Skip to product information
1 of 2

Chithra Santhosh

ಹಾಡು ತೊರೆಯ ಜಾಡು

ಹಾಡು ತೊರೆಯ ಜಾಡು

Publisher - ಸಾಹಿತ್ಯ ಭಂಡಾರ

Regular price Rs. 310.00
Regular price Rs. 310.00 Sale price Rs. 310.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 208

Type - Paperback

Gift Wrap
Gift Wrap Rs. 15.00

ಒಂದೆರಡು ಲೇಖನಗಳನ್ನು ಬರೆದ ಮಾತ್ರಕ್ಕೆ ಯಾರೂ ಕೂಡ ಅಂಕಣಕಾರರು/ ಲೇಖಕರು ಎನಿಸಿಕೊಳ್ಳುವುದಿಲ್ಲ. ಅವರು ಬರೆದ ಲೇಖನದಿಂದ ನಾಲ್ಕು ಮಂದಿಗೆ ಖುಷಿಯಾಗಬೇಕು, ಆಸಕ್ತಿಯಿಂದ ಮಾತನಾಡಬೇಕು. ಬರೆಯುವಿಕೆಯಲ್ಲಿಯೂ ಸ್ವಾರಸ್ಯ ಇರಬೇಕು, ಜೊತೆಗೆ ಲೇಖನ ಆಳವಾದ ಅಧ್ಯಯನ ಹೊಂದಿರಬೇಕು. ಹಾಗಿದ್ದಾಗ ಮಾತ್ರ ಸಮರ್ಥ ಲೇಖಕರು ಅಥವಾ ಅಂಕಣಕಾರರು ಎನಿಸಿಕೊಳ್ಳಲು ಸಾಧ್ಯ. ನಿಜವಾದ ಅರ್ಥದಲ್ಲಿ ಅಂಕಣಕಾರರು ಎನಿಸಿಕೊಳ್ಳಲು ಚಿತ್ರಾ ಸಂತೋಷ್ ಅರ್ಹರು ಎಂದು ನನಗನಿಸುತ್ತದೆ. ಏಕೆಂದರೆ ನಾನು ಅವರ ಬರಹಗಳನ್ನು ಅನೇಕ ವರ್ಷಗಳಿಂದ ಬಲ್ಲೆ. ಅವರ ಎಲ್ಲಾ ಅಂಕಣ ಬರಹಗಳು, ಕಲೆಯ ಬಗ್ಗೆ ಬರೆಯುವ ಇತರೆ ಬರಹಗಳನ್ನೂ ಓದಿದ್ದೇನೆ. ಬಣ್ಣ, ಲೇಪ. ವೈಭವೀಕರಣ ಯಾವುದೂ ಇಲ್ಲದೆ ಬಹಳ ಸ್ವಾರಸ್ಯವಾಗಿ ಮತ್ತು ಸ್ಪಷ್ಟವಾಗಿ ಬರೆಯುತ್ತಾರೆ. ಸಂಗೀತದ ಮೇಲೆ ಪ್ರೀತಿಯಿಂದ ಬರೆಯುತ್ತಾರೆ.

ಜನರಿಗೆ ಕಲೆಯ ಅಭಿರುಚಿ ಹೆಚ್ಚಾಗಬೇಕು, ಈ ಮೂಲಕ ಕಲೆಯ ಅಭಿವೃದ್ಧಿಯಾಗಬೇಕು ಎನ್ನುವ ದೃಷ್ಟಿಕೋನದ ನಿಲುವಿನಲ್ಲಿ ಅವರು ಬರೆಯುತ್ತಿರುವ ಕಾಯಕ ಶ್ಲಾಘನೀಯ. ಈಗಿನ ಕಾಲದಲ್ಲಿ ಸಂಗೀತದ ಬಗ್ಗೆ ಲೇಖನಗಳನ್ನು ಎಷ್ಟು ಜನ ಬರೆಯುತ್ತಾರೆ? ಬರೆದರೂ ಆ ಕೆಲಸವನ್ನು ಕನ್ಸಿಸ್ಟೆಂಟ್ ಆಗಿ ಮಾಡುವವರು ಎಷ್ಟು ಜನ ಇದ್ದಾರೆ? ಹಾಗಾಗಿ, ಚಿತ್ರಾ ಸಂತೋಷ್ ಅವರದ್ದು ಬಹಳ ಅಪರೂಪದ ವ್ಯಕ್ತಿತ್ವ ಎನ್ನಬಹುದು. ಅವರು ಬರೆಯುವ ಪ್ರತಿ ವಿಷಯದಲ್ಲಿಯೂ ವೆರಿ ಪರ್ಟಿಕ್ಯುಲರ್, ಬಹಳ ಅಧ್ಯಯನಶೀಲತೆ ಎದ್ದು ಕಾಣಿಸುತ್ತದೆ. ಯಾವುದೇ ಲೇಖನ ಬರೆಯುವಾಗಲೂ ಶ್ರಮ ಮತ್ತು ಅಷ್ಟೇ ಪ್ರೀತಿಯಿಂದ ಹಠಕ್ಕೆ ಬಿದ್ದಂತೆ ಬರೆಯುತ್ತಾರೆ. ಅದು ಕೂಡ ಸಂಗೀತದಂತಹ ಮಹಾನ್ ಸಾಧನೆಯೇ ಸರಿ. ಸಂಗೀತದ ಬರಹಗಳು ಶಾಸ್ತ್ರಬದ್ಧವಾಗಿರುತ್ತವೆ, ಜನ ಸಾಮಾನ್ಯರಿಗೆ ಅರ್ಥವಾಗುವ ರೀತಿ ಇರುವುದಿಲ್ಲ ಎಂಬ ಮಾತುಗಳಿವೆ. ಆದರೆ ಚಿತ್ರಾ ಸಂತೋಷ್ ಅವರು ಬರೆಯುವ ರೀತಿ ಸರ್ವರಿಗೂ ಅರ್ಥವಾಗುವ ರೀತಿ ಇರುತ್ತದೆ. ಬಹಳ ಸ್ಪಷ್ಟತೆಯಿಂದ ಬರೆಯುತ್ತಾರೆ. ದಿಗ್ಗಜ ಸಂಗೀತ ಕಲಾವಿದರ ಪರಿಚಯ ಮಾತ್ರವಲ್ಲ ಯಾರಿಗೂ ತಿಳಿಯದ ಸಂಗೀತದ ಅನೇಕ ಸೂಕ್ಷ್ಮ ವಿಷಯಗಳನ್ನು ಅವರು ತಮ್ಮ ಬರಹದ ಮೂಲಕ ನಾಡಿನ ಜನತೆಗೆ ಪರಿಚಯಿಸಿದ್ದಾರೆ. ಈಗ ತಮ್ಮ ಎಲ್ಲಾ ಲೇಖನಗಳನ್ನು ಒಟ್ಟುಗೂಡಿಸಿ ಪುಸ್ತಕ ರೂಪದಲ್ಲಿ ತರುತ್ತಿರುವುದು ಬಹಳ ಸಂತೋಷದಾಯಕ ವಿಚಾರ, ಅವರಿಂದ ಇನ್ನಷ್ಟು ಬರಹಗಳು ಹೊರಬರಲಿ ಎನ್ನುವ ಶುಭಹಾರೈಕೆ.

-ಪ್ರೊ. ಎಲ್. ನರೇಂದ್ರ ನಾಯಕ್
ಉಪಾಧ್ಯಕ್ಷರು, ಸಂಗೀತ ಭಾರತಿ ಪ್ರತಿಷ್ಠಾನ, ಮಂಗಳೂರು, ಹಾರ್ಮೋನಿಯಂ ಕಲಾವಿದರು ಹಾಗೂ ಎಕ್ಸ್ಪರ್ಟ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು

View full details