Skip to product information
1 of 1

Kum. Veerabhadrappa

ಎನ್‌ಕೌಂಟರ್‌

ಎನ್‌ಕೌಂಟರ್‌

Publisher - ಅಂಕಿತ ಪುಸ್ತಕ

Regular price Rs. 330.00
Regular price Rs. 330.00 Sale price Rs. 330.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages -

Type -

Gift Wrap
Gift Wrap Rs. 15.00
ಈ ಕಾದಂಬರಿಯ ಹುಳವ ನನ್ನ ತಲೆಯಲ್ಲಿ ಬಿಟ್ಟವರು ಐಪಿಎಸ್ ಅಧಿಕಾರಿ ಶಂಕರ್‌ ಬಿದರಿಯವರು. ಅವರು ಬಳ್ಳಾರೀಲಿ ಭೀಮಾ ನಾಯಕ್ ಹೆಸರಿನ ಕುಖ್ಯಾತನನ್ನು ಎನ್‌ಕೌಂಟರ್ ಮಾಡಿದ್ದು 1990, ಸೆಪ್ಟೆಂಬರ್ ಮಾಹೆಯಲ್ಲಿ. 'ನೀವು ಈ ಎನ್‌ಕೌಂಟರ್ ಕುರಿತು ನಾವಲ್ ಬರೀರಿ' ಅಂದರು. ನಟೋರಿಯಸ್ ಕ್ರಿಮಿನಲ್ ಭೀಮ್ಲಾನ ಬದುಕಿನ ವಕ್ರರೇಖೆಗಳಲ್ಲಿ, ಗೋಚರಿಸಿದ ಹಾದಿಗಳಲ್ಲಿ ದಣಿವರಿಯದ ಸಹಸ್ರಾರು ಕಿಮೀ ಸಂಚರಿಸಿದೆ. ಅವೆಲ್ಲ ಅವರೆಲ್ಲ ಇದ್ದದ್ದು ನಲ್ಲಮಲ ದಂಡಕಾರಣ್ಯದ ಸೆರಗಲ್ಲಿ. ಅಲ್ಲಲ್ಲಿ ನಮ್ಮನ್ನು ಅಟಕಾಯಿಸಿದರು, ತಮ್ಮ ಪ್ರಶ್ನೆಗಳಿಂದ ಗೊಂದಲಗೊಳಿಸಿದರು, ಪೋಲೀಸರು ಎಂದು ಸಂದೇಹಿಸಿದರು. ಅವರ ಬಳಿ ಮಾರಕಾಯುಧಗಳಿದ್ದವು, ನಮ್ಮ ಬಳಿ ಸಜ್ಜನಿಕೆ ಮುಗುಳ್ನಗೆ ಇತ್ತು. ತಮ್ಮೆದೆಯೊಳಗಿನ ನೆನಪುಗಳನ್ನು ಬೆದಕಿ ಘಾಸಿಗೊಂಡರು. ಕೇಳುವುದನ್ನು ಕೇಳಿದರು, ಹೇಳುವುದನ್ನು ಹೇಳಿದರು, ದುಃಖಿಸಿದರು, ತಮ್ಮ ಭೀಮಾನಿಗೆ ಸಾವಿಲ್ಲ ಎಂದರು.
View full details