Skip to product information
1 of 1

Karki Krishnamurthy

ಗಾಳಿಗೆ ಮೆತ್ತಿದ ಬಣ್ಣ

ಗಾಳಿಗೆ ಮೆತ್ತಿದ ಬಣ್ಣ

Publisher - ಛಂದ ಪ್ರಕಾಶನ

Regular price Rs. 120.00
Regular price Rs. 120.00 Sale price Rs. 120.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ನಿರೂಪಣೆಯಲ್ಲಿ ಸಾಮಾನ್ಯವಾಗಿ ಕಥೆಗಾರ ಕಥೆಯನ್ನು ಹೇಳುತ್ತಿರಲು ಓದುಗರು ಅದನ್ನು ಓದುತ್ತಿರುತ್ತಾರೆ. ಓದುಗರನ್ನು ಒಳಗೊಳ್ಳುವುದು ಹೇಗೆ ಎನ್ನುವುದೇ ಕಥೆಗಾರರ ಸವಾಲು. ಕತೆಗಾರರು ಹೇಳಿದ ಕಥೆಯನ್ನು ಪ್ಯಾಸಿವ್ ಆಗಿ ಕೇಳಿ ಗ್ರಹಿಸುವ ಗ್ರಾಹಕರು ಒಂದೆಡೆ, ನಿರೂಪಿಸುತ್ತಿರುವ ಕಥೆಗಾರರು ಒಂದೆಡೆ- ಇಬ್ಬರ ನಡುವಿನ ಒಂದು ಸಂವಹನ ಕಥನ ತಂತ್ರದಲ್ಲಿರುತ್ತದೆ. ಕಥನ ದಟ್ಟವಾದಷ್ಟೂ ಒಳಗೊಳ್ಳುವಿಕೆ ಆಳವಾಗುತ್ತದೆ, ಆದರೆ ಇಲ್ಲಿ ಕಥೆಯನ್ನು ನಿರೂಪಿಸುತ್ತಿರುವುದು ಕಥೆಗಾರರೇ.
ಕಥನಕ್ಕೆ ಮತ್ತೊಂದು ತಂತ್ರವೆಂದರೆ – ಒಂದೆಡೆ ಕಥೆ ನಡೆಯುತ್ತಿದೆ, ಅದನ್ನು ಓದುಗರು ಗ್ರಹಿಸುತ್ತಿದ್ದಾರೆ.
ಆದರೆ ಓದುಗರು ಗ್ರಹಿಸುವ ಕ್ರಮವನ್ನು ಕಥೆಗಾರರು ತಮ್ಮ ಟಿಪ್ಪಣಿಗಳ ಮೂಲಕ ನಿಗ್ರಹಿಸುತ್ತಿದ್ದಾರೆ
ಒಂದು ಕ್ರಿಕೆಟ್ ಮ್ಯಾಚಿನಲ್ಲಿ ಕಾಮಂಟ್ರಿ ಕೊಟ್ಟ ರೀತಿಯಲ್ಲೂ ಕಥೆಯನ್ನು ನಿರೂಪಿಸಬಹುದು.
ಕರ್ಕಿ ಕೃಷ್ಣಮೂರ್ತಿಯವರದ್ದು ಇವೆರಡರಿಂದ ಭಿನ್ನವಾಗಿ ಎದ್ದುನಿಲ್ಲುವ ಸಹಕಥನವೆನ್ನಬಹುದಾದ ಕಥನ ತಂತ್ರ. ಕರ್ಕಿ ತಮ್ಮ ಕಥೆಯನ್ನು ನಿರೂಪಿಸುತ್ತಾರೆ. ನಿರೂಪಿಸುವ ಪ್ರಕ್ರಿಯೆಯಲ್ಲಿ ಕೆಲವು ಖಾಲೀ ಜಾಗಗಳನ್ನು ಬಿಟ್ಟು ಅದನ್ನು ಓದುಗರು ತುಂಬಿಕೊಳ್ಳುವುದಕ್ಕೆ ಪ್ರೇರೇಪಿಸುತ್ತಾರೆ. ಅವರ ಕಥೆಗಳಲ್ಲಿ ಎರಡು ಮೂರು ಎಳೆಗಳನ್ನು ತಂದು ಅವರು ಓದುಗರಿಗೆ ಪಂಥಾಹ್ವಾನ ನೀಡುತ್ತಾರೆ. ಆ ಕಥೆಗಳು ಓದುಗರ ಒಳಗೊಳ್ಳುವಿಕೆಯಿಂದಲೇ ಮುಂದೆ ಸಾಗುತ್ತವೆ. ಈ ತಂತ್ರ ಸರಳವಾದುದಲ್ಲ. ಇದು ಓದುಗರೊಂದಿಗೆ ಸಹಯಾತ್ರೆ ಮಾಡುವ ತಂತ್ರ. ಈ ಕಾಲದ ಸಂಕೀರ್ಣ ಬದುಕನ್ನು ಪ್ರತಿಬಿಂಬಿಸುವ ತಮ್ಮ ಕಥೆಯ ಅಡಿಪಾಯದ ಮೇಲೆ- ಓದುಗರ ಕಥೆಯನ್ನು ಕಟ್ಟಿಕೊಳ್ಳಲು ನೀಡುತ್ತಿರುವ ಕರ್ಕಿಯವರ ಆಹ್ವಾನವನ್ನು ಓದುಗರು ಸ್ವೀಕರಿಸಿದಾಗ ಈ ಸಹಕಥನಗಳು ಇನ್ನೂ ಹೆಚ್ಚು ಅರ್ಥವನ್ನು ಸ್ಫುರಿಸುತ್ತವೆ.

ಈ ಧ್ವನಿ ಕನ್ನಡಕ್ಕೆ ಭಿನ್ನವೂ, ಹೊಸದೂ ಆಗಿದೆ. ಇದನ್ನು ನಾವು ಕೇಳೋಣ... ಅವರೊಂದಿಗೆ ಮೌನವಾಗಿಯೇ ಮಾತಾಡೋಣ... ಸರಳವಲ್ಲದ ವಿಚಾರಗಳೊಂದಿಗೆ ನಮ್ಮನ್ನು ತೊಡಗಿಸಿಕೊಳ್ಳೋಣ. ಅವರನ್ನು ಕನ್ನಡ ಕಥಾಲೋಕಕ್ಕೆ ಮತ್ತೆ ಸ್ವಾಗತಿಸೋಣ.

-ಎಂ ಎಸ್ ಶ್ರೀರಾಮ್
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)