H. Dundiraj
Publisher - ಅಂಕಿತ ಪುಸ್ತಕ
Regular price
Rs. 150.00
Regular price
Rs. 150.00
Sale price
Rs. 150.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages - 120
Type - Paperback
Couldn't load pickup availability
ನಾಲ್ಕು ದಶಕಗಳಿಂದ ನಿರಂತರವಾಗಿ ಕಾವ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದರೂ ನಮ್ಮ ಈ ಡುಂಡಿರಾಜ್ ಎಂಬ ಕವಿಜೇನಿಗೆ ಹನಿ ಸಂಗ್ರಹಿಸಿ ಸುಸ್ತಾಗಿಯೇ ಇಲ್ಲ. ರೋಬೋಟ್ ತರಹ ದುಡಿವ ಶ್ರಮಜೀವಿ ಜೇನಿಗಾದರೂ ಸುಸ್ತೆಂಬುದಿರ ಬಹುದು. ಈಗಲೂ ಬರವಣಿಗೆಯಲ್ಲಿ ತುಂಬಾ ಬಿಜಿಯಾಗಿರುವ ಹನಿ ಬೀ ಇವರು. ವೈಜ್ಞಾನಿಕ ದೃಷ್ಟಿ, ಸಾಂಸ್ಕೃತಿಕ ಹಿನ್ನೆಲೆ,ಸೂಕ್ಷ್ಮ ವಿಶ್ಲೇಷಣಾ ಶಕ್ತಿ, ಅಳೆದು ತೂಗಿ ವಿವೇಚಿಸಬಲ್ಲ ನೈಪುಣ್ಯ ಇವೆಲ್ಲವೂ ಡುಂಡಿರಾಜರ ಕವಿತೆಗಳ ಹಿಂದಿನ ಧೀಃಶಕ್ತಿಗಳು. ಹದವರಿತ ವಿಡಂಬನೆ, ಸಹಜ ಹಾಸ್ಯ ಡುಂಡಿರಾಜರ ಯಶಸ್ಸಿನ ಗುಟ್ಟು. ಆದ್ದರಿಂದಲೇ ಅವು ಜನರ ನಾಲಿಗೆಯ ಮೇಲೆ ಸುಲಭವಾಗಿ ಹರಿದಾಡುತ್ತಿವೆ. ಶಬ್ದಗಳ ಬೇರುಗಳೆಡೆಗೆ ನೀರಿನಂತೆ ಇಳಿದು ಶಬ್ದದ ಎಲ್ಲ ಆಯಾಮಗಳನ್ನೂ ಚಕ್ಕನೆ ಹಿಡಿದು ದುಡಿಸಿಕೊಳ್ಳುವ ಈ ಕವಿಯ ಪ್ರತಿಭೆ ಅಪರೂಪದ್ದು. ಇವರ ಹನಿಗವಿತೆಗಳು ಕವಿಯ ಒಡಲಾಳದಿಂದ ಸಹಜ ಸುಂದರವಾಗಿ ಚಿಮ್ಮುತ್ತವಾದ್ದರಿಂದ ಜನರ ಹೃದಯವನ್ನು ಸುಲಭವಾಗಿ ಮುಟ್ಟುತ್ತವೆ, ತಟ್ಟುತ್ತವೆ ಮತ್ತು ಗೆಲ್ಲುತ್ತವೆ.
-ಡಾ. ಎಚ್.ಎಸ್. ಸತ್ಯನಾರಾಯಣ
-ಡಾ. ಎಚ್.ಎಸ್. ಸತ್ಯನಾರಾಯಣ

