Skip to product information
1 of 1

Dr. D. V. Guruprasad

ಗೂಢಚರ್ಯೆಯ ಆ ದಿನಗಳು

ಗೂಢಚರ್ಯೆಯ ಆ ದಿನಗಳು

Publisher - ಸಪ್ನ ಬುಕ್ ಹೌಸ್

Regular price Rs. 195.00
Regular price Rs. 195.00 Sale price Rs. 195.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಲೇಖಕರ ಬಗ್ಗೆ

1976ರಲ್ಲಿ ಐಪಿಎಸ್, ಸೇವೆಗೆ ಸೇರಿ ಕರ್ನಾಟಕ ವೃಂದಕ್ಕೆ ನೇಮಕವಾದ ಡಿ.ವಿ. ಗುರುಪ್ರಸಾದ್, ರಾಜ್ಯ ಕಂಡ ದಕ್ಷ ಪೊಲೀಸ್ ಅಧಿಕಾರಿಗಳಲ್ಲೊಬ್ಬರು, ರಾಜ್ಯ ಗುಪ್ತಚರ ದಳ ಹಾಗೂ ಸಿ.ಐ.ಡಿಯ ಮುಖ್ಯಸ್ಥರಾಗಿದ್ದ ಕೆಲವೇ ಅಧಿಕಾರಿಗಳಲ್ಲಿ ಅವರೊಬ್ಬರು. ಪೊಲೀಸ್ ಮಹಾನಿರ್ದೇಶಕರಾಗಿ 2011 ರಲ್ಲಿ ನಿವೃತ್ತಿ ಹೊಂದಿದ ನಂತರ ಶಿಕ್ಷಣ ಪ್ರತಿಷ್ಠಾನವೊಂದರಲ್ಲಿ ಸೇವೆ ಸಲ್ಲಿಸಿ ಈಗ ತಮ್ಮ ಸಂಪೂರ್ಣ ಸಮಯವನ್ನು ಬರವಣಿಗೆಗೆ ಮೀಸಲಿಟ್ಟಿದ್ದಾರೆ. 60ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವುದಲ್ಲದೇ ಪ್ರಸ್ತುತ ಜನಪ್ರಿಯ ಅಂಕಣಕಾರರಾಗಿ ಕನ್ನಡ ಸಾರಸ್ವತ ಲೋಕಕ್ಕೆ ಚಿರಪರಿಚಿತರಾಗಿದ್ದಾರೆ.

ಈ ಕೃತಿಯ ಬಗ್ಗೆ

"ಡಾ. ಡಿ.ವಿ. ಗುರುಪ್ರಸಾದರ ಈ ಹೊಚ್ಚಹೊಸ ಕೊಡುಗೆ, “ಗೂಢಚರ್ಯೆಯ ಆ ದಿನಗಳು" ಅವರ ಪೊಲೀಸ್ ಸೇವಾವಧಿಯ ಅತ್ಯಂತ ರೋಚಕ ಅಧ್ಯಾಯದ ಕುತೂಹಲಕರ ಕಥಾನಕ, ತಾವು ಗುಪ್ತಚರದಳದ ಮುಖ್ಯಸ್ಥರಾಗಿ ಕರ್ನಾಟಕದ ಮೂವರು ಮುಖ್ಯಮಂತ್ರಿಗಳ 'ಕಣ್ಣು ಮತ್ತು ಕಿವಿ'ಯಾಗಿ ಕರ್ತವ್ಯ ನಿರ್ವಹಿಸಿದ ಅವಧಿಯಲ್ಲಿ ಕಣ್ಣಾರೆ ಕಂಡನುಭವಿಸಿದ ಹಲವು ಹತ್ತು ವ್ಯಕ್ತಿ, ವಿದ್ಯಮಾನಗಳ ಕುರಿತಂತ ಒಂದು ಸ್ವಾರಸ್ಯಕರ ಪ್ರತ್ಯಕ್ಷದರ್ಶಿ ವೃತ್ತಾಂತಗಳ ನಿರೂಪಣೆ ಇಲ್ಲಿದೆ. ಅನೇಕ ಆಶ್ಚರ್ಯದಾಯಕ ಸಂಗತಿಗಳ ಆಸಕ್ತಿದಾಯಕ ಅನಾವರಣದಿಂದಾಗಿಯೇ ಡಾ. ಡಿ.ವಿ. ಗುರುಪ್ರಸಾದರ ಗುಪ್ತಚರದಳ ಸೇವೆಯ ಹಲವು ಹತ್ತು ಕತೆ-ಉಪಕತೆಗಳು ಈ ಪುಸ್ತಕಕ್ಕೆ ನಿರಂತರ ಪ್ರಸ್ತುತತೆ ಹಾಗೂ ಚಾರಿತ್ರಿಕ ಮಹತ್ವವನ್ನು ತಂದುಕೊಟ್ಟಿವೆ ಎಂದು ಹೇಳಲು ಹಿಂಜರಿಯಬೇಕಿಲ್ಲ.

ಸಮಕಾಲೀನ ರಾಜಕೀಯ ಚರಿತ್ರೆಗಳೇ ಕನ್ನಡದಲ್ಲಿ ವಿರಳವಾಗಿರುವಾಗ ಡಾ. ಗುರುಪ್ರಸಾದ್‌ರವರ ಈ ಪ್ರಯತ್ನ ಅತ್ಯಂತ ಸಕಾಲಿಕ ಹಾಗೂ ಔಚಿತ್ಯಪೂರ್ಣವೂ

ಪ್ರೊ|| ರವೀಂದ್ರ ರೇಷ್ಮೆ ಶೈಕ್ಷಣಿಕ ಚಿಂತಕ ಮತ್ತು ರಾಜಕೀಯ ವಿಶ್ಲೇಷಕ

ಅನುಭವ ಕಥನ
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)