Skip to product information
1 of 2

Banu Mushthak

ಹಸೀನಾ ಮತ್ತು ಇತರ ಕಥೆಗಳು

ಹಸೀನಾ ಮತ್ತು ಇತರ ಕಥೆಗಳು

Publisher -

Regular price Rs. 750.00
Regular price Rs. 750.00 Sale price Rs. 750.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 763

Type - Hardcover

Gift Wrap
Gift Wrap Rs. 15.00

ಬಾನು ಮುಷ್ತಾಕ್ ಅವರ ಕತೆಗಳಲ್ಲಿ ಮುಖ್ಯವಾಗಿ ಮೂರು ನೆಲೆಗಳಿವೆ. ವ್ಯವಸ್ಥೆ ಯೊಂದಿಗಿನ ಮುಖಾಮುಖಿ, ಬಡತನ ಮತ್ತು ಹೆಣ್ಣಿನ ಕೊನೆಯಿರದ ನೋವಿನ ಬದುಕು - ಇವು ಅವರ ಕತೆಗಳ ಪ್ರಧಾನ ವಸ್ತು ವಿಶೇಷಗಳು. 'ನನ್ನ ಕೃತಿಗಳಲ್ಲಿ ಹೆಣ್ಣೆ ವಿರಾಜಮಾನಳಾಗಿದ್ದಾಳೆ' ಎಂದು ಸ್ವತಃ ಲೇಖಕಿಯೇ ಘೋಷಿಸಿದ್ದರೂ ಅವರ ಕೃತಿಗಳಲ್ಲಿ ಹೆಣ್ಣಿನಷ್ಟೇ ಈ ಎರಡೂ ಅಂಶಗಳೂ ಪ್ರಧಾನವಾಗಿ ಕಾಣಿಸುತ್ತವೆ. ಈ ಮೂರರ ಅನನ್ಯ ನೇಯ್ಗೆಯೇ ಬಾನು ಅವರ ಕತೆಗಳ ಮೂಲ ವಿನ್ಯಾಸ ಎಂದು ನನಗನ್ನಿಸುತ್ತದೆ.

ವ್ಯವಸ್ಥೆಯನ್ನು ಬಾನು ಮುಖಾಮುಖಿಯಾಗುವ ನಿಲುವೇ ನನಗೆ ತುಂಬಾ ವಿಶಿಷ್ಟವಾಗಿ ಕಾಣಿಸುತ್ತದೆ. ಬಾನು ಅವರ ಕತೆಗಳ ಮಹತ್ವವಿರುವುದೇ ಈ ಅಂಶದಲ್ಲಿ. ತನ್ನ ವಾರಿಗೆಯ ಲೇಖಕಿಯರಿಗಿಂತ ಇವರು ಭಿನ್ನರಾಗುವುದು ಈ ಕಾರಣಕ್ಕೆ. ವ್ಯವಸ್ಥೆಯನ್ನು ಬಾನು ಸ್ತ್ರೀವಾದಿ ಹಿನ್ನೆಲೆಯಲ್ಲಿ ಬದಲಾದ ಕಾಲ ಸನ್ನಿವೇಶದ ಹಿನ್ನೆಲೆಯಲ್ಲಿ ಎನ್ನುವುದಕ್ಕಿಂತ ಹೆಚ್ಚಾಗಿ ಶುದ್ಧ ಮಾನವೀಯ ನೆಲೆಯಲ್ಲಿ ಮುಖಾಮುಖಿಯಾಗುತ್ತಾರೆ. ಅವರ ಈ ನಿಲುವಿನಿಂದಾಗಿ ಸ್ತ್ರೀವಾದಿ ದೃಷ್ಟಿಕೋನಕ್ಕಿರಬಹುದಾದ ಮಿತಿ ಮತ್ತು ಅಪಾಯಗಳನ್ನು ಅವರು ಶಕ್ತವಾಗಿ ದಾಟಿಬಿಟ್ಟಿದ್ದಾರೆ. ಅವರ ಕತೆಗಳಿಗೆ ವಿಸ್ತಾರ ಒದಗಿ ಬರುವುದು ಮೂಲತಃ ಈ ಕಾರಣಕ್ಕೆ. ಅಪ್ಪಟ ಮಾನವೀಯ ನೆಲೆಯಲ್ಲಿ ಹೇಗೂ ಸಮರ್ಥಿಸಿಕೊಳ್ಳಲು ಅಸಾಧ್ಯವಾದ ವ್ಯವಸ್ಥೆಯ ಕ್ರೌರ್ಯದ ಅನಾವರಣ ಈ ಕಥಾ ಸಂಕಲನದ ಮುಖ್ಯ ಸಾಧನೆಗಳಲ್ಲಿ ಒಂದು. ಲೇಖಕಿಯರನ್ನೂ ವಿಸ್ತ್ರತ ಹಿನ್ನೆಲೆಯಲ್ಲಿಟ್ಟು ಚರ್ಚೆ ಮಾಡಬೇಕಾಗಿರುವುದು ನಮ್ಮ ಈ ಹೊತ್ತಿನ ಅಗತ್ಯ ವಸ್ತು ಅನಿವಾರ್ಯತೆ ಎನ್ನುವ ನನ್ನ ಮಾತಿಗೆ ಪೂರಕವಾದ, ಬಲವಾದ ಕಾರಣ ಇದು.

-ಡಾ.ಎಂ.ಎಸ್. ಆಶಾದೇವಿ
'ಎದೆಯ ಹಣತೆ' ಸಂಕಲನದ ಮುನ್ನುಡಿಯಿಂದ

View full details