Skip to product information
1 of 1

G. M. K.

ಹಿರಿಯ ರಾಣಿ ಕೌಸಲ್ಯಾದೇವಿ ಮತ್ತು ಕಿರಿಯ ರಾಣಿ ಕೈಕೇಯಿದೇವಿ

ಹಿರಿಯ ರಾಣಿ ಕೌಸಲ್ಯಾದೇವಿ ಮತ್ತು ಕಿರಿಯ ರಾಣಿ ಕೈಕೇಯಿದೇವಿ

Publisher -

Regular price Rs. 25.00
Regular price Rs. 25.00 Sale price Rs. 25.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ನಮ್ಮ ದೇಶದ ಆದಿಕಾವ್ಯ 'ರಾಮಾಯಣ', ಪರಕೀಯರ ದಾಳಿಯ ಕಾಲದಲ್ಲಿ ಕೂಡ ನಮ್ಮಲ್ಲಿ ರಾಷ್ಟ್ರ ಪ್ರಜ್ಞೆಯನ್ನು ಹೆಚ್ಚಿಸಲು ಸಹಾಯ ಮಾಡಿದ ಮಹಾ ಕೃತಿಗಳೆಂದರೆ 'ರಾಮಾಯಣ' ಮತ್ತು 'ಮಹಾಭಾರತ', 'ಈ ಭೂಮಿಯ ಮೇಲೆ ನದಿಗಳು ಹರಿಯುತ್ತಿರುವಷ್ಟು ಕಾಲ, ಗಿರಿಗಳು ನಿಂತಿರುವಷ್ಟು ಕಾಲ ರಾಮಾಯಣ ಪ್ರಚಲಿತವಾಗಿರುತ್ತದೆ' ಎಂದು ಈ ಮಹಾನ್ ಕೃತಿಯನ್ನು ರಚಿಸುವಂತೆ ವಾಲ್ಮೀಕಿ ಮಹರ್ಷಿಗಳಿಗೆ ಸೂಚಿಸಿದ ಸಂದರ್ಭದಲ್ಲಿ ಸೃಷ್ಟಿಕರ್ತ ಬ್ರಹ್ಮ ಹೇಳಿದ್ದ. ರಾಮಾಯಣವನ್ನೋದಿ ಅದರ ಕಾವ್ಯ ಶಕ್ತಿಯನ್ನು ಅರಿತಾಗ 'ಆದಿಕಾವ್ಯ'ವೆಂಬ ಹೆಸರು ಈ ಮಹಾನ್ ಕೃತಿಗೆ ಚೆನ್ನಾಗಿ ಒಪ್ಪುತ್ತದೆ. ಇದು ಕೇವಲ ಅದಿಕಾವ್ಯವಲ್ಲ `ಅಮರ ಕಾವ್ಯ' ಕೂಡಾ ಆಗಿದೆ. ನಮ್ಮ ಇನ್ನೊಂದು ಮಹಾಕಾವ್ಯ 'ಮಹಾಭಾರತ' ಕ್ಕಿಂತ ಮುಂಚೆ ರಾಮಾಯಣ ರಚಿತವಾಗಿರಬೇಕು ಎಂದು ವಿದ್ವಾಂಸರು ಭಾವಿಸಿದ್ದಾರೆ. ವಾಲ್ಮೀಕಿ ಮಹರ್ಷಿ ರಚಿಸಿದ್ದ ಮೂಲ ಕೃತಿಯಲ್ಲಿ ಆರು ಕಾಂಡಗಳಿದ್ದು (ಬಾಲಕಾಂಡ, ಅಯೋಧ್ಯಾಕಾಂಡ, ಅರಣ್ಯಕಾಂಡ, ಕಿಷ್ಕಂಧಾಕಾಂಡ, ಸುಂದರಕಾಂಡ ಮತ್ತು ಯುದ್ಧ ಕಾಂಡ) ಏಳನೆಯ ಕಾಂಡವೆಂದು ಭಾವಿಸಲಾಗಿರುವ “ಉತ್ತರಕಾಂಡ" ಮೂಲ ಗ್ರಂಥ ರಚನೆಯಾದ ಮೇಲೆ ಯಾರೋ ಸೇರಿಸಿದರೆಂದು ವಿದ್ವಾಂಸರು ಭಾವಿಸಿದ್ದಾರೆ. 'ರಾಮಾಯಣದಲ್ಲಿ ಬರುವ ಒಂದೊಂದು ಪಾತ್ರವೂ ಒಂದಲ್ಲ ಒಂದು ರೀತಿಯಲ್ಲಿ ಆಕರ್ಷಕ, ಅಪೂರ್ವ, ಆ ಮಹಾಪುರುಷರ ವಿವೇಕ, ಆದರ್ಶ ನಮ್ಮ ಮನಸ್ಸನ್ನು ಸೆರೆಹಿಡಿಯುತ್ತವೆ. ದುಷ್ಟ ಪಾತ್ರಗಳು ನಮ್ಮನ್ನು ಅಡ್ಡದಾರಿ ಹಿಡಿಯದಂತೆ ಎಚ್ಚರ ಕೊಡುತ್ತವೆ. `ರಾಮಾಯಣ' ಎತ್ತರವಾಗಿ ಬೆಳೆದು ಗಂಭೀರವಾಗಿ ನಿಂತಿರುವ ಪವಿತ್ರ ವೃಕ್ಷ' ಎಂದಿದ್ದಾರೆ ಹಿರಿಯ ಕವಿ ದೇವುಡು.

ವಾಲ್ಮೀಕಿ ರಾಮಾಯಣದ ಆರು ಕಾಂಡಗಳಲ್ಲಿ ವಿಕೃತವಾಗಿ ನಿರೂಪಿಸಲ್ಪಟ್ಟಿರುವ ಸಂಗತಿಗಳನ್ನು ಆಯಾ ಪಾತ್ರಗಳಿಗೆ ಸಂಬಂಧಿಸಿದಂತೆ ಸಂಕ್ಷಿಪ್ತವಾಗಿ ನಿರೂಪಿಸಲು ಪ್ರಯತ್ನಿಸಲಾಗಿದೆ. ಮಾನ್ಯ ಓದುಗರು ಈ ಕೃತಿ ಮಾಲಿಕೆಯನ್ನು ಆದರದಿಂದ ಸ್ವೀಕರಿಸುವರೆಂಬ ನಂಬಿಕೆ ನಮ್ಮದು.

-ಪ್ರಕಾಶಕರು
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)