Beedre Manjunath
Publisher - ನವಕರ್ನಾಟಕ ಪ್ರಕಾಶನ
- Free Shipping above ₹200
- Cash on Delivery (COD) Available
Pages -
Type -
Couldn't load pickup availability
“ಗಾದೆ ಸಾವಿರ ಮಾತಿನ ಸರದಾರ, ಗಾದೆಮಾತುಗಳೆಂದರೆ ಅಚ್ಚುಕಟ್ಟಾದ ನಿರ್ಣಯಗಳಲ್ಲ; ವಿವೇಕ ಜಾಗೃತಿ ಮಾಡುವ ಸುಭಾಷಿತಗಳು. ಅವು ಒಂದು ಬಗೆಯ ವಕ್ರೋಕ್ತಿಗಳು. ಗಾದೆಯ ಧ್ವನಿತಾರ್ಥ ಹಿಡಿಯಲು ವ್ಯಾವಹಾರಿಕ ಜ್ಞಾನದಷ್ಟೇ ಪಾರಮಾರ್ಥಿಕ ತಿಳುವಳಿಕೆಯೂ ಬೇಕು. ಗಾದೆಗಳು ಧರ್ಮ, ಅರ್ಥ, ಕಾಮಗಳ ವಿವೇಕಕ್ಕಾಗಿ ನೀಡಿದ ಸೂಕ್ತಿಗಳು - ಗಾದೆಗಳು ಹೊಸ ಸುಭಾಷಿತಗಳ ಮಸೆಗಲ್ಲು; ವಿವೇಕದ ಒರೆಗಲ್ಲು', ಎನ್ನುತ್ತಾರೆ ವರಕವಿ ದ. ರಾ. ಬೇಂದ್ರೆ,
ತರಗತಿಗಳಲ್ಲಿ ಪಾಠ ಮಾಡುವಾಗ ವಿದ್ಯಾರ್ಥಿಗಳಿಗೆ ಗಾದೆಗಳ ಸ್ವಾರಸ್ಯವನ್ನುವಿವರಿಸಿ ಕುತೂಹಲ ಕೆರಳಿಸಲು, ಸರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಲು, ಮಾತಿನಲ್ಲೇ ಮೋಡಿಮಾಡಲು ಇಂತಹ ಗಾದೆಗಳ ವಿವರಣೆ ಮತ್ತು ವಿಶ್ಲೇಷಣೆ ಅಗತ್ಯ.
ಈಗಾಗಲೇ 'ಅಪ್ಲೈಡ್ಇಂಗ್ಲಿಷ್ ಕೋರ್ಸ್'ನ ಎಪ್ಪತ್ತೆರಡು ಸಾವಿರಕ್ಕೂ ಹೆಚ್ಚು ಪ್ರತಿಗಳನ್ನು ಖರೀದಿಸಿ ಪ್ರೋತ್ಸಾಹಿಸಿದ ಸಹೃದಯ ಓದುಗರು ಈ 'ಇಂಗ್ಲಿಷ್ ಗಾದೆಗಳ ವಿವರಣಾತ್ಮಕ ಕೋಶ'ವನ್ನೂ ಓದಿ, ಓದಿಸಿ, ಕೈಯಿಂದ ಕೈಗೆ ದಾಟಿಸುವ ಕೆಲಸ ಮಾಡುವರೆಂಬ ಆಶಯ ನಮ್ಮದು. ಗಾದೆಗಳ ವಿಸ್ಮಯ ಲೋಕಕ್ಕೆ ನಿಮಗೆ ಸ್ವಾಗತ! ಆಲ್ ದ ಬೆಸ್ಟ್ !
