Shatavadhani Dr. R. Ganesh
ಹೊಕ್ಕುಳ ಬಳ್ಳಿಯ ಸಂಬಂಧ'
ಹೊಕ್ಕುಳ ಬಳ್ಳಿಯ ಸಂಬಂಧ'
Publisher - ವಸಂತ ಪ್ರಕಾಶನ
- Free Shipping Above ₹400
- Cash on Delivery (COD) Available*
Pages - 170
Type - Paperback
Couldn't load pickup availability
ಬಹುಭಾಷಾಪ್ರೌಡಿಮೆ. ನನ್ನ ಅತ್ಮೀಯಮಿತ್ರರಾದ ಶತಾವಧಾನಿ ಡಾ. ಆರ್. ಗಣೇಶ್ ಅಸಾಮಾನ್ಯವೈದುಷ್ಯ, ವಿವಿಧಶಾಸ್ತ್ರಪರಿಣತಿ, ಅವಧಾನಸಾಧನೌನ್ನತ್ಯ - ಇವೆಲ್ಲ ಈಗಾಗಲೇ ವಿಶ್ರುತವಾಗಿವೆ. ಅವರ ಈ ಸಾಧನೆಯ ಆಗಾಧತೆ ವಿಸ್ಮಯಾವಹವಾಗಿದ್ದು, ಇದನ್ನು ವಿದ್ವಲ್ಲೋಕದ ಅದ್ಭುತವೆಂದೇ ಪರಿಗಣಿಸಬೇಕಾಗಿದೆ. ಇದರಷ್ಟೇ ಗಮನ ಸೆಳೆಯುವುದು ಅವರ ಸಮಾಜಾಭಿಮುಖತೆ. ವಶಕಗಳ ಪರಿಶ್ರಮದಿಂದಲೂ ವಿದ್ವಜ್ಜನರ ಸಂಶ್ರಯದಿಂದಲೂ ಗಳಿಸಿಕೊಂಡ ಪಾಂಡಿತ್ಯವನ್ನು ಅವರು ಸಮಾಜದಲ್ಲಿ ಸಂಸ್ಕೃತಿ ಪ್ರಜ್ಞೆಯನ್ನು ಉತ್ತೇಜಿಸುವುದಕ್ಕಾಗಿಯೂ ಸಾಹಿತ್ಯ-ಕಲಾದಿಕ್ಷೇತ್ರಗಳ ದುಷ್ಟವೃತ್ತಿಗಳ ಖಂಡನೆಗಾಗಿಯೂ ಋಜುಮೌಲ್ಯಗಳ ಪ್ರವರ್ತನೆಗಾಗಿಯೂ ವಿನಿಯೋಗಿಸುತ್ತ ಬಂದಿದ್ದಾರೆ.
ಪ್ರಕೃತಗ್ರಂಥವಾದರೂ ಗಣೇಶ್ ಅವರ ಈ ಸಾಂಸ್ಕೃತಿಕಾಭಿಯಾನದ ಅಂಗವೇ ಆಗಿದೆ. ಮೇಲ್ನೋಟಕ್ಕೆ ಇದು ವಿವಿಧವಿಷಯಗಳ ವೀಥೀವಿಹಾರ, ಒಳಹೂಕ್ಕಾಗ ಈ ಬರೆಹಗಳ ಉದ್ದಕ್ಕೂ ಕಾಣುವುದು ನಮ್ಮ ಸಂಸ್ಕೃತಿಯ ಬೇರುಗಳ ಸಾರವಂತಿಕೆಯ ಅತ್ಮೀಕ್ಷಣ. ಇಲ್ಲಿ ಸಂಪ್ರದಾಯಪಕ್ಷಪಾತವುಂಟು; ಆದರೆ ಸಂಪ್ರದಾಯಜಡತೆ ಇಲ್ಲ.
ಇಲ್ಲಿಯ ಬರೆಹಗಳಲ್ಲಿ ಎದ್ದುತೋರುವುದು ಆರೋಗ್ಯಪೂರ್ಣವಾದ ಜೀವನದೃಷ್ಟಿಯಿಂದ ಚೋದಿತವಾದ ಸಮಾಜಾವಲೋಕನ, ತನುಗುಣವಾದ ಮಾಹಿತಿ, ಸಮೃದ್ಧವಾದ ಸಾಹಿತ್ಯೋಲ್ಲೇಖಗಳ ಮಾಧ್ಯಮದಿಂದ ಸಂಸ್ಕೃತಿಯ ಪರ್ಯವೇಕ್ಷಣ. ಶ್ರೇಷ್ಠಸಾಹಿತ್ಯವಾಗಷ್ಟೇ ಓದಿದರೂ ಈ ಬರೆಹಗಳು ಆಸ್ವಾದನೀಯವೇ. ಆದರೆ ಅದಕ್ಕೂ ಮಿಗಿಲಾಗಿ ಸಮಾಸ್ವಾದ್ಯವಾಗುವುದು ಈ ಬರೆಹಗಳಲ್ಲಿ ಹೊಮ್ಮಿರುವ ಜೀವನದರ್ಶನ.
ಡಾ. ಎಸ್.ಆರ್. ರಾಮಸ್ವಾಮಿ
("ಹೊಕ್ಕುಳಬಳ್ಳಿಯ ಸಂಬಂಧ'ದ ಮುನ್ನುಡಿಯಿಂದ)
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.