Skip to product information
1 of 2

Radhika Kakhandiki

ಹರಿದಾರಿ ಶ್ರುತಿಗೊಂಡಾಗ

ಹರಿದಾರಿ ಶ್ರುತಿಗೊಂಡಾಗ

Publisher - ಮನೋಹರ ಗ್ರಂಥಮಾಲಾ

Regular price Rs. 140.00
Regular price Rs. 140.00 Sale price Rs. 140.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 84

Type - Paperback

Gift Wrap
Gift Wrap Rs. 15.00

ಗುರು ಪ್ರಸಾದೋ ಬಲವಾನ್

ಆಟವಾಡುವ ವಯಸ್ಸಿನಲ್ಲಿಯೇ ದಾಸರ ಪದಗಳ ಜೊತೆ ಆಟವಾಡುತ್ತ, ಸಂಗೀತದಲ್ಲಿ ಆಸಕ್ತಿ ಬೆಳಸಿಕೊಂಡು ನನ್ನ ಹಾಗೂ ನನ್ನ ಅಂತರಂಗದಲ್ಲಿರುವ ದೇವರ ಸಂತೋಷಕ್ಕಾಗಿ ನನ್ನ ಹಾಡುಗಾರಿಕೆ ಎಂದು, ಸುಮಾರು ಐದು ದಶಕಗಳ ಕಾಲ ತಂಬೂರಿಯೊಂದನ್ನು 'ಸಾಥಿ' ಮಾಡಿಕೊಂಡು ಹಾಡುತ್ತ ನಡೆದವರು ಶ್ರೀಮತಿ ರಾಧಿಕಾ ಕಾಖಂಡಿಕಿ ಅವರು.

ಗುಣಗಳ ಗುಣಾಕಾರ. ದೋಷಗಳ ಭಾಗಾಕಾರ ಮಾಡಿ, ಪೂರ್ವಾಶ್ರಮದ ಕಳೆ ಮತ್ತು ಕೊಳೆ ಎರಡನ್ನು ಕಿತ್ತಿ ಹಾಕಿ ಹೊಸ ಬದುಕು ಕಟ್ಟಿಕೊಂಡು, ಅನೇಕಾನೇಕರಿಗೆ ಭಜನಾ ಪದ್ಧತಿ ಮೂಲಕ ಸಂಗೀತ ಕಲಿಸಿದ. ಶ್ರೀಕಾಂತನನ್ನು ಕಾಣುವ ದಾರಿ ತೋರಿಸಿದ ಹರಿದಾಸರು ಅಥಣಿಯ ಭೀಮದಾಸರು. ಹೆಸರಿನ ಹಾಗೆ ಭಕ್ತಿಯಲ್ಲಿ 'ಭೀಮ'ರೇ ಇವರು.

ಭೀಮದಾಸರಿಂದ ಭಕ್ತಿ ಸಂಗೀತದ ಸಂಸ್ಕಾರ ಪಡೆದ ಶ್ರೀಮತಿ ರಾಧಿಕಾ ಕಾಖಂಡಿಕಿ ಅವರು ತಮ್ಮ ಗುರುಗಳನ್ನು ಕುರಿತು ಚಿಕ್ಕ ಹಾಗೂ ಚೊಕ್ಕದಾದ ಕೃತಿಯೊಂದನ್ನು ರಚಿಸಿದ್ದಾರೆ. ಕಾಖಂಡಿಕಿ ಅವರ ಸಂಗೀತವನ್ನು ಆಸ್ವಾದಿಸುವ ಅನುಭವವನ್ನು ಈ ಕೃತಿ ನೀಡುತ್ತದೆ. ತಂಬೂರಿಯ ಶುದ್ಧ ಶೃತಿಯಂತೆ ಈ ಕೃತಿ ಇದೆ. ಇದರಲ್ಲಿರುವ ಇತಿಹಾಸ ಮತ್ತು ಘಟನೆಗಳು ಪ್ರಾಮಾಣಿಕತೆಯಿಂದ ಕೂಡಿವೆ. ವ್ಯಕ್ತಿಯ ಪರಿವರ್ತನೆಗೆ ಘಟನೆಯೊಂದು ಹೇಗೆ ಕಾರಣವಾಯಿತು, ಅದರಿಂದ ಆದ ಸತ್ಪರಿಣಾಮಗಳ ಅಚ್ಚುಕಟ್ಟಾದ ದಾಖಲೆ ಈ ಪುಸ್ತಕದಲ್ಲಿದೆ. ಅಥಣಿಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಸ್ಥಾಪನೆ, ಅದರ ಬೆಳವಣಿಗೆ, ಅದರ ನಿರಂತರ ನಡೆಯುವದಕ್ಕೆ ರೂಪಿಸಿದ ಒಂದು ಪ್ರಾಮಾಣಿಕ ಪಂಚಾಂಗ, ನಡೆದು ಹೋದ ಪವಾಡಗಳು ಈ ಕೃತಿಯಲ್ಲಿವೆ.

ಭೀಮದಾಸರ ಜೀವನ ಚಕ್ರವ್ಯೂಹದ ಸುಳಿಗೆ ಸಿಕ್ಕಾಗ ಹೊಸ ತಿರುವು ನೀಡಿದ ಕಾಶೀಬಾಯಿ ಎಂಬ ಸ್ತ್ರೀ, 'ಕಾಶಿ' ಪುಣ್ಯ ಕ್ಷೇತ್ರದಂತೆ ಹೇಗಿದ್ದಳೆಂಬ ವಿಚಾರ ಈ ಕೃತಿಯಲ್ಲಿ ಮಹತ್ವ ಪಡೆದಿದೆ. ಲೇಖಕಿ ಎಲ್ಲಿಯೂ ಭಾವಾವೇಶಕ್ಕೆ ಒಳಗಾಗದೆ ಅತ್ಯಂತ ಪ್ರಾಮಾಣಿಕವಾಗಿ ಗುರು ಸ್ಮರಣೆ ಮಾಡಿದ್ದಾರೆ. ಗುರುವಿನ ಪ್ರಸಾದ ನನ್ನ ಸಂಗೀತ ಶಕ್ತಿಗೆ ಹೇಗೆ ಬಲ ನೀಡಿತು ಎಂಬುದನ್ನು ಲೇಖಕಿ ಕೃತಿಯಲ್ಲಿ ಉದಾಹರಣೆಗಳ ಮೂಲಕ ಧೃಡಪಡಿಸಿದ್ದಾರೆ. ಇದೊಂದು ಉತ್ತಮ ವ್ಯಕ್ತಿ ಚಿತ್ರವಾಗಿದೆ.

-ಡಾ. ಕೃಷ್ಣ ಕಟ್ಟಿ 

View full details