N. Shankarappa Toranagallu
Publisher -
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಲೇಖಕ ಎನ್. ಶಂಕರಪ್ಪ ತೋರಣಗಲ್ಲು ಅವರ ಕೃತಿ ʼಹಳಗನ್ನಡ -ಸಂಗಂ ತಮಿಳ್ ಮತ್ತು ಸಂಗಂ ಕಾಲದ ತೀರ್ಮಾನʼ. ತಮಿಳು ಸಂಸ್ಕೃತಿಯ ಮೂಲ ಕೃತಿ ಇದು. ಶತಮಾನದ ಭಾಷೆ, ಸಾಹಿತ್ಯ ಹಾಗೂ ರಾಜಕೀಯ ಕುರಿತಾದ ವಿಚಾರಗಳನ್ನು ಪ್ರಸ್ತುತ ಕಾಲ ಘಟ್ಟದಲ್ಲಿ ಪಡೆಯಬೇಕಾದರೆ ಕಲ್ಬರಹಗಳು ಪ್ರಮುಖವಾಗಿರುತ್ತದೆ. ಹಿಂದಿನ ಕಾಲಕ್ಕೆ ಸೇರಿದ ಮಾಹಿತಿಗಳು ಸಿಗುವುದು ವಿರಳ ಹಾಗೂ ಅಸ್ಪಷ್ಟವಾಗಿರುತ್ತದೆ. ಆದರೆ ʼಸಂಗಂ ಸಾಹಿತ್ಯʼ, ಇತಿಹಾಸದ ಸಾಂಸ್ಕೃತಿಕ ಕುರುಹುಗಳನ್ನು ಹಾಗೂ ರಾಜಕೀಯ ಕುರಿತಾದ ಚಾರಿತ್ರಿಕ ಮಾಹಿತಿಗಳನ್ನು ಸ್ಪಷ್ಟವಾಗಿ ಕಲೆಹಾಕಿದೆ. ಹಳಗನ್ನಡ ಮತ್ತು ಸಂಗಂ ತಮಿಳಿನ ಹೋಲಿಕೆಯಂತಹ ಭಾಷಾ ವೈಜ್ಞಾನಿಕ ತಳಹದಿ , ಪಾಣಾರ- ಮೂವೇಂದರರ ನಿರುಗೆಗಳ ಬಳಕೆ ಮುಂತಾದ ಹೊಸ ಬಗೆಯ ವಿಶ್ಲೇಷಣೆಯ ಸಲಕರಣೆಗಳನ್ನು ಬಳಸಿ, ಸಂಗಂ ಕಾಲವನ್ನು ಈ ಕೃತಿಯಲ್ಲಿ ತೀರ್ಮಾನ ಮಾಡಲಾಗಿದೆ. ಚೋಳ, ಚೇರ, ಪಾಂಡ್ಯರು ಆಸ್ಥಾನ ಕವಿಗಳ ಮೂಲಕ ಹಿಂದಿನ ಕೆಲ ಐತಿಹಾಸಿಕ ಸಂಗತಿಗಳ ಎಳೆಯನ್ನು ಹಿಡಿದು ʼಸಂಗಂʼ ಹಾಡುಗಳನ್ನು ಈ ಕೃತಿಯ ಮೂಲಕ ಕಟ್ಟಿಕೊಡಲಾಗಿದೆ.
