Bhatrati B. V.
Publisher - ಸಾವಣ್ಣ ಪ್ರಕಾಶನ
Regular price
Rs. 160.00
Regular price
Rs. 160.00
Sale price
Rs. 160.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಕೊಡುಕೊಳ್ಳುವ ಈ ವ್ಯಾವಹಾರಿಕ ಜಗತ್ತಿನಲ್ಲಿ ಇದ್ದಕ್ಕಿದ್ದಂತೆ ಯಾರೋ ಎದುರಾಗಿ ನಮಗೆ ಸಹಾಯ ಹಸ್ತ ಚಾಚುತ್ತಾರೆ, ಯಾರೋ ನಾನಿದ್ದೇನೆ ಸುಮ್ಮನಿರು ಎಂದು ಭರವಸೆ ಕೊಟ್ಟು ಬಿಡುತ್ತಾರೆ, ಯಾರೋ this too shall pass ಎನ್ನುವ ಆತ್ಮೀಯ ನುಡಿಗಳನ್ನು ಆಡಿಬಿಡುತ್ತಾರೆ. ಅದು ಮಳೆಯಾಗುವ ಮುನ್ನ ಗಂಟೆಗಟ್ಟಲೆ ಕಟ್ಟುವ ಮೋಡದಂತಲ್ಲ... ಕಗ್ಗತ್ತಲಿನ ಹಾದಿಯಲ್ಲಿ ಒಬ್ಬೊಂಟಿ ನಡೆವಾಗ ಸುಮ್ಮನೆ ಸುಳಿದು ಮಾಯವಾಗುವ ಕೋಲ್ಕಿಂಚಿನಂತೆ!
ಕಣ್ಣು ಕೋರೈಸುವ ಬೆಳಕು ನೀಡಿ ಮಾಯವಾದ ನಂತರ ಹಾದಿ ತುಸು ನಿಚ್ಚಳವಾಗಿ, ನಡೆಯಲು ಸುಗಮವಾಗಿಬಿಡುತ್ತದೆ. ಆ ಕ್ಷಣದಲ್ಲಿ ಅವರು ಸಹಾಯ ಮಾಡುವ ಅಗತ್ಯವೇನೂ ಇರುವುದಿಲ್ಲ. ಆದರೂ ಮಾಡುತ್ತಾರೆ. ಕೇಳಿದರೇ ಕೊಡಲು ಕೈ ತಡೆಯುವವರ ಜಗತ್ತಿನಲ್ಲಿ ಇಂಥ ಅಪರೂಪದವರೂ ಎದುರಾಗುವುದು ನನ್ನನ್ನು ಯಾವತ್ತೂ ವಿಸ್ಮಯಳಾಗಿಸುತ್ತದೆ.
'Be the reason someone believes in the goodness of people' ಎಂಬ ಮಾತಿದೆಯಲ್ಲ, ಅದರಂತೆ ನಡೆದುಕೊಂಡವರು! ಹೂ ಗುಚ್ಛವನ್ನು ಒಂದು ಹೂದಾನಿಯಲ್ಲಿಟ್ಟು, ಭರ್ತಿ ನೀರು ತುಂಬಿಸಿ ಕಾಂಡದ ತುದಿ ಮಾತ್ರ ದಿನವೂ ತುಸುವೇ ಕತ್ತರಿಸುತ್ತಿದ್ದರೆ ಎಷ್ಟೋ ಕಾಲ ಹೂವು ಬಾಡದೇ ಉಳಿಯುತ್ತದೆ.
ನೆನಪುಗಳೂ ಹಾಗೆಯೇ...
'ಎಲ್ಲಿಂದಲೋ ಬಂದವರು' ಅಂಥವರ ನೆನಪಿನ ಗುಚ್ಛ!
- ಭಾರತಿ ಬಿ ವಿ