N. Gopala Krishna Udupa
Publisher - ಐಬಿಹೆಚ್ ಪ್ರಕಾಶನ
- Free Shipping above ₹1,000
- Cash on Delivery (COD) Available
Pages - 196
Type - Paperback
Couldn't load pickup availability
ಹಲವು ಮೂಲಗಳಿಂದ ಸಂಗ್ರಹಿಸಿದ ಪಶು-ಪಕ್ಷಿ-ಮಾನವರಿಗೆ ಸಂಬಂಧಿಸಿದ ಕಥೆಗಳ ಸಂಗ್ರಹ 'ಹಿರಿಯರು ಹೇಳಿದ ಕೆಲವು ಕಥೆಗಳು'. ಇಲ್ಲಿರುವ ಕಥೆಗಳಲ್ಲಿ ನೀತಿ ಇದೆ ಮಾರ್ಗದರ್ಶನವಿದೆ, ರಂಜನೆ ಇದೆ. ಬುದ್ಧಿವಂತಿಕೆಯಿಂದ ಸಂದರ್ಭದ ಸದುಪಯೋಗ ಪಡೆದರೆ ಏನನ್ನಾದರೂ ಸಾಧಿಸಬಹುದು ಎನ್ನುವುದನ್ನು 'ಜಾಣತನ ಹಾಗೂ ಅದ್ಭುತ ಸಾಧನೆ” ಕಥೆಯಲ್ಲಿ ನಿರೂಪಿಸಲಾಗಿದೆ. ತಾವೇ ಅತಿಬುದ್ಧಿವಂತರೆಂದು ತಿಳಿದುಕೊಂಡು ಬೇರೆಯವರಿಗೆ ಮೋಸ ಮಾಡುತ್ತಿದ್ದವರು ಪಾಠ ಕಲಿತ ಕಥೆ 'ಮೂವರು ಮೋಸಗಾರ ಸೋದರರು'. ಮಗನೇ ತಂದೆಯ ಕಣ್ತೆರೆಸಿದ ಕಥೆ 'ಗೋರಿಗಳು'. ಒಂದು ಅವಮಾನದ ಮಾತು ಬದುಕನ್ನೇ ಹೇಗೆ ಬದಲಿಸಬಹುದೆಂಬುದನ್ನು 'ಕಹಿನುಡಿ' ಕಥೆ ವಿವರಿಸುತ್ತದೆ. ಆಹಾರದ ಆಸೆಗಾಗಿ ದಾರಿ ತಪ್ಪಿದುದರ ಪರಿಣಾಮವನ್ನು 'ದುರಾಸೆಯ ಕಾಗೆ'ಯಲ್ಲಿ ಕಾಣಬಹುದು. ಸಾಮರ್ಥ್ಯವನ್ನು ಅರಿಯದ ಅಹಂಕಾರದಿಂದಾಗುವ ಅನರ್ಥವನ್ನು 'ನರಿಯ ಅಹಂಕಾರ' ತೋರಿಸುತ್ತದೆ. ಹೀಗೆ ಇಲ್ಲಿರುವ ಪ್ರತಿಯೊಂದು ಕಥೆ ರಂಜನೆಯೊಂದಿಗೆ ನೀತಿಬೋಧಕವಾಗಿದೆ.
