Skip to product information
1 of 2

Jayaramachari

ಹಂಸಾಕ್ಷರ

ಹಂಸಾಕ್ಷರ

Publisher - ವೀರಲೋಕ ಬುಕ್ಸ್

Regular price Rs. 160.00
Regular price Rs. 160.00 Sale price Rs. 160.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 140

Type - Paperback

Gift Wrap
Gift Wrap Rs. 15.00

ಎಲ್ಲರ ನಾಲಗೆ ಮೇಲೆ ನಲಿದವುಗಳು ಏಕಕಾಲಕ್ಕೆ ಜನಪ್ರಿಯವೂ ಹೌದು, ನಿರ್ಲಕ್ಷಿತವೂ ಹೌದು, ಜನಪದ ಗೀತೆಗಳು ಎಲ್ಲರ ನಾಲಗೆ ಮೇಲೆ ನಲಿದಮೇಲೂ ಕೆಲವೇ ಉಳಿದಿವೆ ಸಾವಿರಾರು ಅಳಿದಿವೆ. ಏಕಕಾಲಕ್ಕೆ ಜನಪ್ರಿಯ ಹಾಗೂ ನಿರ್ಲಕ್ಷಿತ ಗೀತೆಗಳಿಗೆ ಎರಡನೇ ಉದಾಹರಣೆ ಚಿತ್ರಗೀತೆಗಳು, ಕೇಳುಗನ ಕಿವಿ ಎದೆಗಳ ಜೊತೆ ಮಾತ್ರ ಇವುಗಳ ಸಹವಾಸ ಆದರೆ ಅವಕ್ಕೆಪಾಂಡಿತ್ಯವಲಯದಲ್ಲಿ ಮನ್ನಣೆಯೂ ಇಲ್ಲ ಗಂಭೀರ ಚರ್ಚೆಗೆ ಯೋಗ್ಯವೂ ಅಲ್ಲ, ಗ್ರಂಥಗಳ ಆಚೆ ಸದಾ ಇಂಥ ಹಾಡುಗಳ ವಾಸ, ಸದಾ ಗುನುಗುತ್ತಿದ್ದ ಅವೆಷ್ಟೋ ಹಾಡುಗಳು ಯಾವಾಗ ಅಸುನೀಗಿದವು ಅಂತ ಸಹ ಗೊತ್ತಾಗುವುದಿಲ್ಲ. ಕೆಲವೇ ಕೆಲವು ಅಮರ ಗೀತೆಗಳು ಆ ಹಾಡು ಹುಟ್ಟಿದ ಸಮಯದ ಟ್ರಿವಿಯಾ ರೂಪದಲ್ಲಿ ಪುಸ್ತಕ ರೂಪದಲ್ಲಿ ಉಳಿದಿವೆ.

ಇಂಥ ಸಂದರ್ಭದಲ್ಲಿ ಕನ್ನಡ ಚಿತ್ರಗೀತೆ ಜಗತ್ತಿನ ವರಕವಿ ಎಂದೇ ಹೇಳಬಹುದಾದ ಹಂಸಲೇಖ ಅವರ ಗೀತೆಗಳ ಮೇಲೆ ಒಂದು ಅವಲೋಕನ ಕೃತಿ ಹೊರಬರುತ್ತಿದೆ. ಹಂಸಲೇಖ ಗೀತೆಗಳ ಭಕ್ತರಾದ ಜಯರಾಮಚಾರಿ, ಹಂಸಲೇಖ ಅವರ ಹಲವಾರು ಜನಪ್ರಿಯ ಗೀತೆಗಳನ್ನು ಇಲ್ಲಿ ವಿಶ್ಲೇಷಿಸಿದ್ದಾರೆ, ಅಪರೂಪದ ಹಾಡುಗಳನ್ನು ಪರಿಚಯಿಸಿದ್ದಾರೆ, ಈವರೆಗೆ ನಮ್ಮ ಕಿವಿ ಮಾತ್ರ ಕೇಳಿರುವ ಆದರೆ ಬುದ್ಧಿ ತಿಳಿದಿರದ ಹಲವಾರು ಕವಿಸೂಕ್ಷ್ಮಗಳಿರುವ ಹಂಸಲೇಖ ಅವರ ಅತ್ಯುತ್ತಮ ಚಿತ್ರಸಾಹಿತ್ಯವನ್ನು ಹೆಕ್ಕಿ ಅದ್ಭುತ ವಿವರಣೆ,ಹೊಳಹುಗಳೊಂದಿಗೆ ಇಲ್ಲಿ ಪ್ರಸ್ತುತಪಡಿಸಿದ್ದಾರೆ.

'ಒಂದು ನೆಲ್ಲುಚೆಲ್ಲಿದರೆ ರಾಶಿ ಮಾಡುವ ಇವಳದೇನೂ ಕರುಣೆ ಪ್ರೀತಿಯೋ' ಅಂತ ಬರೆದ ಹಂಸಲೇಖ ಅವರ ಕವಿತ್ವ, ಆಳವಾದ ದೇಸಿಪ್ರಜ್ಞೆ, ರಸಿಕಪ್ರಜ್ಞೆ, ನಾಡು, ನುಡಿಯ ಆಳ ಸತ್ವವನ್ನು ಅರಿಯಲು ಈ ಕೃತಿ, ಕಿಟಕಿ.

-ವಿಕಾಸ್ ನೇಗಿಲೋಣಿ

 

 

Author's Interviewhttps://youtu.be/jC36e04LCVo

View full details