Vasudev Murthy
ಹಾವು ಏಣಿ ಆಟ
ಹಾವು ಏಣಿ ಆಟ
Publisher - ಹರಿವು ಬುಕ್ಸ್
- Free Shipping Above ₹400
- Cash on Delivery (COD) Available*
Pages - 289
Type - Paperback
Couldn't load pickup availability
ಹಾವು ಏಣಿ ಆಟ ಒಂದು ವಿಶಿಷ್ಟ ಕಥಾವಸ್ತು ಹೊಂದಿರುವ ಕಾದಂಬರಿ. ಕನ್ನಡ ಕಾದಂಬರಿ ಲೋಕದಲ್ಲಿ ಒಂದು ಹೊಸ ಪ್ರಯತ್ನ. ಇದೊಂದು "ಮೆಡಿಕೋ ಲೀಗಲ್ ಥ್ರಿಲ್ಲರ್" ಔಷಧ ವಿಜ್ಞಾನದ ಪರ ಮತ್ತು ವಿರುದ್ಧದ ಕಾನೂನಿನ ಹೋರಾಟದ ಕಥೆ. ಈ ಕಾದಂಬರಿಯಲ್ಲಿ ಒಂದು ಕೊಲೆಯ ತನಿಖೆಯಿದೆ. ಅದರ ಹಿಂದಿರುವ ಭಯಾನಕ ಸತ್ಯದ ಅನಾವರಣವಿದೆ. ನಮ್ಮ ನಿಮ್ಮೆಲ್ಲರ ಜೀವನದಲ್ಲಿ ಅವ್ಯಕ್ತವಾಗಿ ಪ್ರವೇಶಿಸಿ, ನಮ್ಮ ಜೀವದ ಜೊತೆ, ಜೀವನದ ಜೊತೆ ಆಟವಾಡುವ ಫಾರ್ಮಾ ಲಾಬಿಯ ದುರಾಸೆಯಿದೆ. ಇದರ ಮಧ್ಯೆ ಅರಿತೊ ಅರಿಯದೆಯೋ ನಲುಗುವ ಜನರ ನೋವಿದೆ. ಆ ನೋವನ್ನೇ ಬಂಡವಾಳ ಮಾಡಿಕೊಳ್ಳುವ ಸ್ವಾರ್ಥವಿದೆ. ಇವೆಲ್ಲದರ ವಿರುದ್ಧ ಕೋರ್ಟ್ನಲ್ಲಿ ನಡೆಸುವ ಹೋರಾಟವಿದೆ.
ಸತ್ಯ ಅನ್ನುವುದು ನಮ್ಮ ನಮ್ಮ ದೃಷ್ಟಿಕೋನವಷ್ಟೇ. ನಮ್ಮ ಕಣ್ಣಿಗೆ ಕಂಡಿದ್ದು, ನಾವು ತಿಳಿದಿರುವುದು ಅಥವಾ ನಾವು ತಿಳಿಯಲೆಂದೇ ಕೊಡುವ ಮಾಹಿತಿಗಳು ಮಾತ್ರವೇ ಸತ್ಯವಲ್ಲ. ಒಮ್ಮೆ ಶೋಧಿಸಲು ಮುಂದಾದಾಗ ಆ ಸತ್ಯದ ಪರದೆಯ ಹಿಂದೆ ಅಡಗಿರುವ ಇನ್ನೊಂದು ಸತ್ಯ ನಮ್ಮ ಮುಂದೆ ಧುತ್ತನೆ ಬಂದು ನಿಂತಾಗ ಅದು ನಮ್ಮ ನಂಬಿಕೆಯ ಬುನಾದಿಯನ್ನೇ ಅಲುಗಾಡಿಸಿ ಯಾರು ಸರಿ ಯಾರು ತಪ್ಪು ಎನ್ನುವ ಪ್ರಶ್ನೆ ಹುಟ್ಟಿಹಾಕುತ್ತದೆ.
- ಲೇಖಕರು
Share

ಹಾವು ಏಣಿ ಆಟ
ವಾಸುದೇವ ಮೂರ್ತಿಯವರ "ಹಾವು ಏಣಿ ಆಟ" ಎಂಬ ಮೆಡಿಕೋ ಲೀಗಲ್ ಥ್ರಿಲ್ಲರ್ ಪತ್ತೇದಾರಿ ಶೈಲಿಯ ರೋಚಕ ಕಾದಂಬರಿಯನ್ನು ಎರಡು ರಾತ್ರಿಗಳಲ್ಲಿ ಓದಿ ಮುಗಿಸಿದೆ. “ಹಾವು-ಏಣಿ ಆಟ” ನಮ್ಮನ್ನು ಅಷ್ಟೊಂದು ಕೌತುಕವಾಗಿ, ಉಸಿರು ಬಿಗಿಹಿಡಿದು ಓದಿಸುತ್ತದೆ. ಪ್ರತಿ ಪುಟವನ್ನು ಓದಿ ಮುಗಿಸಿದಾಗ ಈ ಕೊಲೆಕೇಸ್ ಎತ್ತ ಸಾಗುತ್ತದೆ, ಮುಂದೇನು ಟ್ವಿಸ್ಟ್ ಕಾದಿದೆ ಎಂಬ ಕುತೂಹಲವು ಪುಸ್ತಕವನ್ನು ಕೆಳಗಿಡದಂತೆ ಮಾಡುತ್ತದೆ. ಮೊದಲೆರಡು ಪುಟದೊಳಗೆ ಕತೆಗೆ ಭರ್ಜರಿ ಓಪನಿಂಗ್ ಎಂಬಂತೆ ಡಾ. ಶಶಾಂಕ್ ಎಂಬ ಖ್ಯಾತ ಡಾಕ್ಟರ್ ಅವರನ್ನು ಅವರ ಬೆಡ್ರೂಮಿನಲ್ಲಿ ಅವರ ಹೆಂಡತಿ ಅನುಷಾ ಎಂಬ ಖ್ಯಾತ ನಟಿಯು ಇರಿದು ಕೊಲೆಮಾಡಿ ಪೋಲೀಸರಿಗೆ ಕೃತ್ಯದ ಸ್ಥಳದಲ್ಲಿ ಕೊಲೆಗೈದ ಚೂರಿಯೊಂದಿಗೆ ಸಿಕ್ಕಿಬೀಳುತ್ತಾಳೆ. ಅಲ್ಲಿಂದ ಹಾವು ಏಣಿ ಆಟ ಸುರು. ಮುಂದೇನು? ಅನುಷಾ ಅಪರಾಧಿಯೋ ಅಥವಾ ಅಮಾಯಕಿಯೋ? ಎಂಬ ಜಿಜ್ಞಾಸೆಯು ನಮ್ಮನ್ನು ಕಾಡುತ್ತ ಕೊನೆಯ ಪುಟದ ತನಕ ಓದಿಸುವಂತೆ ಮಾಡುವ ಲೇಖಕರ ಜಾಣ್ಮೆ ಮೂಗಿನಮೇಲೆ ಬೆರಳಿರಿಸುವಂತೆ ಮಾಡಿತು. ಸುಬ್ಬಯ್ಯನಂತಹ ನಿಷ್ಠುರ ಪೋಲೀಸರ ತನಿಖೆಯ ವಿವಿಧ ಆಯಾಮಗಳನ್ನು ಓದುತ್ತ ಲೇಖಕರಲ್ಲಿ ಒಬ್ಬ ಪಳಗಿದ ತನಿಖಾಧಿಕಾರಿಯನ್ನು ಕಂಡರೆ, ಕೋರ್ಟ್ ಕೇಸಿನಲ್ಲಿ ಅವರು ನುರಿತ ವಕೀಲರಂತೆ ಕಾಣುತ್ತಾರೆ. ಇನ್ನು ಕಥೆಯ ಕಥಾವಸ್ತುವಾಗಿರುವ ಕ್ಲೀನಿಕಲ್ ಮಾಫಿಯಾದ ಬಗ್ಗೆ ವಿವರಿಸುವಾಗ ಅವರೊಬ್ಬರು ನುರಿತ ಫಾರ್ಮ ಸ್ಷೆಷಲಿಸ್ಟ್ & ಉದ್ಯಮಿಯಂತೆ ರೀತಿ ಕಾಣುತ್ತಾರೆ. ಪುಸ್ತಕ ಓದಿ ಮುಗಿಸುವಾಗ ಅವರಲ್ಲಿ ನಾನು ಕಂಡಿದ್ದು ನನ್ನ ಪ್ರಿಯ ಕೃತಿಗಳ ಲೇಖಕರಾದ ಖ್ಯಾತ ಯಂಡಿಮೂರಿಯವರನ್ನು! ಈ ಕೃತಿಗಾಗಿ ಅವರು ಕ್ಲೀನಿಕಲ್ ಟ್ರಾಯಲ್ ಬಗ್ಗೆ ಸಂಗ್ರಹಿಸಿರುವ ಮಾಹಿತಿ ಅಪೂರ್ವವಾಗಿದೆ. ಕೃತಿಯುದ್ದಕ್ಕೂ ನ್ಯಾಯಾಂಗ, ಕಾರ್ಯಾಂಗ & ಪತ್ರಿಕಾಂಗಗಳ ಬಗ್ಗೆ ಅವರು ವಿವಿಧ ಪಾತ್ರಗಳ ಮೂಲಕ ತರ್ಕಿಸುವುದು ಅವರಿಗೆ ಈ ಕ್ಷೇತ್ರಗಳಲ್ಲಿರುವ ಅಗಾಧ ಜ್ಞಾನ ಎದ್ದು ಕಾಣುತ್ತದೆ. ನಾಲೈದು ಪಾತ್ರಗಳನ್ನು ಮುಖ್ಯವಾಗಿಸಿ ಅವರಿಂದ 289 ಪುಟಗಳಿಗೆ ವಿಸ್ತರಿಸುವಷ್ಟು ಹಾವು-ಏಣಿ ಆಟವಾಡಿಸಿದ ಪರಿ ಅದ್ಭುತವಾಗಿದೆ. ನಾನು ಇದುವರೆಗೆ ಓದಿರುವ ರೋಚಕೋತ್ತಮ ಕೃತಿಗಳಲ್ಲಿ ಇದೂ ಒಂದಾಗಿದೆ. ಇಂತಹ ವೈಶಿಷ್ಟ್ಯಪೂರ್ಣ ಕೃತಿಯನ್ನು ಬರೆದ ಆತ್ಮೀಯ ವಾಸುದೇವ್ ಮೂರ್ತಿ ಹಾಗೂ ಇಂತಹ ಸಂಗ್ರಹೋಗ್ಯ ಕೃತಿಯನ್ನು ಪ್ರಕಟಿಸಿದ ಹರಿವು ಬುಕ್ಸ್ ಇವರಿಗೆ ಅಭಿನಂದನೆಗಳು ಹಾಗೂ ಅಭಿವಂದನೆಗಳು
- ರಮೇಶ್ ಶೆಟ್ಟಿಗಾರ್, ಮಂಜೇಶ್ವರ
ಜಟಿಲ ಕಥಾವಸ್ತುವನ್ನು ಓದುಗರಿಗೆ ಅರ್ಥ ಆಗುವ ರೀತಿಯಲ್ಲಿ ಹಾಗೂ ಕೊನೆಯವರೆಗೂ ತುದಿಗಾಲ ಮೇಲೆ ಇರುವಂತೆ ಮಾಡಿದ ಈ ಕಾದಂಬರಿ ಅದ್ಭುತವಾಗಿದೆ. ಇಂಥ ಕಾದಂಬರಿ ಉಣ ಬಡಿಸಿದ ಲೇಖಕರಿಗೆ ಧನ್ಯವಾದಗಳು
One of the my best book.very curiosity .
ಹಾವು ಏಣಿ ಆಟ
Subscribe to our emails
Subscribe to our mailing list for insider news, product launches, and more.