Skip to product information
1 of 2

G. S. Jayadeva

ಹಳ್ಳಿ ಹಾದಿ

ಹಳ್ಳಿ ಹಾದಿ

Publisher - ನವಕರ್ನಾಟಕ ಪ್ರಕಾಶನ

Regular price Rs. 250.00
Regular price Rs. 250.00 Sale price Rs. 250.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 248

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಶ್ರೀ ಜಯದೇವ ಗಿರಿಜನರ ಮಧ್ಯೆ ಇದ್ದು ಹಳ್ಳಿಯಲ್ಲಿ ದೀನಬಂಧು ಸಂಸ್ಥೆ ಹಾಗೂ ಶಾಲೆಗಳನ್ನು ಸ್ಥಾಪಿಸಿ ಆ ಮೂಲಕ ನೆಲಮೂಲ ಸಂಸ್ಕೃತಿಯ ಒಳಹೊರಗನ್ನು ಅರಿತವರು. ಅವರ "ಹಳ್ಳಿಹಾದಿ"ಯನ್ನು ಓದುತ್ತ ಹೋದಂತೆ ನಮಗೆ ಗೊತ್ತಿಲ್ಲದಿರುವ ಆದರೆ ನಮ್ಮದೇ ಆದ ಭಾರತವೊಂದು ಬಾಗಿಲು ತೆರೆದು ಒಳಗೆ ಕರೆದುಕೊಳ್ಳುತ್ತದೆ. ಇಲ್ಲಿ ಚಲಿಸದ ಇತಿಹಾಸವಿದೆ. ಮಕ್ಕಳ ಕತ್ತು ಹಿಸುಕುವ ಶಿಕ್ಷಣವಿದೆ, ಒಬ್ಬರ ಅಭಿವೃದ್ಧಿ ಇನ್ನೊಬ್ಬರಿಗೆ ಕಂಟಕ ವಾಗುವ ಅಪಾಯಗಳಿವೆ. ಚಿನ್ನದ ಧೂಳು ಮುಸುಕಿದ ಮಬ್ಬಿದೆ.

ಜಿ. ಎಸ್. ಜಯದೇವ

ಇಂಥ ವಾತಾವರಣವನ್ನು ಹಸನು ಮಾಡುವ ಉದ್ದೇಶದಿಂದ ಬರೆದ ಲೇಖನಗಳಿವು. ನೆಹರೂ ಯುಗದಿಂದ ನಮ್ಮ ಹೊಸ ಇತಿಹಾಸ ಹೊಸ ಆದರ್ಶಗಳೊಂದಿಗೆ ಸುರುವಾಯಿತು. ಈ ಆದರ್ಶಗಳಲ್ಲಿ ಎಷ್ಟನ್ನು ಅನುಭವಗಳಾಗಿ ಆಚರಣೆಗೆ ತರಲಾಯಿತೆಂಬ ಮಾತು ಬೇರೆ. ಆದರೆ ನಮ್ಮ ಮನಸ್ಸಿನ ಆಳದಲ್ಲಿ ಇಂಗ್ಲಿಷ್ ಎಂದರೆ ವಿದ್ಯೆ, ಶಿಕ್ಷಣದ ಗುಣಮಟ್ಟವೆಂದರೂ ಅದೇ ಎಂಬ ಸಮೀಕರಣ ಹುಟ್ಟಿಬಿಟ್ಟಿದೆ.

ಇಂಥ ಅನೇಕ ವಿಚಾರಗಳನ್ನ ತಮ್ಮ ಅನುಭವದ ಪಾಕದಲ್ಲಿ ಕರಗಿಸಿ ಬರೆದ ಲೇಖನಗಳಿವು. ಕನ್ನಡಿಗರು ಓದಲೇಬೇಕಾದ ಪುಸ್ತಕವಿದೆಂದು ಮಾತ್ರ ನಾನು ಒತ್ತಾಯಪೂರ್ವಕ ಹೇಳಬಲ್ಲೆ.

– ಚಂದ್ರಶೇಖರ ಕಂಬಾರ

ಮಾಡಿಕೊಂಡ * * ಆವರಿಸಿ ಆರಂಭದಲ್ಲಿ ಜಿ. ಎಸ್. ಜಯದೇವ ಅವರ ಲೇಖನಗಳು ಒಬ್ಬ ಪ್ರಾಮಾಣಿಕ ಸಾಮಾಜಿಕ ಕಾರ್ಯಕರ್ತನ ವಿಶ್ಲೇಷಣೆಗಳಂತೆ ಕಾಣುತ್ತಿದ್ದವು. ಆದರೆ ಆಮೇಲಿನ ಅವರ ಲೇಖನಗಳು, ಆಯ್ಕೆ ವಸ್ತುಗಳು ತಾವೇ ಮಾತಾಡತೊಡಗಿದಂತೆ ನಮ್ಮನ್ನು ಕೊಂಡುಬಿಡುತ್ತವೆ. ಯಶಸ್ಸನ್ನು ಅರಸುತ್ತಾ ನಾವು ಸೃಷ್ಟಿಸಿಕೊಂಡ ನರಕವನ್ನು ಬಿಚ್ಚಿಡ ತೊಡಗುತ್ತವೆ. ಸಿಟ್ಟುಗೊಂಡು ನಾವು ಪ್ರೀತಿಸಬೇಕಾದ ಭಾರತವನ್ನು ನಮಗೆ ಕಾಣಿಸುತ್ತವೆ. ಈ ಲೇಖನಗಳ ಉದ್ದಕ್ಕೂ ಅರಣ್ಯ ನಾಶ ಕಂಡು ಪಾಪೀರನ ಹಕ್ಕಿ ಕೂಗುವ "ಪಾಪಿಗಳಾ, ಪಾಪಿಗಳಾ!" ಎಂಬ ಸಂಕಟದ ಧ್ವನಿ ಕೇಳಿಸುತ್ತದೆ. ಹಳ್ಳಿಗಾಡಿನ ಆದಿವಾಸಿಗಳ ಬೆರಕೆ ಸೊಪ್ಪಿನ ತಿಳುವಳಿಕೆಗೂ ಬೆಲೆಯಿದೆ ಎಂಬ ಅರಿವು ಈ ಲೇಖನಗಳಲ್ಲಿ ಪಿಸುಗುಟ್ಟುತ್ತದೆ. "ಉಪ್ಪು ರುಚಿ ಕಳೆದುಕೊಂಡರೆ ಉಪ್ಪಿಗೆ ಉಪ್ಪು ಹಾಕುವವರು ಯಾರು" ಎಂಬ ಮಡುಗಟ್ಟಿದ ವಿಷಾದವೂ ಇವರ ಲೇಖನಗಳ ಆಳದಲ್ಲಿದೆ.

View full details

Talk about your brand

Share information about your brand with your customers. Describe a product, make announcements, or welcome customers to your store.