Skip to product information
1 of 2

B R Suhas

ಗಿಣಿ ಹೇಳಿದ ಶೃಂಗಾರ ಕಥೆಗಳು

ಗಿಣಿ ಹೇಳಿದ ಶೃಂಗಾರ ಕಥೆಗಳು

Publisher -

Regular price Rs. 220.00
Regular price Rs. 220.00 Sale price Rs. 220.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 212

Type - Paperback

Gift Wrap
Gift Wrap Rs. 15.00

ಸಂಸ್ಕೃತ ಸಾಹಿತ್ಯಲೋಕದಲ್ಲಿ ಅನೇಕ ಸ್ವಾರಸ್ಯಕರ ಕಥಾಸಂಕಲನಗಳಿವೆ ಪಂಚತಂತ್ರ, ಹಿತೋಪದೇಶ, ಕಥಾಸರಿತ್ಸಾಗರ, ವೇತಾಲಪಂಚ ವಿಂಶತಿ.

ಸಿಂಹಾಸನದ್ವಾತ್ರಿಂಶಿಕಾ, ಪುರುಭಪರೀಕ್ಷಾ, ಶುಕಸಪ್ತತಿ, ಮೊದಲಾದವುಗಳು. ಪ್ರಸ್ತುತ ಗ್ರಂಥ, ಶುಕಸಪ್ತತಿ ಎಂಬ ಸಂಸ್ಕೃತ ಕಥಾಸಂಕಲನದ ಕನ್ನಡಾನುವಾದವಾಗಿದೆ. ಮದನನೆಂಬ ವರ್ತಕನು ವ್ಯಾಪಾರಕ್ಕೆ ದೇಶಾಂತರ ಹೋಗಲು, ಅವನ ಪತ್ನಿಯಾದ ಪ್ರಭಾವತಿಯೆಂಬುವಳು ತನ್ನ ಸಖಿಯರ ಮಾತಿನಂತೆ ಪರಪುರುಷರ ಬಳಿ ಸುಖಿಸಲೆಂದು ಹೊರಡಲು, ಮನೆಯಲ್ಲಿ ಸಾಕಲಾಗಿದ್ದ ಗಿಣಿಯೊಂದು ಅವಳಿಗೆ ಅವಳಂತೆಯೇ ಹಾಗೆ ಹೋಗಿ ಸಿಕ್ಕಿಹಾಕಿಕೊಂಡವರ ಶೃಂಗಾರ ಕಥೆಗಳನ್ನು ಹೇಳುತ್ತಾ ಅವರು ಹೇಗೆ ತಪ್ಪಿಸಿಕೊಂಡರೆಂದು ಪ್ರತಿ ಕಥೆಯ ಕೊನೆಯಲ್ಲೂ ಒಂದು ಪ್ರಶ್ನೆ ಕೇಳುತ್ತದೆ.ಅವಳು ಉತ್ತರ ಹೇಳಲಾರದಾದಾಗ ಅವಳು ಹೋಗದಿದ್ದರೆ ತಾನು ಹೇಳುವೆನೆಂದು ಹೇಳಿ ಗಿಣಿಯು ಅವಳನ್ನು ತಡೆದು ತಾನೇ ಉತ್ತರ ಹೇಳುತ್ತದೆ.ಹೀಗೆ ಎಪ್ಪತ್ತು ರಾತ್ರಿಗಳಲ್ಲಿ ಎಪ್ಪತ್ತು ಕಥೆಗಳನ್ನು ಹೇಳುವ ಹೊತ್ತಿಗೆ ಅವಳ ಪತಿಯು ಹಿಂದಿರುಗುತ್ತಾನೆ.ಹೀಗೆ ಗಿಣಿ ಹೇಳಿದ ಎಪ್ಪತ್ತು ಕಥೆಗಳ ಸಂಕಲನವೇ ಶುಕಸಪ್ತತಿ.

View full details