Skip to product information
1 of 1

Dr. Mahabaleshwara Rao

ಹೆತ್ತವರೇ, ಮಕ್ಕಳ ಬಗ್ಗೆ ಕಾಳಜಿ ವಹಿಸಿ

ಹೆತ್ತವರೇ, ಮಕ್ಕಳ ಬಗ್ಗೆ ಕಾಳಜಿ ವಹಿಸಿ

Publisher - ಸಾವಣ್ಣ ಪ್ರಕಾಶನ

Regular price Rs. 200.00
Regular price Rs. 200.00 Sale price Rs. 200.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಕೇವಲ ಹೆತ್ತವರಾಗಬೇಡಿ; ಹೃದಯವಂತ ಹೆತ್ತವರಾಗಿರಿ

ಮಕ್ಕಳು ಸಂತೋಷದಿಂದಿರಬೇಕು, ಸುರಕ್ಷಿತವಾಗಿರಬೇಕು ಎಂದು ಹೆತ್ತವರು ಬಯಸುತ್ತಾರೆ. ಯಾವುದೇ ತಂದೆ ತಾಯಿ ಉದ್ದೇಶ ಪೂರ್ವಕವಾಗಿ ಮಕ್ಕಳಿಗೆ ಕಿರುಕುಳ, ಹಿಂಸೆ, ನೋವು ಕೊಡುವುದಿಲ್ಲ. ಆದರೆ ಬೆಳವಣಿಗೆಯ ಪ್ರಕ್ರಿಯೆಯಲ್ಲಿ ತೋಲ ತಪ್ಪಿದ ಸಂವಹನದಿಂದ ಮಕ್ಕಳ ಹಾಗೂ ಹೆತ್ತವರ ಬಾಳು ಗೋಳಾಗುತ್ತದೆ. ಮನೆ ಕುರುಕ್ಷೇತ್ರವಾಗುತ್ತದೆ. ಮಕ್ಕಳು ವಿಧೇಯರೂ ಸಭ್ಯರೂ ಸಂಸ್ಕಾರವಂತರೂ ಆಗಬೇಕು ಎಂದು ಹಿರಿಯರು ಬಯಸುತ್ತಾರೆ. ಆದರೆ ಬಿರುಕು ಮೂಡಿದ ಸಂವಹನದಿಂದಾಗಿ ಮಕ್ಕಳು ಒರಟರೂ ಅವಿಧೇಯರೂ ಆಗುತ್ತಾರೆ.

ಕರುಣೆ, ಸಹಾನುಭೂತಿ, ಬದ್ಧತೆ ಹಾಗೂ ಧೈಯ್ಯ ಸಾಹಸ ಬೆರೆತ ಮನುಷ್ಯರಾಗಲು ಮಕ್ಕಳಿಗೆ ಹೆತ್ತವರು ಸಹಾಯ ಮಾಡಬಹುದು. ಈ ಮಾನವೀಯ ಗುರಿಗಳ ಸಾಧನೆಗೆ ಹೆತ್ತವರು ಮಾನವೀಯ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು. ಕೇವಲ ಪ್ರೀತಿಯೊಂದೇ ಸಾಲದು; ಜಾಣೆಯೂ ಬೇಕು. ಮಕ್ಕಳು ಹಾಗೂ ಹದಿಹರೆಯದವರ ಜೊತೆಗಿನ ಸಂಬಂಧಗಳನ್ನು ನಿರ್ವಹಣೆ ಮಾಡುವ ಕೌಶಲಗಳನ್ನು ಹೇಗೆ ಕರಗತ ಮಾಡಿಕೊಳ್ಳಬೇಕು ಮತ್ತು ಹೇಗೆ ಬಳಸಿಕೊಳ್ಳಬೇಕು ಎಂಬುದೇ ಈ ಕೃತಿಯ ಸಾರಸರ್ವಸ್ವ ಒಂದು ಸಮಸ್ಯೆಯನ್ನು ಧನಾತ್ಮಕವಾಗಿ ಪರಿಶೀಲಿಸಿದಾಗ ಒದಗಬಹುದಾದ ಧನಾತ್ಮಕ ಪರಿಣಾಮಗಳನ್ನು ಹತ್ತಾರು ನಿದರ್ಶನಗಳ ಮೂಲಕ ಚಿತ್ರಿಸಿದ ಈ ಕೃತಿ ಹೆತ್ತವರ ಪಾಲಿಗೆ ಪ್ರಾಯೋಗಿಕ ಸ್ವರೂಪದ ಅಪೂರ್ವ ಕೈಪಿಡಿ. ಪರಸ್ಪರ ಗೌರವ ಹಾಗೂ ಘನತೆಯೊಂದಿಗೆ ಮಕ್ಕಳ ಜೊತೆ ಬದುಕಲು ಬಯಸುವ ಹೆತ್ತವರಿಗೆ ಈ ಕೃತಿಯು ಮೂಲಭೂತ ಸಂವಹನ ತತ್ವಗಳನ್ನು ಆಧರಿಸಿದ ನಿರ್ದಿಷ್ಟ ಸಲಹೆ ಸೂಚನೆಗಳನ್ನು ನೀಡುತ್ತದೆ. ಖ್ಯಾತ ಚಿಕಿತ್ಸಕ ಮನೋವಿಜ್ಞಾನಿ ಡಾ. ಹೈಮ್‌ಜಿನೋ ಅವರ ಗ್ರಂಥಗಳಿಂದ ಪ್ರಭಾವಿತರಾದ ಶಿಕ್ಷಣ ಚಿಂತಕ ಡಾ. ಮಹಾಬಲೇಶ್ವರ ರಾವ್ ಅವರ ಲೇಖನಿಯಿಂದ ಮೂಡಿಬಂದಿರುವ ಈ ಕೃತಿ ಪಾಲಕರ, ಮನಃಪರಿವರ್ತನೆಗೆ ಸಹಕಾರಿಯಾಗಿದೆ.
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)