Ganesha P. Nadora
ಹಾರುವ ಬಯಕೆ
ಹಾರುವ ಬಯಕೆ
Publisher - ನವಕರ್ನಾಟಕ ಪ್ರಕಾಶನ
- Free Shipping Above ₹350
- Cash on Delivery (COD) Available*
Pages -
Type -
Couldn't load pickup availability
ಮಕ್ಕಳಿಗೆ ಕಥೆ ಹೇಳುವುದೇನು ಮಹಾ ಎಂದರೆ ತಪ್ಪಾಗುತ್ತದೆ. ಕಥೆ ಕೇಳುತ್ತಲೇ ನೂರೆಂಟು ಪ್ರಶ್ನೆ ಎಸೆಯಬಲ್ಲ ಮಕ್ಕಳು ಜಾಣರೂ ಸೂಕ್ಷ್ಮಮತಿಗಳೂ ಆಗಿರುತ್ತಾರೆ. ಕಥೆಗಳ ಮೂಲಕ ಹೇಳುವ ನೀತಿ ಹೆಚ್ಚು ಪರಿಣಾಮಕಾರಿ. ಇಲ್ಲಿನ ಕಥೆಗಳು ಹಳ್ಳಿಯ ಜನಜೀವನ, ದಾರುಣ ಬಡತನ, ಕಪಟವರಿಯದ ಮುಗ್ಧ ಸ್ವಭಾವಗಳನ್ನು ಪರಿಚಯಿಸುತ್ತವೆ. ಇಂದು ನಮ್ಮ ಮುಂದೆ ನಗರ ಜೀವನ ಮತ್ತು ಹಳ್ಳಿಯ ಬದುಕು ಎಂಬ ಗೆರೆಯೆಳೆದ ವ್ಯವಸ್ಥೆಯಿದೆ. ಆದರೆ ಮಕ್ಕಳೆಲ್ಲ ಎಲ್ಲಿದ್ದರೂ ಸಮಾನ ಕುತೂಹಲಿಗಳೆಂದು, ಉತ್ಸಾಹದಲ್ಲಿ ಯಾರೂ ಹಿಂದಿಲ್ಲವೆಂದು ಈ ಕಥೆಗಳು ಹೇಳುತ್ತಿವೆ. ಅವಕಾಶ-ಪ್ರೋತ್ಸಾಹ ಎಲ್ಲ ಮಕ್ಕಳಿಗೂ ಸಿಕ್ಕಲ್ಲಿ ಭೇದಭಾವ ಇಲ್ಲವೆಂಬ ನೀತಿ ಇಲ್ಲಿದೆ.
ಈ ಕೃತಿಯ ಲೇಖಕ ಶ್ರೀ ಗಣೇಶ ಪಿ. ನಾಡೋರ ಮಕ್ಕಳಿಗಾಗಿ ಹಲವು ವರ್ಷಗಳಿಂದಲೂ ಬರೆಯುತ್ತ ಬಂದವರು. ಹೇಳ ಬೇಕಾದ್ದನ್ನು ಸಾಕಷ್ಟು ಸರಳವಾಗಿ ಹೇಳುವುದು ಇವರ ವೈಶಿಷ್ಟ್ಯ, ನವಕರ್ನಾಟಕ ಪ್ರಕಟಿಸಿದ ಇವರ 'ಬೆಳ್ಳಕ್ಕಿ ಮತ್ತು ಬುಲ್‌ಬುಲ್' ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಕ್ಕಳ ಸಾಹಿತ್ಯ ಪ್ರಶಸ್ತಿ : 'ಪ್ರಾಣಿಗಳ್ಳರು ಮತ್ತು ಮಯೂರ' ಕೃತಿಗೆ ಬಿ.ಎಂ.ಶ್ರೀ. ಪ್ರತಿಷ್ಠಾನದ ಸಾವಿತ್ರಮ್ಮ ದತ್ತಿ ಮಕ್ಕಳ ಪ್ರಶಸ್ತಿ ಲಭಿಸಿವೆ.
Share

Subscribe to our emails
Subscribe to our mailing list for insider news, product launches, and more.