Mallikarjuna Shellikeri
ಹವೇಲಿ ದೊರೆಸಾನಿ
ಹವೇಲಿ ದೊರೆಸಾನಿ
Publisher -
- Free Shipping Above ₹250
- Cash on Delivery (COD) Available
Pages -
Type - Paperback
ಮನುಷ್ಯನ ಅಂತಃಕರಣ, ಆತ್ಮಸಾಕ್ಷಿ, ಆತ್ಮಘನತೆಯನ್ನು ಶೋಧಿಸುವ ಹಾಗೂ ಎತ್ತಿ ಹಿಡಿಯುವ ಪ್ರಯತ್ನ ಎಲ್ಲ ಕಾಲದ ಸಾಹಿತ್ಯದ ಪ್ರಮುಖ ಲಕ್ಷಣ. ಸಾಹಿತ್ಯದ ಈ ಮೂಲಧಾತುವಿಗೆ ಮತ್ತೆ ಮತ್ತೆ ಮುಖಾಮುಖಿಯಾಗುವ ಕಾರಣದಿಂದಲೇ ಮಲ್ಲಿಕಾರ್ಜುನ ಶೆಲ್ಲಿಕೇರಿಯವರ 'ಹವೇಲಿ ದೊರೆಸಾನಿ' ಸಂಕಲನದ ಕಥೆಗಳು ಗಮನ ಸೆಳೆಯುತ್ತವೆ. ಹಾಗೆಯೇ ಮುಖ್ಯವೆನ್ನಿಸುತ್ತವೆ.
ಊರಿಗೆ ಶಾಲೆ ಬಾರದಂತೆ ತಡೆಯುವ ಬಲಿಷ್ಠರ ನಡುವೆ. ಶಾಲೆಗಾಗಿ ತನ್ನ ಭೂಮಿಯನ್ನು ಬಿಟ್ಟುಕೊಡುವ ಕಂಟೆವ್ವ ಗ್ರಾಮೀಣ ಅಂತಃಕರಣದ ಮೂರ್ತರೂಪದಂತೆ ಇಲ್ಲಿದ್ದಾಳೆ. ಅತ್ಯಾಚಾರ, ಕೊಲೆಗಳಂಥ ಅಮಾನುಷ ಘಟನೆಗಳಿಗೆ ಮೂಕಸಾಕ್ಷಿಯಾಗಿರುವ ದೇಶಪ್ರೇಮಿ ಕ್ಯಾಪ್ಟನ್ ಪ್ರತಾಪಮೋಹನ್ ಪಾಟೀಲರ ಪ್ರತಿಮೆ ವರ್ತಮಾನದ ಜಡ್ಡುಗಟ್ಟಿದ ಅತ್ಯಸಾಕ್ಷಿಗೆ ಸವಾಲು ಎಸೆಯುವಂತಿದೆ. ಇಳಕಲ್ ರೇಶಿಮೆ ಸೀರೆಯುಟ್ಟು ಸೊಸೆಯೊಂದಿಗೆ ಚರಗ ಚೆಲ್ಲುವುದರ ಮೂಲಕ ತನ್ನ ಬದುಕಿನ ಸಾರ್ಥಕತೆಯನ್ನು ಪ್ರಕಟಪಡಿಸಲು ಬಯಸುವ ಶ್ಯಾಂವಕ್ಕೆ 'ಆತ್ಮಘನತೆಯ ಪ್ರತಿರೂಪದಂತಿದ್ದಾಳೆ.
-ರಘುನಾಥ ಚ.ಹ.
(ಬೆನ್ನುಡಿಯಿಂದ)
Share
Subscribe to our emails
Subscribe to our mailing list for insider news, product launches, and more.