Jogi
Publisher -
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಬೆರಗಿನಿಂದ ಕಳಚಿಕೊಂಡ ಮೇಲೆ ಬರೆಯುವುದು ಯಾಕೆ?
ಇದು ಜೋಗಿಯ 'ಪರಸಂಗ'
ಇದು 140 ಅಕ್ಷರಗಳ ಲೋಕ. ಮಾತು, ಪ್ರೀತಿ, ಅಚ್ಚರಿ, ಆತಂಕ ನೋವು, ನಲಿವು ಎಲ್ಲವೂ ಎಡಕ್ಕಾಗಿ 140 ಅಕ್ಷರಗಳಲ್ಲಿ ಮುಗಿದು ಹೋಗಬೇಕು. 140 ಅಕ್ಷರಗಳ ಆಚೆಯೂ ಒಂದು ಲೋಕವಿದೆಯಾ? ಒಂದು ಅನುಭವ ಇದೆಯಾ ಎಂದು ಪಶ್ನಿಸಿಕೊಳ್ಳುತ್ತಿರುವ ಕಾಲ, ಇಂಗ್ಲಿಷ್ ಲೋಕದಲ್ಲಿ ಈಗಾಗಲೇ ಶೇಕ್ಸ್‌ಪಿಯರ್‌ನ ನಾಟಕಗಳನ್ನೂ, ಜಾಗತಿಕ ಕ್ಲಾಸಿಕ್‌ಗಳನ್ನೂ, ಮಹಾನ್ ವಿಮರ್ಶೆಗಳನ್ನೂ ಇದೇ 140 ಅಕ್ಷರದಲ್ಲಿ ಕೂಡಿಸುವ ಕೆಲಸ ಆರಂಭವಾಗಿದೆ. ನಾವೀಗ ಸೋಶಿಯಲ್ ನೆಟ್ವರ್ಕ್ ಕಾಲದಲ್ಲಿದ್ದೇವೆ. ಫೇಸ್ ಬುಕ್, ಟ್ವಿಟರ್, ಆರ್ಕುಟ್ ಹೀಗೆ ನಮ್ಮ ಬದುಕು, ಬರಹ ಎರಡೂ ಸಹಾ ಇಂತಿಷ್ಟು ಆಕರ ಒಂದಿಷ್ಟು ಸಾಲುಗಳಲ್ಲಿ ಮುಗಿದುಹೋಗುತ್ತಿದೆ. 140 ಅಕ್ಷರ, ಒಂದಾರು ಪ್ಯಾರಾ ನಂತರವೂ ಸಾಹಿತ್ಯವಿದೆ ಎನ್ನುವುದು ಸ್ಮಿಕ ಸಾವು. ಇಂದು ಅಚ್ಚರಿ. ಒಂದು ಹೊಸ ತಲೆಮಾರು ತಲೆ ಎತ್ತಿದೆ. ಅವರಿಗೆ ಪುಸ್ತಕ ಎನ್ನುವುದು ಆ ಹಾಳೆ, ಆ ಅಕ್ಷರ, ಆ ಘಮ ಅಲ್ಲ. ಅದು ಕಿಂಡಲ್ ಇಲ್ಲವೇ ಅಂಡ್ರಾಯ್ಡ್ನ ಒಂದು ಅಪ್ಲಿಕೇಶನ್ ಮಾತ್ರ.
ಇಂತಹ ಕಾಲದಲ್ಲಿ ಜೋಗಿ ಪಕ್ಕಾ ಪರಸಂಗದ ಗೆಂಡೆತಿಮ್ಮನಂತೆ ಹಾಜರಾಗಿದ್ದಾರೆ. ಅವರು ಹೊತ್ತು ತಂದಿರುವ ಗೂಡೆಯೊಳಗೆ ಎಷ್ಟೊಂದು ಕೌತುಕವಿದೆ. ಪಕ್ಕಾ ಶರೀಫ ಜ್ಜನಂತೆ 'ಬರಕೋ ಪದಾ ಬರಕೊ, ಎನ್ನುತ್ತಿದ್ದಾರೆ. ಬರೆಯುವುದು ಹೇಗೆ ಎನ್ನುವುದನ್ನೂ ರಸವತ್ತಾಗಿ ಉಣಬಡಿಸಲು ಜೋಗಿಗೆ ಮಾತ್ರ ಸಾಧ್ಯ. ಪರಸಂಗ ಕಟ್ಟಲು ಈ ಪುಸ್ತಕದ ಮೂಲಕ ಪ್ರೇರೇಪಿಸುತ್ತಿರುವ ಜೋಗಿಗೆ ಒಂದು ಸಲಾಂ..
ಜಿ ಎನ್ ಮೋಹನ್
ಪ್ರಕಾಶಕರು - ಅಂಕಿತ ಪುಸ್ತಕ
