Skip to product information
1 of 1

Y. G. Muralidharan

ಗ್ರಾಹಕ ಸಂರಕ್ಷಣಾ ಅಧಿನಿಯಮ

ಗ್ರಾಹಕ ಸಂರಕ್ಷಣಾ ಅಧಿನಿಯಮ

Publisher -

Regular price Rs. 60.00
Regular price Rs. 60.00 Sale price Rs. 60.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಕಳೆದ ಒಂದೆರಡು ದಶಕದಿಂದೀಚೆಗೆ ಮಾರುಕಟ್ಟೆಯಲ್ಲಿ ಆಗಿರುವ ಬದಲಾವಣೆ ಹಾಗೂ ಮಾಹಿತಿ ತಂತ್ರಜ್ಞಾನದ ಹೊಸ ಆವಿಷ್ಕಾರಗಳು ಗ್ರಾಹಕರ ಮೇಲೆ ದಟ್ಟ ಪರಿಣಾಮ ಉಂಟುಮಾಡಿದೆ. ಗ್ರಾಹಕರ ಮತ್ತು ಮಾರಾಟಗಾರರ ನಡುವಿನ ಸಂಬಂಧ ಮತ್ತಷ್ಟು ಕ್ಲಿಷ್ಟವಾಗಿದೆ. ಹೊಸ ತಂತ್ರಜ್ಞಾನದಿಂದ ಗ್ರಾಹಕರಿಗೆ ಸಾಕಷ್ಟು ಅನುಕೂಲಗಳಾಗಿದ್ದರೂ, ಅದರಿಂದ ಅಪಾಯಗಳೂ ಹೆಚ್ಚಾಗಿವೆ. ಈ ಹಿನ್ನೆಲೆಯಲ್ಲಿ ಗ್ರಾಹಕ ಸಂರಕ್ಷಣಾ ಅಧಿನಿಯಮವನ್ನು ಬದಲಿಸುವ ಅವಶ್ಯಕತೆಯನ್ನು ಗಮನಿಸಿ ಕೇಂದ್ರ ಸರ್ಕಾರವು 1986ರ ಅಧಿನಿಯಮವನ್ನು ಸಂಪೂರ್ಣವಾಗಿ ಪರಿಷ್ಕರಿಸಿ, ಅದರ ಬದಲಾಗಿ ಗ್ರಾಹಕ ಸಂರಕ್ಷಣಾ ಅಧಿನಿಯಮ 2019 ಜಾರಿಗೊಳಿಸಿದೆ.

ಈ ಹೊಸ ಅಧಿನಿಯಮದಲ್ಲಿ ಕೆಲವು ವಿಶೇಷ ಅಂಶಗಳನ್ನು ಸೇರಿಸಿದ್ದು, ಅಧಿನಿಯಮದಲ್ಲಿ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರವನ್ನು ಸ್ಥಾಪಿಸುವ ಅಂಶವನ್ನು ಸೇರಿಸಲಾಗಿದೆ. ಅದೇ ರೀತಿ ಸರಕು ಬಾಧ್ಯತೆ, ವಿದ್ಯುನ್ಮಾನ ವಾಣಿಜ್ಯ, ಗ್ರಾಹಕರ ಸಮಸ್ಯೆಗಳನ್ನು ಬಗೆಹರಿಸಲು ಮಧ್ಯಸ್ಥಿಕೆ ವೇದಿಕೆ ಇತ್ಯಾದಿ ಸೇರ್ಪಡೆ ಮಾಡಲಾಗಿದೆ. ಜೊತೆಗೆ 1986ರಲ್ಲಿದ್ದ ಕೆಲವು ಪದಗಳ ಅರ್ಥವನ್ನು ವಿಸ್ತರಿಸಲಾಗಿದೆ. ಗ್ರಾಹಕ ಸಂರಕ್ಷಣಾ ವೇದಿಕೆಯನ್ನು 'ಆಯೋಗ' ಎಂದು ಮರುನಾಮಕರಣ ಮಾಡಲಾಗಿದೆ. ಆಯೋಗ ನೀಡುವ ತೀರ್ಪುಗಳನ್ನು ಜಾರಿಗೊಳಿಸದೇ ಇದ್ದಲ್ಲಿ ನೀಡಬೇಕಾದ ದಂಡವನ್ನು ಹೆಚ್ಚಿಸಲಾಗಿದೆ. ಇದೇ ರೀತಿ ಇನ್ನೂ ಅನೇಕ ಬದಲಾವಣೆಗಳನ್ನು ಮಾಡಲಾಗಿದೆ. ಈ ಎಲ್ಲ ಮಾರ್ಪಾಡುಗಳು ಗ್ರಾಹಕರನ್ನು ಸಶಕ್ತರನ್ನಾಗಿ ಮಾಡುವುದರಲ್ಲಿ ಸಂಶಯವಿಲ್ಲ.

ಗ್ರಾಹಕರು ಈ ಕೈಪಿಡಿಯನ್ನು ಅಧಿನಿಯಮಕ್ಕೆ ಪರ್ಯಾಯ' ಎಂದು ಭಾವಿಸಬಾರದು. ಅಧಿನಿಯಮದ ಮುಖ್ಯಾಂಶಗಳನ್ನು ಪರಿಚಯಿಸುವುದಷ್ಟೇ ಈ ಕೈಪಿಡಿಯ ಉದ್ದೇಶ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)