Ashok B.
Publisher - ಸ್ನೇಹ ಬುಕ್ ಹೌಸ್
Regular price
Rs. 90.00
Regular price
Rs. 90.00
Sale price
Rs. 90.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಶ್ರೀ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಕತೆಗಳಲ್ಲಿ ನವಿರು ಹಾಸ್ಯ ಮೊನಚಾದ ವೈಚಾರಿಕ ಚಿಂತನೆ ಗ್ರಾಮೀಣ ಸೊಗಡಿನ ಭಾಷೆ ಇವೆಲ್ಲವೂ ಓದುಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಅವರ ಬರಹಗಳಲ್ಲಿ ಚಿತ್ರಕ ಶಕ್ತಿಯ ಜೊತೆಗೆ ವಿಶಿಷ್ಠವೆನಿಸುವ ಆಕರ್ಷಣೆಯೂ ಅಡಕವಾಗಿರುತ್ತದೆ. ತಮ್ಮ ಸುತ್ತ ನಡೆಯುವ ವಿದ್ಯಮಾನಗಳನ್ನೇ ಕಥೆಯ ವಸ್ತುವಾಗಿಸಿಕೊಳ್ಳುವಲ್ಲಿ ಮತ್ತು ಅವನ್ನು ರಸವತ್ತಾಗಿಸಿ ಓದುಗರಿಗೆ ಉಣಬಡಿಸುವುದರಲ್ಲಿ ತೇಜಸ್ವಿ ಸಿದ್ಧಹಸ್ತರು. ಅವರ ಅನೇಕ ಕಥೆಗಳು, ನಾಟಕ ಮತ್ತು ಚಲನಚಿತ್ರಗಳಾಗಿ ಯಶಸ್ವಿಯಾಗಿರುವುದು ನಮಗೆಲ್ಲ ತಿಳಿದೇ ಇದೆ. ಪ್ರಸ್ತುತ ಎಂಗ್ಟನ ಪುಂಗಿ ನಾಟಕದ ವಸ್ತು ಕೂಡ ತೇಜಸ್ವಿಯವರ ಕಥೆಯೊಂದನ್ನು ಆಧರಿಸಿದೆ. ಗ್ರಾಮೀಣ ಭಾಗದ ಜನರ ಮೌಡ್ಯ ಮತ್ತು ಮುಗ್ಧತೆಗಳ ನಡುವೆ ಸುಳಿಯುವ ಸಣ್ಣ ಮಟ್ಟದ ಧೂರ್ತತನ ಮತ್ತು ಮನ್ನಣೆ ಸ್ವಭಾವದ ವ್ಯಕ್ತಿಗಳ ನಡುವೆ ನಡೆಯುವ ಚೇತೋಹಾರಿ ಸಂಭಾಷಣೆಯೇ ಈ ನಾಟಕದ ಮೂಲಧಾತು. ಈ ನಾಟಕದಲ್ಲಿ ಕಥೆಗಾರನೇ ಒಂದು ಪಾತ್ರವಾಗಿರುವುದು ಕೂಡ ವಿಶೇಷ.
ಯುವ ರಂಗಕರ್ಮಿ ಶ್ರೀ ಆಶೋಕರು ತೇಜಸ್ವಿಯವರ ಕಥೆಗೆ ನಾಟಕರೂಪವನ್ನು ಕೊಟ್ಟಿದ್ದಾರೆ. ರಂಗಭೂಮಿಯಲ್ಲಿ ತಮಗಿರುವ ಅನುಭವವನ್ನು ಬಳಸಿಕೊಂಡು ಓದುಗರಿಗೆ ಮತ್ತು ನೋಡುಗರಿಗೆ ಬೇಸರವಾಗದ ರೀತಿಯಲ್ಲಿ ಈ ನಾಟಕವನ್ನು ಹೆಣೆದಿರುವ ಅವರ ಜಾಣ್ಮೆಯನ್ನು ಮೆಚ್ಚಲೇಬೇಕು. ವಿಶಿಷ್ಠವಾದ ಸಂಭಾಷಣೆಯ ಮೂಲಕವೇ ಓದುಗ/ನೋಡುಗರ ಮನಗೆಲ್ಲುವಲ್ಲಿ ಈ ಕೃತಿ ಯಶಸ್ವಿಯಾಗುತ್ತದೆ. ಇದು ಅಶೋಕ್ ಅವರ ಚೊಚ್ಚಲ ಕೃತಿಯಾಗಿದ್ದು ರಂಗಭೂಮಿ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಅವರು ಇನ್ನಷ್ಟು ಕೃಷಿ ಮಾಡುವಂತಾಗಲಿ ಎಂದು ಹಾರೈಸುತ್ತಾ ಅಕ್ಷರ ಲೋಕಕ್ಕೆ ಆತ್ಮೀಯವಾಗಿ ಸ್ವಾಗತಿಸುತ್ತೇನೆ.
ಕೆ.ಐ. ಪರಶಿವಪ್ಪ
ಪ್ರಕಾಶಕರು
ಸ್ನೇಹ ಬುಕ್ ಹೌಸ್