ಚಂದ್ರಶೇಖರ ಕಂಬಾರ
Publisher: ಸಪ್ನ ಬುಕ್ ಹೌಸ್
Regular price
Rs. 90.00
Regular price
Sale price
Rs. 90.00
Unit price
per
Shipping calculated at checkout.
Couldn't load pickup availability
ಆಧುನಿಕ ರಾಜಕೀಯ ಆಧುನಿಕ ಯಾಂತ್ರಿಕತೆಯಂತೆ ಅವ್ಯಕ್ತವಾದ ಶಕ್ತಿಯ ಅದೃಶ್ಯಜಾಲವಾಗಿದೆ. ಇಲ್ಲಿ ಬದುಕು ಸಾವುಗಳು ಅನುಭವಗಳಲ್ಲಾ, ಸಂಗತಿಗಳು. ಇಡೀ ದೇಶವನ್ನೇ ತನ್ನ ಖಾಸಗೀ ಆಸ್ತಿಯನ್ನಾಗಿ ಮಾಡಬಲ್ಲ ರುದ್ರಪ್ಪ ಯಾರದೋ ಮನೆಯನ್ನು ತನ್ನ ಆಫೀಸನ್ನಾಗಿ ಮಾಡಿಕೊ೦ಡು ಅವರಿಗೆ ಗೊತ್ತಿಲ್ಲದಂತೆ ನಾಟಕವಾಡುವುದು ಇಂದಿನ ರಾಜಕೀಯದ ಚಿರಂತನ ಪ್ರತೀಕವಾಗಿದೆ. ಪ್ರಕಾಶ ಮತ್ತು ಸರೋಜರಿಗೆ ಗೊತ್ತಿರುವ ಪಠ್ಯಪುಸ್ತಕದ ರಾಜಕೀಯದಂತೆ ತಾತ್ವಿಕವಾಗಿದ್ದರೆ ಪ್ರತ್ಯಕ್ಷವಾದ ರಾಜಕೀಯ ಜೀವನ ವೃಕ್ಷದ ಬೇರುಗಳಿಗೆ ಸುರವಿದ ಕೆಂಡವಾಗುತ್ತದೆ. ರಾಜಕೀಯದ ಲೋಕದಲ್ಲಿ ಶಬ್ದ ಮತ್ತು ಪ್ರತೀಕಗಳಿಗೆ ನಿಶ್ಚಿತಾರ್ಥವೇ ಇಲ್ಲದಿರುವುದರಿಂದ ಹುಟ್ಟುವ ಮೌಲ್ಯ ಸಂಕರಿ ಭಯಾನಕವಾಗಿದೆ. ಒಬ್ಬ ವ್ಯಕ್ತಿಯ ದಬ್ಬಾಳಿಕೆ ನಿಂತು ಹೋಗಿ ಸಾರ್ವಜನಿಕ ಅಭಿಪ್ರಾಯದ, ಸ್ಲೋಗನ್ನುಗಳ, ಗುಂಪುಗಾರಿಕೆಯ, ಅರ್ಥವಾಗದ ಅರ್ಥಪ್ರಪಂಚದ ದಬ್ಬಾಳಿಕೆ ತಾನೇ ತಾನಾದಾಗ ವ್ಯಕ್ತಿ ದಿಗ್ಭ್ರಮೆಗೊಳ್ಳುವುದು ಸ್ವಾಭಾವಿಕವಾಗಿದೆ. ಅ೦ಥ ಒಂದು ಶಕ್ತಿಯುತವಾದ ಚಿತ್ರ ಈ ನಾಟಕದಲ್ಲಿದೆ.
