Jogi
Publisher -
- Free Shipping above ₹200
- Cash on Delivery (COD) Available
Pages -
Type -
Couldn't load pickup availability
ಜೋಗಿ ನಿರೂಪಿತ, ಗಿರಿಜಾ ಲೋಕೇಶರ ಆತ್ಮಕತೆ ನಾನು ಓದಿದ ಹೊಸವರ್ಷದ ಮೊದಲ ಕೃತಿ ಎನ್ನುವುದು ನನಗೆ ಅಭಿಮಾನದಸಂಗತಿ.ಆತ್ಮಕತಿಗಿರಿಜಾ ಅವರದ್ದಾದರೂ ಅವರ ವ್ಯಕ್ತಿತ್ವದಷ್ಟೇ ಸ್ಪುಟವಾಗಿ ಲೋಕೇಶರ ವ್ಯಕ್ತಿತ್ವವೂ ಕಣ್ಣಿಗೆ ಕಟ್ಟುತ್ತದೆ. ಎಂಥ ಸುಂದರ ದಾಂಪತ್ಯ ಅದು! ಬಹಿರ್ಮುಖತೆಯ ಜೀವ ಪುಟಿಯುವ ವ್ಯಕ್ತಿತ್ವ ಗಿರಿಜಾ ಅವರದ್ದು; ಅಂತರ್ಮುಖತೆಯ ಗಂಭೀರ ಗಹನ ವ್ಯಕ್ತಿತ್ವ ಲೋಕೇಶರದ್ದು, ಅಭಿನಯ ಮತ್ತು ಕಲಾರಾಧನೆಯಲ್ಲಿ ಇಬ್ಬರನ್ನೂ ಸಮಾಸಮ ತೊಡಗುವಿಕೆ.
ಬದುಕಿಗಾಗಿ ಕಲೆ ಎಂಬುದು ಕಲೆಗಾಗಿ ಬದುಕು ಎಂಬ ಘನವಾದ ನಿಲುವಾದದ್ದು ಗಿರಿಜಾ ಜೀವನದ ಪಕ್ವತೆಯ ಯಾನ. ಹೆರವರ ಕಷ್ಟಕ್ಕಾಗುವ ಗಿರಿಜಾ ಮತ್ತು ಅವರ ಕುಟುಂಬದ ಗುಪ್ತಗಾಮಿತ್ವ ನನಗೆ ಬಹುದೊಡ್ಡ ಆದರ್ಶವೆನಿಸಿದೆ. ಡಾ. ರಾಜಕುಮಾರರಿಂದ ಹಿಡಿದು ಈವತ್ತಿನ ಹೊಸ ಕಲಾವಿದರವರೆಗೆ ಅನೇಕರ ಹೃದ್ಯಚಿತ್ರಗಳು ಮಿಂಚಿನಂತೆ ನಿರೂಪಣೆಯಲ್ಲಿ ತೂರಿಹೋಗುತ್ತವೆ. ಗಿರಿಜಾರ ಕತೆಯು ಜೋಗಿ ಅವರ ಅತ್ಯಾಕರ್ಷಕ ಕಥನದ ಆಲಂಬದಲ್ಲಿ ಮನವನ್ನಾವರಿಸುವ ಜೀವನಗಾಥೆಯಾಗಿ ರೂಪುಗೊಂಡಿದೆ.
ಗಿರಿಜಾ ಪರಸಂಗ ಕೃತಿಯಲ್ಲಿ ಕಳೆದು ಹೋದ ಒಂದು ಕಾಲಮಾನದ ಕಥನ ಅನನ್ಯವಾಗಿ ರೂಪಿತವಾಗಿದೆ. ಒಂದು ಬಾಳುವೆ ಅರಳುವ ಮತ್ತು ವಿಸ್ತರಿಸಿಕೊಳ್ಳುವ ಕಥಾನಕವಾಗಿ ಈ ಕೃತಿಗೆ ಸಾಹಿತ್ಯ ರಂಗದಲ್ಲಿ ಮಹತ್ತರ ಸ್ಥಾನವಿದೆ.
-ಎಚ್ ಎಸ್ ವೆಂಕಟೇಶಮೂರ್ತಿ
ಪ್ರಕಾಶಕರು - ಅಂಕಿತ ಪುಸ್ತಕ
