Swamy Rama
ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ
ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ
Publisher -
- Free Shipping Above ₹250
- Cash on Delivery (COD) Available
Pages - 528
Type - Paperback
ಇದು ಒಂದು ಅಪೂರ್ವ ತರಹದ ಅನುಭವ ಕಥನ. ಇಲ್ಲಿ ಸ್ವಾಮಿ ರಾಮ ಅವರು ತಮ್ಮ ಜೀವನದಲ್ಲಿ ಆದ ಅನೇಕ ಘಟನೆಗಳನ್ನು ದಾಖಲಿಸಲಾಗಿದೆ. ಇದು ಸ್ವಾಮಿ ರಾಮರ ಜೀವನದಲ್ಲಿ ನಡೆದ ಘಟನೆಗಳಾದರೂ, ಅವರ ಜೀವನ ಚರಿತ್ರೆ ಅಲ್ಲ. ಈ ಪುಸ್ತಕದ ಶೀರ್ಷಿಕೆ ಸೂಚಿಸುವಂತೆ ಸ್ವಾಮಿ ರಾಮರು ಹಿಮಾಲಯದಲ್ಲಿ ಭೇಟಿಯಾದ ಬಗೆ ಬಗೆಯ ಸಂತರ, ಯೋಗಿಗಳ ಜೀವನ ಚಿತ್ರಣ.
ಈ ಪುಸ್ತಕದ ಆಕರ್ಷಣೆ ಎಂದರೆ ಆದರ ಮರಳು ಮಾಡುವಂತಹ ಸರಳತೆ ಮತ್ತು ತಾಜಾತನ. ಬಹಳ ಕಡಿಮೆ ಸಂದರ್ಭದಲ್ಲಿ ಸ್ವಾಮೀಜಿ ತಮ್ಮ ಹೆಗ್ಗಳಿಕೆಯ ಮಾತನ್ನು ಹೇಳುತ್ತಾರೆ. ಹಾಗೆಯೇ ತಾವು ಅನುಭವಿಸಿದ ದ್ವಂದ್ವಗಳನ್ನು, ವೈಫಲ್ಯಗಳನ್ನು ಪ್ರಾಮಾಣಿಕತೆಯಿಂದ ಬಿಚ್ಚಿಡುತ್ತಾರೆ. ಇದರಿಂದಾಗಿ ಕಥೆ ತನ್ನದೇ ಗತಿಯನ್ನು ಪಡೆದುಕೊಂಡು ನಿರಾಯಾಸವಾಗಿ ಓದಿಸಿಕೊಂಡು ಹೋಗುತ್ತದೆ. ಇಡೀ ಪುಸ್ತಕ ಓದಿದಾಗ, ನಮಗೆ ತಿಳಿದಿರುವ, ನಮ್ಮ ಅರಿವಿನಲ್ಲಿರುವ ಒಣ ಪ್ರಪಂಚಕ್ಕಿಂತ ಬೇರೆಯಾದದ್ದು ಏನೋ ಇದೆ ಎಂಬ ವಿಚಾರದ ಸುಳಿವು, ಹಿಮಾಲಯಗಳ ಬಗ್ಗೆ ಅದರಲ್ಲಿ, ಅದರ ಸುತ್ತ ವಾಸವಾಗಿರುವ ಅನೇಕ ಯೋಗಿಗಳ ಬಗ್ಗೆ ಒಂದು ರಮ್ಯತೆಯನ್ನು, ಸಾವನ್ನು ಮೀರಿದ ಅಸ್ತಿತ್ವದ ಬಗ್ಗೆ ಆಶೆಯ ಭಾವನೆಯನ್ನು ಪಡೆಯುವುದರಲ್ಲಿ ಸಹಾಯ ಮಾಡುತ್ತವೆ.
Share
ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ
Subscribe to our emails
Subscribe to our mailing list for insider news, product launches, and more.