Skip to product information
1 of 2

Udayakumar Habbu

ಗಾಂಧೀಜಿಯವರ ಕಥೆಗಳು

ಗಾಂಧೀಜಿಯವರ ಕಥೆಗಳು

Publisher - ವಂಶಿ ಪಬ್ಲಿಕೇಷನ್ಸ್

Regular price Rs. 140.00
Regular price Rs. 140.00 Sale price Rs. 140.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 127

Type - Paperback

Gift Wrap
Gift Wrap Rs. 15.00

ಇತ್ತೀಚೆಗೆ ಮಹಾತ್ಮ ಗಾಂಧೀಜಿಯವರ ಬಗೆಗೆ ವಿಪುಲವಾದ ಸಾಹಿತ್ಯ ಪ್ರಕಟಗೊಳ್ಳುತ್ತಿರುವುದು ಸ್ವಾಗತಾರ್ಹ. ಸಾಮಾನ್ಯವಾಗಿ ಗಾಂಧಿಯ ಬಗೆಗೆ ಬರೆಯುವವರು ಎರಡು ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಒಂದು ಗಾಂಧಿ ಚರಿತ್ರೆಗೆ ಸಂಬಂಧಿಸಿದ್ದು, ಮತ್ತೊಂದು ಗಾಂಧಿವಾದಕ್ಕೆ ಸಂಬಂಧಿಸಿದ್ದು. ಆದರೆ ಉದಯ ಕುಮಾರ ಹಬ್ಬು ಅವರು ಇವೆರಡಕ್ಕಿಂತ ಭಿನ್ನವಾದ, ಇದುವರೆಗೆ ಯಾರೂ ಬರೆಯದ ಕಥನ ಮಾರ್ಗದ ಮೂಲಕ ಗಾಂಧಿಯ ಅಗೋಚರ, ಅಪರಿಚಿತ ಹಾಗೂ ಅಪರೂಪದ ಮಾರ್ಗ ಹಿಡಿದಿರುವುದು ವಿಶೇಷ.ಇಲ್ಲಿ ಮಹಾತ್ಮ ಗಾಂಧಿಯವರ ಜೀವನದಲ್ಲಿ ನಡೆದ ಹತ್ತು ಹಲವು ಪ್ರಸಂಗಗಳಿಗೆ ಕನ್ನಡಿ ಹಿಡಿದಿದ್ದಾರೆ. ಹಬ್ಬು ಅವರು ಗಾಂಧಿಯನ್ನು ನೋಡುವ, ರೂಪಿಸುವ ಮಾದರಿಯೇ ಭಿನ್ನ ಹಾಗೂ ಅನನ್ಯ. ಎಷ್ಟೋ ಅಪರಿಚಿತ, 'ಅಪರೂಪದ ಪ್ರಸಂಗಗಳು ಅನಾವರಣಗೊಂಡು ಸಹೃದಯರ ಮನವನ್ನು ಸೆಳೆಯುವದರಲ್ಲಿ ಯಶಸ್ವಿಯಾಗಿವೆ. ಹಬ್ಬು ನಮ್ಮ ನಡುವಿನ ಒಬ್ಬ ಚಿಂತನಶೀಲ ಬರಹಗಾರ. ಇಲ್ಲಿಯ ಚಿಕ್ಕ ಚಿಕ್ಕ ಪ್ರಸಂಗಗಳು, ಅದರಲ್ಲೂ ದಕ್ಷಿಣ ಆಫ್ರಿಕಾದ ಅಗೋಚರ ಜಗತ್ತು ಓದುಗರನ್ನು ಹೊಸ ಲೋಕಕ್ಕೆ ಕರೆದುಕೊಂಡು ಹೋಗಿ ದಂಗು ಬಡಿಸುವಷ್ಟು ಸಶಕ್ತ ವಾಗಿದೆ. ಹಬ್ಬು ಅವರ ಸಮಚಿತ್ತದ, ಸಮತೂಕದ ಬರವಣಿಗೆ ಯಲ್ಲಿರುವ ಚುಂಬಕಶಕ್ತಿ ಹಾಗೂ ಮಾಂತ್ರಿಕಶಕ್ತಿಯಿಂದಾಗಿ ಈ ಕೃತಿಯ ಮೌಲಿಕತೆ, ಘನತೆಯನ್ನು ಹೆಚ್ಚಿಸಿದೆ

ಗಾಂಧಿಜೀಯವರನ್ನು ಪ್ರಸ್ತುತಪಡಿಸುವಾಗ ಲೇಖಕರು ಕೇವಲ ಅವರ ವಿಚಾರಗಳನ್ನಷ್ಟೇ ಹೇಳಿ ವಿಶ್ಲೇಷಿಸಬಹುದು. ಇನ್ನು ಕೆಲವರು ಸಂಕಥನದ ಮೂಲಕ ಗಾಂಧೀಜಿ ವಿಚಾರಗಳನ್ನು ಪ್ರಸ್ತುತಪಡಿಸಬಹುದು. ಉದಯಕುಮಾರ ಹಬ್ಬು ಅವರು ಸಂಕಥನದ ಮಾರ್ಗವನ್ನು ಹಿಡಿದು ಓದುಗರಿಗೆ ಹೆಚ್ಚು ಆಪ್ತವಾಗುತ್ತಾರೆ

-ಚಂದ್ರಕಾಂತ್ ಪೋಕಳೆ.
 ಖ್ಯಾತ ಮರಾಠಿ ಸಾಹಿತ್ಯದ ಅನುವಾದಕರು.

View full details