Anantha Kunigal
ಎದೆಯ ದನಿ ಕೇಳಿರೋ
ಎದೆಯ ದನಿ ಕೇಳಿರೋ
Publisher - ಅವ್ವ ಪುಸ್ತಕಾಲಯ
- Free Shipping Above ₹350
- Cash on Delivery (COD) Available*
Pages - 200
Type - Paperback
Couldn't load pickup availability
ನಾನು ನಾನೇ!
ನಿಮ್ಮಂತೆ ಏಕಾಗಬೇಕು?
ಆಗ ಸಿಗುವ ಬೆಲೆಯಾದರೂ ಏನು?
ಗುರುತಾದರೂ ಏನು?
ತಿಳಿದದ್ದನ್ನು ತಿಳಿಸಲು ಬಿಡಿ
ತಪ್ಪಿದ್ದರೆ ತಿದ್ದಿ ಬಿಡಿ
ಅಳಿಸದಿರಿ ನೈತಿಕತೆಯ
ಕೊಲ್ಲದಿರಿ ತಾತ್ವಿಕತೆಯ
ಮೇಲಿನ ಸಾಲುಗಳಲ್ಲಿ ಅನಂತ್ ಅವರ ಕಾವ್ಯದ ಮ್ಯಾನಿಫೆಸ್ಟೋ ಸ್ಪಷ್ಟವಾಗಿದೆ. ಅವರು ಯಾರನ್ನೂ ಮೆಚ್ಚಿಸಲು ಬರೆಯುವುದಿಲ್ಲ. ಯಾವುದೇ ಇಸಂಗೆ ಕಟ್ಟುಬೀಳುವುದಿಲ್ಲ. ಮನುಷ್ಯನ ಅಂತರಂಗವನ್ನು ಸದಾಕಾಲ ಮೀಟುತ್ತಿರುವ ಮೂಲಭೂತ ಸಂಕಟಗಳೇ ಅವರ ಕಾವ್ಯದ ವಸ್ತು. ನೈತಿಕತೆ ಹಾಗೂ ತಾತ್ವಿಕತೆ ಅವರಿಗೆ ಬೇರೆ ಬೇರೆಯಲ್ಲ ಎಂಬುದು ಖಚಿತವಾಗಿದೆ. ಯಾವುದರಲ್ಲಿ ನೈತಿಕತೆಯಿಲ್ಲವೋ ಅದು ಕವಿಯ ತಾತ್ವಿಕತೆಯಾಗಲು ಸಾಧ್ಯವಿಲ್ಲ. ಹಾಗೆಯೇ ತಾನು ಇನ್ನೊಬ್ಬರಂತೆ ಆಗುವುದಿಲ್ಲ ಎಂಬಲ್ಲಿ ಸಾರುವ ಸ್ವಂತಿಕೆಗೂ ತಾತ್ವಿಕತೆಗೂ ಸಂಬಂಧವಿದೆ. ಈ ಮಧುರ ಸಂಬಂಧದಲ್ಲಿ ಅನಂತ್ ಅವರ ಕಾವ್ಯ ಅರಳುತ್ತದೆ.
ಹೊಸದಾಗಿ ಕನ್ನಡ ಕವಿತೆ ಬರೆಯಲು, ಓದಲು ಮುಂದಾಗಿರುವವರಿಗೆ ಕಾವ್ಯದಲ್ಲಿ ಏನು ಬೇಕು? ಈ ಪ್ರಶ್ನೆಯನ್ನು ಉತ್ತರಿಸಲು ಕಷ್ಟವಾದರೂ, ಉತ್ತರಿಸದೆ ಗತ್ಯಂತರವಿಲ್ಲ. ಇದಕ್ಕೆ ನೂರಾರು ಕವಿಗಳು ನೂರು ಬಗೆಯ ಉತ್ತರ ನೀಡಬಹುದು. ಇದೆಲ್ಲವೂ ಕಡೆಗೂ ವೈವಿಧ್ಯದ ಕಡೆಗೇ ಬೆಟ್ಟು ಮಾಡುತ್ತವೆ. ಈ ವೈವಿಧ್ಯದಲ್ಲಿ ಇಂದಿನ ಕನ್ನಡ ಕಾವ್ಯದ ಅಂತಸ್ಸತ್ವ ಅಡಗಿದೆ. ಅನಂತ್ ಅವರು ಈ ಕಾವ್ಯದ ತೇರನ್ನು ಎಳೆಯುತ್ತಿರುವ ಅಂಥ ಒಬ್ಬ ವೀರಾಭಿಮಾನಿ. ಮೊದಲು ತುಳಿದ ಸೈಕಲ್ನಿಂದ ಮಿಡಲ್ಕ್ಲಾಸ್ ಫ್ಯಾಮಿಲಿಯವರೆಗೆ, ಕಲ್ಪತರು ನಾಡಿನಿಂದ ಏರೋಪ್ಲೇನ್ ಚಿಟ್ಟೆಯವರೆಗೆ, ಆಯುಧ ಪೂಜೆಯಿಂದ ಹೆಲ್ಪಲೈನ್ವರೆಗೆ ಅನಂತ್ ಅವರ ಕಾವ್ಯ ಒಳಗೊಳ್ಳದ ವಿಷಯಗಳೇ ಇಲ್ಲ. ಹೀಗೆ ಏನನ್ನು ಬೇಕಿದ್ದರೂ ಕಾವ್ಯವಾಗಿಸುತ್ತೇನೆ ಎಂಬ ಛಲ ಮತ್ತು ವಿಸ್ತಾರ ಹೊಂದಿದ್ದವರು ಅನ್ಯರೂ ತುಳಿಯಬಹುದಾದ ಸ್ವಂತ ದಾರಿಯೊಂದನ್ನು ಬಲು ಬೇಗನೆ ಕಟೆದುಕೊಳ್ಳುತ್ತಾರೆ. ಅನಂತ್ ಅವರ ಕಾವ್ಯದ ಹೆಜ್ಜೆಗುರುತು ಅಂಥದೊಂದು ದಾರಿಯಲ್ಲಿದೆ. ಅವರ ಕಾವ್ಯಕ್ರಮಣಕ್ಕೆ ಎಲ್ಲ ಬಗೆಯ ಶುಭವನ್ನು ಹಾರೈಸುತ್ತೇನೆ.
-ಹರೀಶ್ ಕೇರ
Share

Subscribe to our emails
Subscribe to our mailing list for insider news, product launches, and more.