Saviraj Ananduru
ಗಂಡಸರನ್ನು ಕೊಲ್ಲಿರಿ
ಗಂಡಸರನ್ನು ಕೊಲ್ಲಿರಿ
Publisher -
- Free Shipping Above ₹250
- Cash on Delivery (COD) Available
Pages -
Type -
Couldn't load pickup availability
ನಿರೂಪಣೆಯ ಹೊಸತನ, ಸೂಕ್ಷ್ಮ ರೀತಿಯ ವ್ಯಂಗ್ಯ - ಕಟಕಿ, ಬೆರಗುಗೊಳಿಸುವ ವಿಪರ್ಯಾಸದ ವಿನ್ಯಾಸಗಳನ್ನು ಹೆಣೆಯುತ್ತಾ ವಿರುದ್ಧ ದಿಕ್ಕಿನಲ್ಲಿ ಸಾಗಿ ಸರಿದಾರಿಗೆ ಬಂದಂತೆ ಮಾಡುವ ಗ್ರಹಿಕೆಯ ಕ್ರಮ, ಗದ್ಯಗಂಧೀ ಲಯದಲ್ಲೇ ಪರವಶಗೊಳಿಸುವಂತಿರುವ ಶೈಲಿ ಗಮನ ಸೆಳೆಯುವಂತಿವೆ. ಲೋಕದ ಡೊಂಕುಗಳನ್ನು ವಿಡಂಬಿಸುತ್ತ, ಸುಖದ ಬದಲು ದುಃಖವನ್ನು ಆರಾಧಿಸುವ, ಬದುಕಿಗಿಂತ ಸಾವಿನ ವರ್ಣನೆ ವಿನೂತನವಾದುದೆಂಬ ವಿಲಕ್ಷಣ ನಿಲುವು, ಆಧುನಿಕ ವಿಕಾರಗಳ ರೋಗಗ್ರಸ್ಥ ಗ್ರಹಿಕೆಯನ್ನೇ ಬುಡಮೇಲು ಮಾಡಿ ಸಹಜ ಬದುಕಿಗೆ ಒತ್ತಾಯಿಸುವ ಪರಿಯೂ ಇಷ್ಟವಾಗುತ್ತದೆ. ಪುರಾಣ ಭಂಜಕ ಪ್ರತಿಮೆಗಳು, ಪುರಾಣ ಗ್ರಹಿಕೆಯ ಮರುಕಟ್ಟುವ ರೀತಿ, ಹೆಣ್ಣೊಡಲ ಸಂಕಟ – ಸಂಭ್ರಮದ ಕ್ಷಣಗಳನ್ನು ತಾನೇ ಹೆಣ್ಣಾಗುವ ಗತಿಯಲ್ಲಿ ಗಂಡು ಮುಕ್ತನಾಗುವ ಹೆಂಗರುಳಿನ ನೋಟ, ಈ ಎಲ್ಲ ಗುಣಗಳೂ ಈ ಸಂಕಲನದ ಕವಿತೆಗಳಲ್ಲಿ ಅಭಿವ್ಯಕ್ತಗೊಂಡಿವೆ. ಸಂಕಲನದ ಶೀರ್ಷಿಕೆಯೂ ನಮ್ಮನ್ನು ಬೆಚ್ಚಿ ಬೀಳಿಸಬಲ್ಲುದು.
ಈ ಸಂಕಲನದ ಕವಿಗೆ ಕನ್ನಡ ಕಾವ್ಯ ಪರಂಪರೆಯ ಆಳವಾದ ಅರಿವಿದೆ. ವಚನ, ಜನಪದ, ಚಂಪೂ, ಗಜಲ್ ಮಾದರಿಗಳನ್ನು ಅರಗಿಸಿಕೊಂಡಂತಿರುವ ಅಭಿವ್ಯಕ್ತಿಯ ರೀತಿ ಈ ಕವಿ ಕಾವ್ಯ ಕಸುಬನ್ನು ಗಂಭೀರವಾಗಿ ಪರಿಗಣಿಸಿರುವ ಪುರಾವೆಯೂ ಇಲ್ಲಿನ ಬಹುತೇಕ ಕವಿತೆಗಳಲ್ಲಿ ಕಾಣಿಸುವಂತಿದೆ.
-ಸಬೀಹಾ ಭೂಮಿಗೌಡ, ಚಂದ್ರಶೇಖರ ತಾಳ್ಯ
Share


https://www.youtube.com/watch?v=1l2MaWChnOU&ab_channel=Poornimaheggade
Subscribe to our emails
Subscribe to our mailing list for insider news, product launches, and more.