1
/
of
2
S. Dheerendra
ಹವ್ಯಾಸಿರಂಗದ ಮುತ್ತು ರತ್ನಗಳು
ಹವ್ಯಾಸಿರಂಗದ ಮುತ್ತು ರತ್ನಗಳು
Publisher - ವಿಸ್ತಾರ ಪ್ರಕಾಶನ
Regular price
Rs. 375.00
Regular price
Rs. 375.00
Sale price
Rs. 375.00
Unit price
/
per
Shipping calculated at checkout.
- Free Shipping Above ₹300
- Cash on Delivery (COD) Available
Pages - 304
Type - Paperback
Couldn't load pickup availability
ಧೀರೇಂದ್ರ.ಎಸ್ ನನ್ನ ಬದುಕಿನಲ್ಲಿ ಕಂಡ ಅಪರೂಪದ ವ್ಯಕ್ತಿ. ತನಗೆ ಏನು ಬೇಕು, ಅದನ್ನು ಸಾಧಿಸಲು ಏನು ಮಾಡಬೇಕು ಎಂದು ನಿಖರವಾಗಿ ಯೋಚಿಸಿ ಕೆಲಸ ಮಾಡುವವನು. ಅದರಲ್ಲೂ ವಿಶೇಷವಾಗಿ, ತಾನು ಏನೇ ಮಾಡಿದರೂ ಅದರಿಂದ ಯಾರಿಗೂ ಯಾವ ತೊಂದರೆಯೂ ಆಗಬಾರದು ಎಂಬ ಮನಸ್ಸುಳ್ಳ ವ್ಯಕ್ತಿ.
ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರವೇಶ ದೊರಕಿದ್ದರೂ, ಯೋಧನಾಗ ಬಯಸಿದ್ದ ಧೀರೇಂದ್ರ, ಅಲ್ಲಿ ಎನ್ ಸಿ ಸಿ ನೇವಲ್ ಯೂನಿಟ್ ಇರಲಿಲ್ಲವೆಂದು ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಬಿಎಸ್ಸಿ ಸೇರಿದ್ದು, ನಟರಂಗದಲ್ಲಿ ಮುಖ್ಯ ಕಲಾವಿದರ ಸಮಸ್ಯೆಯಾದಾಗ, ಚಂದ್ರಗುಪ್ತ ನಾಟಕದಲ್ಲಿ ಚಂದ್ರಗುಪ್ತನ ಪಾತ್ರ ನಿರ್ವಹಿಸಿ ತಂಡದ ಪ್ರತಿಷ್ಠೆ ಉಳಿಸಿದ್ದು, ಇಂತಹ ಅನೇಕ ಪ್ರಸಂಗಗಳು ನನ್ನ ಕಣ್ಮುಂದೆ ಬರುತ್ತವೆ.
ಎಲ್ಲಕ್ಕಿಂತ ಮುಖ್ಯವಾಗಿ, ನಟರಂಗಕ್ಕೆ 50 ವರ್ಷ ತುಂಬಿದಾಗ, ಏನು ಮಾಡಬೇಕೆಂಬ ನಿರ್ದಿಷ್ಟ ಯೋಜನೆ ಯಾರಲ್ಲೂ ಇಲ್ಲದಿದ್ದಾಗ, ಧೀರೇಂದ್ರ ಮುಂದೆ ಬಂದು ನಟರಂಗದ ಕಲಾವಿದರ ಪರಿಚಯಾತ್ಮಕ ಪುಸ್ತಕವನ್ನು ತಾನು ಹೊರತರುವುದಾಗಿ ಹೇಳಿದಾಗ ನಾನು ದಿಗ್ಬ್ರಮೆಗೊಂಡೆ. ಮಾಹಿತಿ ಸಂಗ್ರಹಿಸುವುದು ಹೇಗೆ? ಅವರೆಲ್ಲ ಎಲ್ಲಿದ್ದಾರೋ? ಅದರ ಪ್ರಕಟಣೆಯ ಖರ್ಚು ಎಲ್ಲಿಂದ? ಎಂಬ ಹತ್ತಾರು ಪ್ರಶ್ನೆಗಳು ನನ್ನ ತಲೆಯಲ್ಲಿ ಮೂಡಿ, ಈ ಯೋಜನೆಯನ್ನೇ ಅನುಮಾನದಿಂದ ನೋಡುವಂತಾಗಿತ್ತು.
ಧೀರೇಂದ್ರ ಮತ್ತೊಮ್ಮೆ ನಟರಂಗದ ಧೀರನಾದ, ತಾನು ಮಾತಾಡಿದ್ದನ್ನು ಮಾಡಿ ತೋರಿಸಿ ತಂಡದ ಇಂದ್ರನೂ ಆದ! 40 ಜನ ರಂಗಕರ್ಮಿಗಳ ಸ್ವಾರಸ್ಯಕರ ಮಾಹಿತಿ ಸಂಗ್ರಹಿಸಿ, ಈ ಪುಸ್ತಕವನ್ನು ಧೀರೇಂದ್ರ ಹೊರತರುತ್ತಿದ್ದಾನೆ. ಇದು ಸಣ್ಣ ಕೆಲಸವಲ್ಲ. ನಟರಂಗದ 40 ರಂಗಕರ್ಮಿಗಳನ್ನು ಪರಿಚಯಿಸುವ ಮೂಲಕ ಅವರನ್ನು ರಂಗ ಇತಿಹಾಸದಲ್ಲಿ ಅಮರರನ್ನಾಗಿಸಿದ ನಿನಗೆ ನನ್ನ ಮತ್ತು ನಟರಂಗದ ಧನ್ಯವಾದಗಳು ಮತ್ತು ಅಭಿನಂದನೆಗಳು. ನಮಗಿಂತ ಕಿರಿಯನಾದರೂ ಇದನ್ನು ಒಪ್ಪಿಕೋ - ನನ್ನ ಮತ್ತು ನಟರಂಗದ ನಮಸ್ಕಾರಗಳು. ನಿನ್ನ ಪುಸ್ತಕ ನೂರಾರು ರಂಗಾಸಕ್ತರ ಕೈಸೇರಲಿ!
-ಶ್ರೀನಿವಾಸ್ ಜಿ ಕಪ್ಪಣ್ಣ
ಖ್ಯಾತ ರಂಗಕರ್ಮಿ, ರಂಗ ಸಂಘಟಕ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು

Share

Subscribe to our emails
Subscribe to our mailing list for insider news, product launches, and more.