Skip to product information
1 of 2

Bidarahalli Narasimhamurthy

ಹೊಳೆಮಕ್ಕಳು

ಹೊಳೆಮಕ್ಕಳು

Publisher - ಮನೋಹರ ಗ್ರಂಥಮಾಲಾ

Regular price Rs. 200.00
Regular price Rs. 200.00 Sale price Rs. 200.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 266

Type - Paperback

Gift Wrap
Gift Wrap Rs. 15.00

ಕಾಯುವ ತನಕ ಕಾದು ಅಲ್ಲಾಮ ಬಾನ್ಸುರಿ ತುಟಿಗಿಟ್ಟು ಗುರುದಂಪತಿಯನ್ನು ಸ್ಮರಿಸಿ, ಮಾಲಕೌಂಸ್ ರಾಗವನ್ನು ಆಲಾಪಿಸಲು ಶುರುಮಾಡಿದ. ದಡದ ಮರಗಿಡಗಂಟಿ ನಿದ್ದೆ ಕೊಡವಿದವು, ನದಿ ನವಿರೆದ್ದಿತು. ಆಕಾಶ ಆಹ್ಲಾದಗೊಂಡಿತು. ಚಂದ್ರಬಿಂಬ ನಾದಸ್ವಾದ ಹೀರಿ ಹಿಗ್ಗಿತು. ಬಾನ್ಸುರಿಯ ರಾಗ ದ್ರುತಗತಿ ಹಿಡಿದು ಸಂಗಮನಾದಿಯಾಗಿ ಕೇಳುತ್ತಿದ್ದ ಚರಾಚರ ವಸ್ತುಗಳೆಲ್ಲವೂ ಒಳಗೊಳಗೇ ಕುಣಿಯತೊಡಗಿದಾಗ ಇನ್ನು ತಡೆದುಕೊಳ್ಳಲಾರೆ ಎಂಬಂತೆ ಛಂಗನೆ ನೀರಿನಿಂದ ಚಿಮ್ಮಿ ನಿಂತಿತು ನೀರಿಂಜೀವ ಹಲ್ಲು ಹುಟ್ಟದ ಹಸಳೆಯಂತೆ ಹಾಲೊಸಡು ತೋರಿ ರೆಕ್ಕೆಗೈ ಬೀಸಿತು. ಸಂಗಮ ಸಡಗರದಿಂದ ನೀರೊಳಗೆ ನುಗ್ಗಿ ಕೈ ಚಾಚಿ ಆ ನಿಗೂಢ ಜಾರುಮೈ ಜೀವಿಯನ್ನು ತಬ್ಬಿಕೊಳ್ಳುತ್ತಿದ್ದಂತೆ ಅದು ಮೈ ಮರೆತು ಮನಸ್ಸಿಲ್ಲದ ಮನುಷ್ಯರೆ ಇಲ್ಲವಲ್ಲ, ಸಿಕ್ಕದ್ದನ್ನೆಲ್ಲ ಮೇಯಿಸುತ್ತಾರಲ್ಲ ಮನಸ್ಸಿಗೆ ಎಂದು ಅಚ್ಚರಿ ಪಟ್ಟು ಅವನ ಮನಸ್ಸನ್ನು ಮೀಯಿಸತೊಡಗಿತು...

ಅಲ್ಲಾಮ ಇನ್ನೂ ಕಣ್ಣುಮುಚ್ಚಿ ತನ್ಮಯನಾಗಿ ತನ್ನ ಪಲಕುಗಳಿಗೆ ತಾನೆ ತಲೆದೂಗು ಬಾನ್ಸುರಿ ಬಾರಿಸುತ್ತಲೇ ಇದ್ದ. ಹೊಳೆಜಳಕ ನಾದಪುಳಕ ಒಂದರೊಳಗೊಂದು ಹಾಸುಹೊಕ್ಕಂತೆ ನಾದವೆ ನೀರಿಂಜೀವವಾಗಿ ಅಲ್ಲಾಮನನ್ನು ಮೀಯಿಸಿದರೆ, ಹೊಳೆಯೆ ರಾಗರಸವಾಗಿ ಸಂಗಮನನ್ನು ಪುಳಕಗೊಳಿಸಿತು. ಅದೇ ಅದೇ ಆವರ್ತನಗಳಲ್ಲಿ ಅನುರಣಿಸುತ್ತ ರಾಗ ಷಡ್ಡಸ್ಥಾಯಿಗೆ ಬರುತ್ತಿದ್ದಂತೆ ಕಣ್ಣುಬಿಟ್ಟ ಅಲ್ಲಾಮ ಬಾನ್ಸುರಿ ಭಾರತಿ ಬಳಿಯಲ್ಲಿ ಇಟ್ಟು ನೀರೊಳಗೆ ನಿಧಾನವಾಗಿ ಸಾಗಿ ನೀರಿಂಜೀವದ ಮುಸುಡಿ ಎತ್ತಿ ಹಿಡಿದು ಅದರ ಕಣ್ಣಲ್ಲಿ ಕಣ್ಣಿಟ್ಟ. ಅದು ತಪ್ಪಿಸಿಕೊಂಡು ಅವನ ಕೆನ್ನೆಗೆ ಲೊಚಲೊಚ ಮುತ್ತಿಕ್ಕಿತು. ಬೆಳದಿಂಗಳ ಕೊನೆಜಾವದ ಕುಳಿರ್ಗಾಳಿ ಹೀರಿಕೊಂಡ ಹೊಳೆ ಮೂವರನ್ನೂ ನಿರ್ಮಲಾನಂದದ ತೆಕ್ಕೆಯಲ್ಲಿ ಬಂಧಿಸಿತು.

ಮೆಲ್ಲಮೆಲ್ಲಗೆ ಚುಮು ಚುಮು ಬೆಳಕಾಗಿ ಒಂದೆಡೆ ಮುಳುಗುವ ಚಂದ್ರ ಇನ್ನೊಂದೆಡೆ ಮೂಡುವ ಸೂರ್ಯ ಮುಗುಳು ನಕ್ಕರು.

-(ಕಾದಂಬರಿಯಿಂದ)

View full details