Skip to product information
1 of 1

Vasudhendra

ಹಂಪಿ ಎಕ್ಸ್ ಪ್ರೆಸ್

ಹಂಪಿ ಎಕ್ಸ್ ಪ್ರೆಸ್

Publisher - ಛಂದ ಪ್ರಕಾಶನ

Regular price Rs. 195.00
Regular price Rs. 195.00 Sale price Rs. 195.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 150

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00
ನಾಲ್ಕು ತಾಸು ಧರ್ಮದರ್ಶನದ ಸರದಿಯಲ್ಲಿ ನಿಂತ ಮೇಲೆ ದೇವರ ದರ್ಶನವಾಯ್ತು. ಗದ್ದಲದೊಳಗೆ ಮಗನಿಗೆ ದೇವರು ಕಾಣಿಸದೇ ಹೋಗಿಬಿಟ್ಟಾನೋ ಎಂದು ಅತ್ಯಂತ ಆತಂಕದಲ್ಲಿದ್ದ ರಮಾಬಾಯಿ “ಇಂದಾಗಿ ನೋಡು. ವಜ್ರದ ಕಿರೀಟ ನೋಡು… ಹೂವಿನ ಅಲಂಕಾರ ನೋಡು…… ಎದೆ ಮೇಲಿರೋ ಕಂಠೀಹಾರ ನೋಡು ಹಣೆಗೆ ಹಚ್ಚಿರೋ ನಾಮ ನೋಡು…' ಎಂದು ಹೇಳುತ್ತಲೇ ಇದ್ದಳು. ಹುಲಿಕುಂಟಿ ಮಗನ ಬೋಡು ತಲೆಯನ್ನು ಸವರಿ 'ಸಜ್ಜಿಗೆ ಉಂಡಿ' ಎಂದು ತಮಾಷೆ ಮಾಡುತ್ತಲೇ ಇದ್ದ. ಗಂಡನ ಬೋಡು ತಲೆಯಲ್ಲಿ ಅಪರಿಚಿತ ಉಬ್ಬು-ತಗ್ಗುಗಳನ್ನು ಕಂಡು ರಮಾಬಾಯಿ ಅಚ್ಚರಿ ಪಡುತ್ತಿದ್ದಳು. “ಪೋವಂಡಿ, ಪೋವಂಡಿ' ಎನ್ನುವ ದಬ್ಬುವಿಕೆಯಲ್ಲಿಯೇ ದೇವರ ದರ್ಶನವಾಯ್ತು. ಹುಂಡಿಯ ಬಳಿಯೂ ಚಿಕ್ಕ ಸರದಿಯಿತ್ತು. ಭಕ್ತಾದಿಗಳು ತಮ್ಮ ತಮ್ಮ ಶಕ್ತಾನುಸಾರ ಕಾಣಿಕೆಯನ್ನು ಅರ್ಪಿಸುತ್ತಿದ್ದರು. ರಮಾಬಾಯಿ ಮಗನನ್ನು ಎತ್ತಿ ಹೆಗಲ ಮೇಲೆ ಕೂಡಿಸಿಕೊಂಡಳು. ಗುರುರಾಜನ ಕೈಯಲ್ಲಿ ಸೀಳುಲೋಟವಿತ್ತು. 'ಹಾಕು' ಎಂದು ಹುಲಿಕುಂಟಿ ಮಗನಿಗೆ ಅಪ್ಪಣೆ ಕೊಟ್ಟಿ, ಗುರುರಾಜ ಹಾಕಿದ. ದುಡ್ಡು, ಬಂಗಾರ, ಬೆಳ್ಳಿಯ ನಾಲಿಗೆ, ಕಣ್ಣು, ಮಗುವಿನ ಗೆಡ್ಡೆ, ಸೋಡಾಚೀಟಿಯ ಪತ್ರ, ಆಸ್ತಿಯ ಪತ್ರ, ಸತ್ತವರ ಬೂದಿಯ ಗಂಟು… ಹೀಗೆ ನೂರೆಂಟು ವಸ್ತುಗಳಿಂದ ತುಂಬಿ ತುಳುಕುತ್ತಿದ್ದ ಹುಂಡಿಯಲ್ಲಿ ಸೀಳುಕೋಟ ಸದ್ದಿಲ್ಲದೆ ಸೇರಿಕೊಂಡಿತು.
View full details