Skip to product information
1 of 1

Shankarananda

ಫ್ಯೂಯಲ್ ಟು ಸಕ್ಸಸ್ - ಉತ್ಸಾಹವೇ ಯಶಸ್ಸಿನ ಇಂಧನ

ಫ್ಯೂಯಲ್ ಟು ಸಕ್ಸಸ್ - ಉತ್ಸಾಹವೇ ಯಶಸ್ಸಿನ ಇಂಧನ

Publisher - ಸ್ನೇಹ ಬುಕ್ ಹೌಸ್

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages -

Type -

Gift Wrap
Gift Wrap Rs. 15.00
ಇದು ಸ್ಪರ್ಧಾತ್ಮಕ ಯುಗ, ಈ ಕಾಲಮಾನದಲ್ಲಿ ಇತರರಿಗಿಂತ ಭಿನ್ನವಾಗಿ, ಚುರುಕಾಗಿ ಆಲೋಚಿಸಲ್ಪಟ್ಟ ವ್ಯಕ್ತಿಗಳು ಯಶಸ್ಸನ್ನು ಪಡೆಯಲು ಸಾಧ್ಯ ಯಶಸ್ಸು ಸುಮ್ಮನೆ ಸಿಗುವ ವಸ್ತುವಲ್ಲ. ಅಂಗಡಿಯಲ್ಲಿ ಮಾರಾಟಕ್ಕಿರುವುದೂ ಅಲ್ಲ. ಹಾಗಾದರೆ ಅದನ್ನು ಹೇಗೆ ಪಡೆಯಬಹುದು?

ಸತತ ಶ್ರಮ ಹಾಗು ಸರಿಯಾದ ಬುದ್ಧಿವಂತಿಕೆಯಿಂದ!

ಯಶಸ್ಸನ್ನು ಅಡ್ಡ ದಾರಿಯಲ್ಲೂ ಗಳಿಸಬಹುದು, ಕೆಲವರು ತಾವು ಗೆಲ್ಲುವುದು ಮಾತ್ರ ಮುಖ್ಯವೆಂದೂ, ಹೇಗೆ ಗೆಲ್ಲುವುದೆಂಬುದು ಮುಖ್ಯವಲ್ಲವೆಂದೂ ಹೇಳುತ್ತಿರುತ್ತಾರೆ. ನಿಜ! ಆದರೆ ಒಂದು ಮಾತು ಇಲ್ಲಿ ನಾವು ನೆನಪಿಟ್ಟುಕೊಳ್ಳಬೇಕು. ಹಾಗೆ ನೇರ ದಾರಿಯಲ್ಲದ ಯಶಸ್ಸು ಕೇವಲ ತಾತ್ಕಾಲಿಕ ಮಾತ್ರ! ನಿಜವಾದ ಯಶಸ್ಸು ಸಿಗಬೇಕಾದರೆ ಅದು ನೇರ ಮಾರ್ಗದಿಂದ ಮಾತ್ರ ಸಾಧ್ಯ.

ಯಾರೂ ರಾತ್ರೋರಾತ್ರಿ ದಿಢೀರನೇ ದೊಡ್ಡ ವ್ಯಕ್ತಿಯಾಗುವುದಿಲ್ಲ, ರಾಜ್ಯಕಟ್ಟಲಾಗುವುದಿಲ್ಲ, ಕೋಟ್ಯಾಧೀಶರಾಗುವುದಿಲ್ಲ. ಅದಕ್ಕೆ ಸರಿಯಾದ ನಿಯಮಸಹಿತವಾದ ಥಿಂಕಿಂಗ್, ಆ್ಯಕ್ಷನ್ ಇರಬೇಕು. ಪಾಯ ಹಾಕಿದ ಕೂಡಲೇ ಮನೆ ಪೂರ್ತಿಯಾಗುವುದಿಲ್ಲ. ಅದಕ್ಕೆ ಗೋಡೆ, ಕಿಟಕಿ, ಬಾಗಿಲು, ಮೇಲ್ಚಾವಣಿ, ಬಣ್ಣ, ಎಲ್ಲವೂ ಇದ್ದಾಗ ಮನೆಯಾಗಿ ಬದಲಾಗುತ್ತದೆ.

ಹಾಗಾದರೆ ಈ ನಿತ್ಯ ಒತ್ತಡದ ಬದುಕಿನಲ್ಲಿ ಸಕ್ಸಸ್‌ನ್ನು ಗಳಸಬೇಕಾದರೆ ಏನು ಮಾಡಬೇಕು?

View full details