿಸಿಟ್ಟ ಮತ್ತೊಬ್ಬರಿಲ್ಲ. ಇವೆಲ್ಲವನ್ನು ಒಂದು ಶಿಸ್ತಿನಲ್ಲಿ ಗ್ರಹಿಸಿ ಬರೆದಿಡುವ ಕೆಲಸವನ್ನು ಮಾಡಬೇಕಾದ ಮುಂದಿನ ತಲೆಮಾರಿನ ಕರ್ತವ್ಯವನ್ನು ಇಲ್ಲಿ ಸಮೀಚೀನವಾಗಿ ನಿರ್ವಹಿಸಿರುವ ಡಾ. ರವಿಶಂಕರ ಜಿ.ಕೆ. (೧೯೯೧) ಅವರು ಉಜಿರೆಯ ಎಸ್.ಡಿ.ಎಂ. ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡವರು. 'ನೇತ್ರದಂದದೆ ನೋಟ' ಅವರ ಪ್ರಮುಖ ವಿಮರ್ಶಾ ಲೇಖನಗಳ ಸಂಕಲನ. ಇವರು ಮೊಗಸಾಲೆಯವರ 'ಮುಖಾಂತರ' ಕಾದಂಬರಿಯನ್ನು ಸಂಕ್ಷೇಪಗೊಳಿಸಿ ಪ್ರಕಟಿಸಿದ್ದಾರೆ. ಡಾ.ಹರಿಕೃಷ್ಣ ಭರಣ್ಯ ಮತ್ತು ಡಾ.ವಿಶ್ವೇಶ್ವರ ವರ್ಮುಡಿಯವರ ಕುರಿತು ಮೊನೋಗ್ರಾಫ್ ಗಳನ್ನು ಬರೆದಿದ್ದಾರೆ. ಪ್ರಸ್ತುತ ಕೃತಿ 'ಹೊಳೆಯ ಮೇಲಿನ ಮಳೆ' ಕನ್ನಡದಲ್ಲಿ ಹೆಚ್ಚಬೇಕಾದ ಸಮಗ್ರ ಅಧ್ಯಯನ ಮಾದರಿಯ ಕೃತಿಗಳಲ್ಲಿ ಒಂದು ಗಮನಾರ್ಹ ಕೃತಿಯಾಗಿ ಬೆಲೆಯುಳ್ಳದ್ದಾಗಿದೆ.

-ಡಾ. ಬಿ. ಜನಾರ್ದನ ಭಟ್ 


View full details