N. S. Shreedhara Murthy
ಎಲ್ಲೆಲ್ಲು ಸಂಗೀತವೇ
ಎಲ್ಲೆಲ್ಲು ಸಂಗೀತವೇ
Publisher - ವೀರಲೋಕ ಬುಕ್ಸ್
- Free Shipping Above ₹250
- Cash on Delivery (COD) Available
Pages - 156
Type - Paperback
ವಿಜಯಭಾಸ್ಕರ್ ಸಂಗೀತ ನಿರ್ದೇಶನಕ್ಕೇ ಘನತೆ, ಗೌರವಗಳನ್ನು ತಂದವರು. ನಾನು ಅವರು ಚಿತ್ರರಂಗ ಪ್ರವೇಶಿಸಿದ ದಿನಗಳಿಂದಲೂ ಅವರ ಕಾರ್ಯ ವೈಖರಿಯನ್ನು ನೋಡುತ್ತಾ ಬಂದಿದ್ದೇನೆ, ಅವರು ಕೆಲಸವನ್ನು ಅರಸುತ್ತಿರುವ ಸಂದರ್ಭದಲ್ಲಿಯೂ ನೋಡಿದ್ದೇನೆ, ಕೈತುಂಬಾ ಕೆಲಸ ಇದ್ದ ಕಾಲದಲ್ಲಿಯೂ ನೋಡಿದ್ದೇನೆ. ಸ್ಥಿತಪ್ರಜ್ಞ ಸಾಧಕರು, ಚಿತ್ರಕ್ಕೆ ಏನು ಬೇಕು ಎನ್ನುವುದರ ಕಡೆಗೆ ಸದಾ ಅವರ ಚಿತ್ತ ಇರುತ್ತಿತ್ತು. ಸಂಗೀತವನ್ನು ಎಷ್ಟು ಆಳವಾಗಿ ಬಲ್ಲರೋ, ಸಾಹಿತ್ಯವನ್ನೂ ಕೂಡ ಅಷ್ಟೇ ಆಳವಾಗಿ ತಿಳಿದವರು. ಚಿತ್ರದ ಅಗತ್ಯವನ್ನು ಅರಿತು ಸಂಗೀತವನ್ನು ನೀಡುತ್ತಿದ್ದರು. ಹಾಡನ್ನು ರಂಜಕೀಯವಾಗಿಸುವುದು ಎಂದಿಗೂ ಅವರ ಉದ್ದೇಶವಾಗಿರಲಿಲ್ಲ. ಅದು ಕಥೆಯ ಹಂದರದಲ್ಲಿ ಸೇರಬೇಕು, ಪಾತ್ರದ ಅಭಿವ್ಯಕ್ತಿಯಾಗಬೇಕು, ಜನರ ಮನದಲ್ಲಿ ಉಳಿದುಕೊಳ್ಳಬೇಕು ಎನ್ನುವುದನ್ನು ಸದಾ ಚಿಂತಿಸುತ್ತಿದ್ದರು, ಹೀಗಾಗಿ ಅವರು ಸೃಷ್ಟಿಸಿದ ಗೀತೆಗಳು ಇಂದಿಗೂ ಅಮರವಾಗಿ ಉಳಿದಿವೆ. ವಿಜಯಭಾಸ್ಕರ್ ಕನ್ನಡಕ್ಕೆ ಟೈಟಲ್ ಕಾರ್ಡ್ ತೋರಿಸುವಲ್ಲಿ ಹೊಸತನ ತಂದರು, ಥೀಂ ಮ್ಯೂಸಿಕ್ ತಂದರು, ಶಾಟ್ ಡಿವಿಷನ್ಗಳನ್ನು ತಂದರು, ಹೊಸ ವಾದ್ಯಗಳನ್ನು ಬಳಸಿದರು, ಬಹಳ ಮುಖ್ಯವಾಗಿ ಕನ್ನಡದ ಗಾಯಕರನ್ನು ಹುಡುಕಿ ಅವರ ಬಳಿ ಹಾಡಿಸಿದರು. ವಿಜಯಭಾಸ್ಕರ್ ಇದ್ದಲ್ಲಿ ಹೊಸತನ ಮತ್ತು ಪ್ರಯೋಗಶೀಲತೆ ಇದ್ದೇ ಇರುತ್ತಿತ್ತು. ಹೀಗಾಗಿ ಅವರು ವ್ಯಾಪಾರಿ ಚಿತ್ರಗಳಂತೆ ಕಲಾತ್ಮಕ ಚಿತ್ರಗಳಿಗೂ ವರದಾನವಾದರು. ವಿಜಯಭಾಸ್ಕರ್ ಗೀತ ರಚನೆಕಾರರ, ಸಂಗೀತ ನಿರ್ದೇಶಕರ ಹಕ್ಕುಗಳಿಗೆ ಹೋರಾಡಿದರು, ಈ ಹೋರಾಟದಲ್ಲಿ ಅವರ ತತ್ಪರತೆಯನ್ನು ನಾನು ಹತ್ತಿರದಿಂದ ಕಂಡಿದ್ದೇನೆ, 'ಸಿನಿ ಮ್ಯೂಸಿಷಿಯನ್ಸ್ ಅಸೋಸಿಯೇಷನ್' ಅಧ್ಯಕ್ಷರಾಗಿ ಅವರು ವಾದ್ಯಗಾರರ ಅಭ್ಯುದಯಕ್ಕೆ ಶ್ರಮಿಸಿದರು. ವಿಜಯಭಾಸ್ಕರ್ ನಿಜವಾದ ಅರ್ಥದಲ್ಲಿ ಶಕಪುರುಷರು.
- ಆರ್.ಎನ್.ಜಯಗೋಪಾಲ್,
Share
Subscribe to our emails
Subscribe to our mailing list for insider news, product launches, and more.