Basavaraj Donur
ಹಾಲಹಳ್ಳ
ಹಾಲಹಳ್ಳ
Publisher - ಮನೋಹರ ಗ್ರಂಥಮಾಲಾ
- Free Shipping Above ₹350
- Cash on Delivery (COD) Available*
Pages - 716
Type - Paperback
Couldn't load pickup availability
ಬಿಜಾಪುರ ಜಿಲ್ಲೆಯ ಈ ಹಳ್ಳಿಯೊಳಗಿನ ಜೀವನ ಬಸವರಾಜ ಡೋಣೂರರ ಕತೆಗಳನ್ನು ರೂಪಿಸಿದೆ, ತನ್ನ ರಕ್ತ-ಮಾಂಸಗಳನ್ನು, ಭಾವನೆಗಳನ್ನು, ಅಷ್ಟೇ ಅಲ್ಲ, ತನ್ನ ನೈತಿಕತೆಯನ್ನು ಈ ಕತೆಗಳಿಗೆ ದಾನ ಮಾಡಿದೆ. ಕತೆಗಾರ ಮತ್ತು ಕತೆಗಳ ನಡುವೆ ಅಗತ್ಯವಾದ ದೂರವೂ ಇಲ್ಲಿದೆ. ಈ ಕತೆಗಳ ಜೀವನ ಕತೆಗಾರನ ಸ್ವಂತ ಜೀವನವೇ ಆಗಿರಬಹುದಾದರೂ, ಈಗ ಅದೆಲ್ಲ ಅವನ ಗತಕಾಲದ ನೆನಪುಗಳಾಗಿ ಮೂಡಿದೆ. ಕತೆಯಾಗಿ ಮೂಡಿದಾಗ ಅದರಲ್ಲಿ ಮತ್ತೇನೋ ಸೇರಿಕೊಳ್ಳುತ್ತದೆ. 'ಶಿಥಿಲತೆ' ಕತೆಯಲ್ಲಿಯ ಮಲ್ಲನಗೌಡನ ಅಂತರಂಗದ ತುಮುಲದೊಂದಿಗೆ ಸಹಾನುಭೂತಿಯನ್ನು ತೋರಿಸುತ್ತಲೇ ಅವನ ಧರ್ಮಸೂಕ್ಷ್ಮದ ಮೌಲ್ಯಮಾಪನವನ್ನು ಮಾಡುತ್ತದೆ. ಅವನ ಬಹಿರಂಗದ ಲೋಕಪ್ರಿಯತೆಗೂ, ಅವನ ಅಂತರಂಗದ ರಹಸ್ಯಮಯವಾದ ಪ್ರಣಯಸಾಹಸಕ್ಕೂ ಇರುವ ಅಂತರವನ್ನು ತೆರೆದು ತೋರಿಸುತ್ತದೆ.
-ಕೀರ್ತಿನಾಥ ಕುರ್ತಕೋಟಿ
ಚಿತ್ತಾಲರಿಗೆ ಉತ್ತರ ಕನ್ನಡದ ಹನೇಹಳ್ಳಿ ಇದ್ದಂತೆ, ಡೋಣೂರರಿಗೆ ವಿಜಾಪುರ ಪರಿಸರದ ಶಾಂತನಾಳ ಇದೆ. 'ಹಯನ' ದಂಥ ಒಂದೆರಡು ಕತೆಗಳನ್ನು ಬಿಟ್ಟರೆ, ಅವರ ಎಲ್ಲ ಕಥೆಗಳ ಹುಟ್ಟು ಶಾಂತನಾಳದ ಚಲನಶೀಲ ಬದುಕಿನಲ್ಲಿಯೇ ಇದೆ. ಈ ಬದುಕಿನ ಲಯಗಳು, ಅಲ್ಲಿ ಬಾಳುವ ಗಂಡು-ಹೆಣ್ಣು, ಅವರ ಬಾಳ್ವೆಯ ಆಗು-ಹೋಗುಗಳು, ಅವರ ಮಾತು, ಕ್ರಿಯೆ ಡೋಣೂರರ ಕಥೆಗಳಿಗೆ ಸಾಮಗ್ರಿ ಒದಗಿಸಿವೆ. ಅವರ ಕಥೆಗಳಲ್ಲಿ ಮೂಡಿಬರುವ ನೈತಿಕತೆಯ ಸ್ವರೂಪ ಕೂಡ ಗ್ರಾಮೀಣವಾದದ್ದು. ಶಾಂತನಾಳದ ಆಯ್ಕೆಯಿಂದ ಡೋಣೂರರಿಗೆ ಲಭಿಸಿದ ಅನುಕೂಲತೆಗಳಲ್ಲಿ ಜೀವಂತ ಭಾಷೆಯ ಅನುಕೂಲತೆಯೂ ಸೇರಿದೆ.
'ಹಯನ'ದ ಕ್ರಿಯೆ ಶಾಂತನಾಳದ ಹೊರಗಡೆಯೆ ನಡೆಯುತ್ತದೆಯಾದರೂ ಈ ಕಥೆಯ ನಾಯಕ ಅಮೃತನ ನೈತಿಕ ಪ್ರಜ್ಞೆಯಲ್ಲಿ ಸಾಕಷ್ಟು ಅಂತರವಿದೆ. ಅಮೃತ ಗ್ರಾಮಮೂಲದ ತನ್ನ ಮುಗ್ಧತೆಯನ್ನು ಕಳೆದುಕೊಳ್ಳುವುದೇ ಇಲ್ಲ. ಈ ಮುಗ್ಧತೆಯೇ ಶಾಲಿನಿಯನ್ನು ಆಕರ್ಷಿಸುತ್ತದೆ. ಆದರೆ ಅದನ್ನು ಒಪ್ಪಿಕೊಳ್ಳುವ ಮೊದಲು ಅವಳು ನೋವಿನ ಹಾದಿಯನ್ನು ತುಳಿಯಬೇಕಾಗುತ್ತದೆ.
-ಹಾಜಿ. ಎಸ್. ಆಮೂರ
Share

Subscribe to our emails
Subscribe to our mailing list for insider news, product launches, and more.