Skip to product information
1 of 1

Dr. D. V. Guruprasad

ಏಟಿಗೆ ಎದುರೇಟು

ಏಟಿಗೆ ಎದುರೇಟು

Publisher - ಸಪ್ನ ಬುಕ್ ಹೌಸ್

Regular price Rs. 200.00
Regular price Rs. 200.00 Sale price Rs. 200.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 223

Type - Paperback

Gift Wrap
Gift Wrap Rs. 15.00
ನಮ್ಮ ನಡುವಿನ ದಕ್ಷ, ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಆತ್ಮೀಯರಾದ ಡಾ.ಡಿ.ವಿ.ಗುರುಪ್ರಸಾದ್ ಅವರ ಆಸಕ್ತಿ ವೃತ್ತಿಯನ್ನು ಮೀರಿದ್ದು, ಅವರ ಬರಹಗಳನ್ನು ಓದುವಾಗ, ನನಗೆ ಎಷ್ಟೋ ಸಲ ಅವರು ಮೊದಲು ಅಕ್ಷರ ಜೀವಿ ಮತ್ತು ಆನಂತರ ಆರಕ್ಷಕ ಜೀವಿ ಎಂದೆನಿಸಿದೆ, ಕಾರಣ ಅವರು ಒಬ್ಬ ವೃತ್ತಿಪರ ಲೇಖಕ, ಸಾಹಿತಿಗಿಂತ ಹೆಚ್ಚು ಪ್ರವಾಸ ಮಾಡಿದ್ದಾರೆ ಮತ್ತು ಬರೆದಿದ್ದಾರೆ. ತಮ್ಮ ವೃತ್ತಿ ಜೀವನದ ಅನುಭವಗಳಿಗೆ, ಅಕ್ಷರ ರೂಪ ಕೊಟ್ಟಿದ್ದಾರೆ. ಸಾಮಾನ್ಯವಾಗಿ ಐಪಿಎಸ್ ಅಧಿಕಾರಿಗಳು ನಿವೃತ್ತಿಯ ನಂತರ ಬರೆಯಲೆಂದು ಸರಕುಗಳನ್ನು ಪೇರಿಸಿಟ್ಟುಕೊಂಡಿರುತ್ತಾರೆ. ಆದರೆ ಡಾ.ಗುರುಪ್ರಸಾದ್ ಹಾಗಲ್ಲ. ನಿವೃತ್ತರಾಗುವ ಮೊದಲೇ ಐವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದವರು. ಈಗಾಗಲೇ ಇಡೀ ಭೂಮಂಡಲಕ್ಕೆ ಅರ್ಧ ಸುತ್ತು ಹಾಕಿದವರು. ಅವರ ಜೀವನಾನುಭವ ಅಷ್ಟು ದಟ್ಟವಾದುದು. ಅದರಲ್ಲೂ ತಮ್ಮ ವೃತ್ತಿ ಸಂಬಂಧಿ ವಿಷಯಗಳ ಬಗ್ಗೆ ಅವರು ಬರೆದರೆ, ಅದನ್ನು ಅವರು ಕಟ್ಟಿಕೊಡುವ ರೀತಿಯೇ ಬೇರೆ, ಈ ಕೃತಿಯೂ ಅಂಥ ವರ್ಗಕ್ಕೆ ಸೇರುತ್ತದೆ. ಭಾರತದ ಪ್ರತಿಷ್ಠಿತ ಗೂಢಚಾರ ಸಂಸ್ಥೆಯಾದ ರಾ ಬಗ್ಗೆ ಕನ್ನಡದಲ್ಲಿ ಪ್ರಕಟವಾದ ಪ್ರಪ್ರಥಮ ಕೃತಿ ಎಂಬ ಅಗ್ಗಳಿಕೆ. ರಾ ಬಗ್ಗೆ ಡಾ.ಗುರುಪ್ರಸಾದ್ ರೋಚಕ ಮಾಹಿತಿಯನ್ನು ಈ "ಏಟಿಗೆ ಎದುರೇಟು" ಕೃತಿಯಲ್ಲಿ ನೀಡಿರುವುದು ಅವರ ಕಾಳಜಿ, ಆಸಕ್ತಿ, ಚಿಕಿತ್ಸಕ ನೋಟ, ಹುಡುಕಾಟ, ಸಂಶೋಧನಾತ್ಮಕ ಶ್ರದ್ಧೆಯನ್ನು ತೋರಿಸುತ್ತದೆ. ಇದು ನಾವು ಕೇಳಿದ, ಆದರೆ ಅಷ್ಟೊಂದು ಗೊತ್ತಿರದ ಒಂದು ಹೊಸ ಲೋಕದ ಪರಿಚಯ. ಈ ಕೃತಿಯನ್ನು ಬೇರೆ ಯಾರೇ ಬರೆದಿದ್ದರೂ ಅಥೆಂಟಿಕ್' ಎಂದು ಅನಿಸುತ್ತಿರಲಿಲ್ಲ. ಒಬ್ಬ ಐಪಿಎಸ್‌ ಅಧಿಕಾರಿ ಮತ್ತು ಸೃಜನಶೀಲ ಲೇಖಕ ಮೇಳೈಸಿದ್ದರ ಒಟ್ಟಂದ ಈ ಕೃತಿ!

-ವಿಶ್ವೇಶ್ವರ ಭಟ್
View full details