Skip to product information
1 of 1

Jogi

ಗುರುವಾಯನಕೆರೆ

ಗುರುವಾಯನಕೆರೆ

Publisher -

Regular price Rs. 170.00
Regular price Rs. 170.00 Sale price Rs. 170.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages -

Type -

Gift Wrap
Gift Wrap Rs. 15.00
'ಗುರುವಾಯನ ಕೆರೆ' ಒಂದು ಮಟ್ಟ ಕಥಾ ಸರಿತ್ಸಾಗರ. ಇದನ್ನು ಜೋಗಿ ಒಂದು ಊರಿನ ಆತ್ಮಚರಿತ್ರೆ' ಎಂದಿದ್ದಾರೆ. ಆದರೆ ಇದರಲ್ಲಿ ಚರಿತ್ರೆಯ ವಾಸ್ತವದಷ್ಟೇ ಜೋಗಿ ಅವರ ಸಮೃದ್ಧ ಕಲ್ಪನೆಯೂ ಬೆರೆತಿದೆ.

ಇಲ್ಲಿ ಅನೇಕ ರೋಚಕ ಪ್ರಸಂಗಗಳಿವೆ. ಅದರಲ್ಲೂ ಬಾಬಣ್ಣನ ಎತ್ತುಗಳು, ನಾಯಕರ ಅಂಗಡಿಗೆ ಇಲಿಗಳ ಕಾಟ, ಜಾಹ್ನವಿಯ ದಿವ್ಯಾನುಭೂತಿಯ ಪ್ರೇಮ, ಉಗ್ಗಿನ ನಳಿನಾಕ್ಷಿಯ ಅಪಾತ್ರದಾನ, ಬೀಡಿ ಮರಾಣ, ಕುಸುಮಬಾಲೆಯ ಗುಪ್ತಾನುರಾಗ, ಸುನಂದಳ ಬಂಡಾಯ ಹಾಗೂ ಅಂತ್ಯದ ದುರಂತ ನಾಟಕ- ಇವುಗಳನ್ನು ಓದಿಯೇ ಸವಿಯಬೇಕು, ಕಳೆದ ಶತಮಾನದ ಎಪ್ಪತ್ತು ಎಂಭತ್ತರ ದಶಕಗಳಲ್ಲಿ ನಾಡು ಕಂಡ ಹಲವು ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಪಲ್ಲಟ, ಪರಿವರ್ತನೆಗಳನ್ನು ಗುಪ್ತಗಾಮಿನಿಯಂತೆ ಈ ಕೃತಿ ಗರ್ಭೀಕರಿಸಿಕೊಂಡಿರುವುದು ಇದರ ಹೆಗ್ಗಳಿಕೆ. ಅತಿಭಾವುಕತೆ, ಅತಿರಂಜಕತೆ ಇಲ್ಲದ, ಹದವಾದ ಹಾಸ್ಯಪ್ರಜ್ಞೆಯಿಂದ ಕೂಡಿದ ಜೋಗಿ ಅವರ ಸರಳ, ನೇರ ನಿರೂಪಣೆ ಕೃತಿಯ ಓದನ್ನು ಆಹ್ಲಾದಕರವಾಗಿಸಿದೆ, ಅಷ್ಟೇ ಪರಿಣಾಮಕಾರಿಯೂ ಆಗಿಸಿದೆ.

ತಪ್ಪದೆ ಕೊಂಡು ಓದಿರಿ; ತಪ್ಪಿಸಿಕೊಂಡು ನಿರಾಶರಾಗದಿರಿ.

ಬಿ ಆರ್ ಲಕ್ಷ್ಮಣರಾವ್
View full details