Jyothi Pattabhiram
ಹಿಮಾಲಯ ಋಷಿಗಳ ದಿವ್ಯ ಸಂದೇಶಗಳು
ಹಿಮಾಲಯ ಋಷಿಗಳ ದಿವ್ಯ ಸಂದೇಶಗಳು
Publisher - ಸಾಹಿತ್ಯ ಲೋಕ ಪ್ರಕಾಶನ
- Free Shipping Above ₹250
- Cash on Delivery (COD) Available
Pages - 336
Type - Paperback
ದೇಹ ಅಳಿದು ಹಲವು ವರ್ಷಗಳಾದರೂ ನೆನೆದಾಗ ಕಾಣಿಸಿಕೊಂಡು ಮಾರ್ಗದರ್ಶನ ಮಾಡುವ ಹಿಮಾಲಯದ ಯೋಗಿ ಸ್ವಾಮಿ ರಾಮ. ತಮಿಳುನಾಡಿನ ಪ್ರಾಚೀನ ದೇವಾಲಯದಲ್ಲಿ ಕಾಣಿಸಿಕೊಂಡು ಆಧ್ಯಾತ್ಮಿಕ ರಹಸ್ಯಪಥ ಚಂದ್ರವಿದ್ಯೆಯ ಕುರುಹು ತೋರಿದ ಋಷಿ ಅಗಸ್ತರು. ರೈಲಿನಲ್ಲಿ ಕಾಣಿಸಿಕೊಂಡು ಎಚ್ಚರಿಸಿದ ಪರಮಹಂಸ ಯೋಗಾನಂದರು. ಕೋಪವಿಲ್ಲದ ಕರುಣಾಮೂರ್ತಿಯಾಗಿ ಕಾಣಿಸಿಕೊಳ್ಳುವ ಅತ್ರಿನಂದನ ಮುನಿ ದುರ್ವಾಸರು. ಅಕ್ಷರಶಃ ರುಂಡ ಕಡಿದ ಅನುಭವ ದಯಪಾಲಿಸುವ ಅನ್ನಮಸ್ತಾ ದೇವಿಯ ರಹಸ್ಯ-ಹೀಗೆ ಮೈ ನವಿರೇಳಿಸುವ ಆಧ್ಯಾತ್ಮಿಕ ಅನುಭವಗಳು ಈ ಕೃತಿಯಲ್ಲಿ ಸಾಲುಗಟ್ಟಿ ಬರುತ್ತವೆ. ಕರ್ನಾಟಕದ ಮಲೆನಾಡಿನ ಸಾಮಾನ್ಯ ಕುಟುಂಬವೊಂದರಲ್ಲಿ ಜನಿಸಿದ ಹೆಣ್ಣು ಮಗಳು ಹಿಮಾಲಯದ ಯೋಗಿಗಳ ಶಿಷ್ಯೆಯಾಗಿ, ಅಧ್ಯಾತ್ಮ ಸಾಧಕಿಯಾಗಿ, ಶ್ರೀವಿದ್ಯೆಯ ಶ್ರೇಷ್ಠ ಗುರುವಾಗಿ ಹೊಮ್ಮಿದ ಕಥನ ಈ ಪುಸ್ತಕದಲ್ಲಿದೆ.
ಉತ್ತರದ ಹಿಮಾಲಯ ಭಾರತೀ ಋಷಿ ಪರಂಪರೆ ಹಾಗೂ ದಕ್ಷಿಣದ ವಿದ್ಯಾರಣ್ಯ ಗುರು ಪರಂಪರೆಗಳ ಸಂಗಮವಾಗಿರುವ ಶ್ರೀ ಗುರು ಸಕಲಮಾ, ಸಾವಿರಾರು ಶಿಷ್ಯರಿಗೆ ಶ್ರೀವಿದ್ಯಾ ದೀಕ್ಷೆ ನೀಡಿ ಲೌಕಿಕ-ಅಲೌಕಿಕ ಬಾಳನ್ನು ಬೆಳಗಿದವರು. ಜ್ಯೋತಿ ಪಟ್ಟಾಭಿರಾಮ್ ಎಂಬ ಮೂಲ ಹೆಸರಿನ ಇವರಿಗೆ ಪೂರ್ಣಶಕ್ತ್ಯಾಂಬಾ ಎಂಬುದು ವಿದ್ಯಾರಣ್ಯ ಪರಂಪರೆಯ ಮೈಸೂರಿನ ಸತ್ಯಾನಂದನಾಥ ಗುರುಗಳು ನೀಡಿದ ದೀಕ್ಷಾನಾಮ. ದೇಶ- ವಿದೇಶಗಳಲ್ಲಿ ಸಾವಿರಾರು ಶಿಷ್ಯರನ್ನು ಹೊಂದಿರುವ ಸಕಲಮಾ, ಶ್ರೀವಿದ್ಯೆ-ಚಂದ್ರವಿದ್ಯೆಗಳ ಮೂಲಕ ಆಧ್ಯಾತ್ಮಿಕ ಸಾಧಕರ ಅರಿವಿನ ಕಣ್ಣನ್ನು ತೆರೆಸುವ ಕಾಯಕದಲ್ಲಿ ನಿರತರಾಗಿದ್ದಾರೆ. ತಮ್ಮ ದೈವಿಕ ಸಾಧನೆಯ ಪಥದಲ್ಲಿ ಅವರು ಕಂಡುಂಡ ಹಲವು ಅನುಭವಗಳು, ಭೇಟಿ ಮಾಡಿದ ಯೋಗಿಗಳು, ಋಷಿಗಳು, ಸಾಧಿಸಿದ ಸಿದ್ಧಿಗಳು ಹೀಗೆ ಇವೆಲ್ಲದರ ರಸಪಾಕವೇ ಈ ಕೃತಿ.
Share
Subscribe to our emails
Subscribe to our mailing list for insider news, product launches, and more.