Skip to product information
1 of 2

Ramaprasad K V

ಹರಟೆ ಕಟ್ಟೆ

ಹರಟೆ ಕಟ್ಟೆ

Publisher -

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 148

Type - Paperback

Gift Wrap
Gift Wrap Rs. 15.00

ಬಹುಶ: ದಕ್ಷಿಣದಿಂದ ಹುಟ್ಟಿದ್ದಾದ್ದರಿಂದ ಈ ಸುವಿದಾ ದ್ರವ್ಯಕ್ಕೆ ದಕ್ಷಿಣೆಯೆಂಬ ಹೆಸರು ಬಂದಿರಬೇಕು. ಇದು ಕೆಲಸಮಾಡುವ ರೀತಿಯೂ ಹಾಗೇ, ಮೊದಲು ದಕ್ಷಿಣೆ, ಅಮೇಲೆ ಸಂಬಂಧಪಟ್ಟವರಿಂದ ಅದಕ್ಕೆ 'ಉತ್ತರ': ಮತ್ತದರಿಂದಲೇ ತಾನೇ, ದಕ್ಷಿಣೆ ನೀಡಿದವನ ಉತ್ತರೋತ್ತರ ಅಭಿವೃದ್ಧಿ?

ಮಂಜುನಾಥ ಕೊಳ್ಳೇಗಾಲ ಅವರ "ದಕ್ಷಿಣಾಯಣ' ಪ್ರಬಂಧದಿಂದ

ಆದರೆ ಹಂಗೆಲ್ಲಾ ನನ್ನಾಕೆ ಸೋಲುವವಳೇ ಅಲ್ಲ, ಸ್ವಲ್ಪ ಹೊತ್ತು ಆ ಕಡೆಯಿಂದ 'ಯಾವುದೇ ಬಾಣ ಬರಲಿಲ್ಲ. ಅನುಭವದ ಪ್ರಕಾರ ಹೆಂಡತಿಯ ಮೌನ ಯಾವುದೋ ಭಯಂಕರ ಬ್ರಹ್ಮಾಸ್ತ್ರದ ಮುನ್ಸೂಚನೆ. ಮುನ್ನೆಚ್ಚರಿಕೆ ಒಳ್ಳೆಯದು.

ಬಾಲಸುಬ್ರಹ್ಮಣ್ಯ ಶಾಸ್ತ್ರಿ ಅವರ "ವಾಯುವಿಹಾರದ ಸೈಡ್ ಎಫೆಕ್ಟ್' ಪ್ರಬಂಧದಿಂದ

ಕತ್ತಿನ ಸುತ್ತ ವೈಯ್ಯಾರದ ಒಂದೆರಡೆಳೆ ಸರ; ಮುಡಿಯಲ್ಲಿ ಮೆಲ್ಲುಲಿವ ಮಲ್ಲಿಗೆ; ಮುಂಗೈಗಳಲ್ಲಿ ಘಲುಘಲಿಸುವ ಗಾಜಿನ ವಾ ಬಂಗಾರದ ಬಳೆಗಳು; ಅನುಕೂಲ ಮತ್ತು ಇಷ್ಟವಿದ್ದರೆ ಪಾದಮಣಿಕಟ್ಟಿನಲ್ಲಿ ಕುಲುಕುಲು ನಲಿಯುವ ಬೆಳ್ಳಿ ಗೆಜ್ಜೆ... ಇವಿಷ್ಟಿದ್ದರೆ ಅಂಥ ನಾರಿಗೆ, ಸೀರೆಗೆ ಸಿಗುವ ಮೆಚ್ಚುನೋಟಗಳಿಗೆ ಬೇರೆಲ್ಲಾ ಅಂಗಿಗಳು ಅಸೂಯೆಯಿಂದ ಉರಿಯಲೇಬೇಕು.

- ಜ್ಯೋತಿ ಮಹಾದೇವ್ ಅವರ "ಅಂಗಿ-ಚುಂಗು - ಸೀರೆ ಸೆರಗು" ಪ್ರಬಂಧದಿಂದ

ಪರಸ್ಪರ ಭೇಟಿಯಾದಾಗ ಕನ್ನಡಿಗ ಮೊದಲು ಕೇಳೋದು, "ಏನ್ಸಾರ್ ಊಟ ಆಯ್ತಾ, ತಿಂಡಿ, ಕಾಪಿ ಆಯ್ತಾ” ಎಂದು. "ಹೌ ಆರ್ ಯೂ"ಗೆ ಪರ್ಯಾಯವಾದ ಗ್ರೀಟಿಂಗ್ ನಮ್ಮಲ್ಲಿ ಬಳಕೆಯಿಲ್ಲ. ಹಾಗೆಯೇ ಹೆಣ್ಣು ಮಕ್ಕಳೂ ಪಕ್ಕದ ಮನೆಯವರೊಂದಿಗೆ ಹರಟುವಾ

View full details