Skip to product information
1 of 1

Prof. K. M. Seetaramaiah

ಗ್ರೀಕ್ ಮಿಥಕಗಳು

ಗ್ರೀಕ್ ಮಿಥಕಗಳು

Publisher - ಐಬಿಹೆಚ್ ಪ್ರಕಾಶನ

Regular price Rs. 375.00
Regular price Rs. 375.00 Sale price Rs. 375.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 562

Type - Hardcover

ಪುರಾಣ ಜಗತ್ತಿನ ಒಂದು ಸುಂದರ ಇಣಿಕು ನೋಟವನ್ನು ಲೇಖಕರು ಈ ಗ್ರಂಥದಲ್ಲಿ ಕಾಣಿಸಿದ್ದಾರೆ. ತುಂಬ ಆಳವಾದ ಅಧ್ಯಯನಶೀಲತೆ, ಸಾರವತ್ತಾದ ಅಂಶಗಳ ಸಂಗ್ರಹಣ ಮತ್ತು ತುಂಬ ಸರಳವಾದ ಆಕರ್ಷಕ ಗದ್ಯದ ಕಥನಕ್ರಮಗಳನ್ನು ಈ ಗ್ರಂಥದಲ್ಲಿ ಕಾಣಬಹುದಾಗಿದೆ. ಭಾರತೀಯ ಮಿಥಕಗಳಂತೆಯೇ ಗ್ರೀಕ್ ಮಿಥಕಗಳೂ ಇತಿಹಾಸವನ್ನು ತಮ್ಮ ಗರ್ಭದಲ್ಲಿರಿಸಿಕೊಂಡ ಆದಿಮ ಕಥನಗಳಾಗಿವೆ. ಪಾಶ್ಚಾತ್ಯ ಸಾಹಿತ್ಯದಲ್ಲಿ ಲೀಲಾಜಾಲವಾಗಿ ಉಲ್ಲೇಖಿತವಾಗುವ ಪುರಾಣನಾಮಗಳ ಸಮಗ್ರಕೋಶವೊಂದರ ಅಗತ್ಯ ಕನ್ನಡ ಸಾಹಿತ್ಯ ಪ್ರೇಮಿಗಳಿಗೆ ಎಷ್ಟಿದೆಯೆಂಬುದನ್ನು ಹೇಳಬೇಕಾಗಿಲ್ಲ. ಈ ಅಗತ್ಯವನ್ನು ಶ್ರೀ ಕೆ. ಎಂ. ಸೀತಾರಾಮಯ್ಯನವರ ಗ್ರಂಥವು ಸಮರ್ಪಕವಾಗಿ ಪೂರೈಸಿಕೊಡುತ್ತದೆ. ತುಂಬ ಭಾವುಕವಾದ ಕಥೆಗಳನ್ನು ಲೇಖಕರು ಹೃದ್ಯವಾಗಿ ನಿರೂಪಿಸಿರುವುದೇ ಅಲ್ಲದೆ ಅಗತ್ಯ ಕಂಡು ಬಂದ ಸಂದರ್ಭಗಳಲ್ಲಿ ಅವುಗಳ ಸಾಂಸ್ಕೃತಿಕ ಸಂಬಂಧಗಳನ್ನೂ ಸಮಂಜಸವಾಗಿ ಜೋಡಿಸಿ ಕೊಟ್ಟಿದ್ದಾರೆ. ತುಂಬ ಮನೋರಂಜಕವೂ ಹೃದಯಂಗಮವೂ ಆದ ಇಲ್ಲಿಯ ಕಥೆಗಳು ನಮ್ಮನ್ನು ಸುಲಭವಾಗಿ ಗ್ರೀಕ್ ಸಾಂಸ್ಕೃತಿಕ ಆವರಣಕ್ಕೆ ಕರೆದುಕೊಂಡು ಹೋಗುತ್ತವೆ. ಮೂಲದ ಹೆಸರುಗಳನ್ನು ಯಾವ ರೀತಿ ಕೊಡಬೇಕು ಎಂಬಂಥ ಸಣ್ಣ ವಿಷಯದ ಬಗೆಗೂ ಲೇಖಕರು ತುಂಬ ಲಕ್ಷ್ಯ ಹರಿಸಿರುವುದನ್ನು ಗಮನಿಸಿದಾಗ ಅವರ ಅಧ್ಯಯನದ ಶಿಸ್ತು ಬೆರಗುಗೊಳಿಸುತ್ತದೆ.

ಇಂಥದೊಂದು ಸಮಗ್ರಕೋಶದ ಅಗತ್ಯ ನಮ್ಮ ಭಾಷೆಗೆ ಇತ್ತು. ಅದನ್ನು ಪೂರೈಸಿರುವ ಲೇಖಕರು ಕನ್ನಡ ಸಾಹಿತ್ಯಕ್ಕೆ ಒಂದು ಅಪೂರ್ವ ಕಾಣಿಕೆ ಸಲ್ಲಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನಂಥ ಮಾತೃ ಸಂಸ್ಥೆ ಇಂಥ ಪುಸ್ತಕಗಳನ್ನು ಪ್ರಕಟಿಸಿದರೆ ಕನ್ನಡದ ಸಾರಸ್ವತಲೋಕ ಪರಿಷತ್ತಿಗೂ ಲೇಖಕರಿಗೂ ತುಂಬ ಕೃತಜ್ಞರಾಗಿರುತ್ತಾರೆ ಎಂದು ನಿಸ್ಸಂದೇಹವಾಗಿ ಹೇಳಬಯಸುತ್ತೇನೆ.

–ಪ್ರೊ|| ಅ. ರಾ. ಮಿತ್ರ
View full details

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
G
GS Subhash
Greek Mithakagalu

Very satisfied with packing and the delivery was fast too.