Skip to product information
1 of 2

Banu Mushthak

ಎದೆಯ ಹಣತೆ

ಎದೆಯ ಹಣತೆ

Publisher -

Regular price Rs. 250.00
Regular price Rs. 250.00 Sale price Rs. 250.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 216

Type - Paperback

Gift Wrap
Gift Wrap Rs. 15.00

ಕನ್ನಡದ ಅಪಾರ ಸಂಖ್ಯೆಯ ಓದುಗರ ಬೇಡಿಕೆಯ ಮೇರೆಗೆ, "ಎದೆಯ ಹಣತೆ ಮರುಮುದ್ರಣವಾಗಿದೆ. ನನ್ನ ಎಲ್ಲಾ ಕಥಾ ಸಂಕಲನಗಳಿಂದ ಆಯ್ದ ೧೩ ಕಥೆಗಳನ್ನು ಈ ಸಂಕಲನದಲ್ಲಿ ಸೇರಿಸಲಾಗಿದೆ. ನನ್ನ ಇನ್ನೂ ಅನೇಕ ಅಪ್ರಕಟಿತ ಕಾದಂಬರಿ ಮತ್ತು ಇತರೆ ಕೃತಿಗಳು ಕೂಡ ಪ್ರಕಟವಾಗಲಿವೆ. ಇವೆಲ್ಲಾ ಸಾಧ್ಯವಾದದ್ದು ನಿಮ್ಮೆಲ್ಲರ ಅಭಿಮಾನ ಮತ್ತು ಪ್ರೀತಿಯ ದೆಸೆಯಿಂದ.

ಪುಸ್ತಕ ಸಂಸ್ಕೃತಿ ಕ್ಷೀಣಿಸುತ್ತಿದೆ ಎಂಬ ಹಲವಾರು ಅಪವಾದಗಳನ್ನು ಸುಳ್ಳು ಮಾಡುವ ದಿಕ್ಕಿನಲ್ಲಿ ನನ್ನ ಅನೇಕ ಪುಸ್ತಕಗಳು ನಿಮ್ಮ ಕೈ ಸೇರುತ್ತಿವೆ. ಪುಸ್ತಕ ಪ್ರೀತಿಯ ನೈಜ ಅನುಭವ ನನಗೆ ಇಂಗ್ಲೆಂಡ್ನಲ್ಲಿ ದೊರಕಿತು. ಅಲ್ಲಿನ ಜನರ ಪುಸ್ತಕ ಪ್ರೀತಿ ಮತ್ತು ಲೇಖಕರ ಬಗೆಗಿನ ಅಭಿಮಾನವು ನನ್ನಲ್ಲಿ ಅಚ್ಚರಿಯನ್ನು ಮೂಡಿಸಿತು. ಪುಸ್ತಕ ಮತ್ತು ಕಲೆಯನ್ನು ಜೀವಂತವಾಗಿ ಇರಿಸುವ ಅವರುಗಳ ಪ್ರಯತ್ನ ಎಂಥಾ ಸ್ಫೂರ್ತಿದಾಯಕವಾಗಿದೆ. ಕಲೆ ಮತ್ತು ಸಾಹಿತ್ಯ ಜೀವಪರ ಮತ್ತು ಜನಪರವಾಗಿದೆ. ಆದ್ದರಿಂದ ಅದು ಉಳಿಯಬೇಕು ಬೆಳೆಯಬೇಕು ಎಂಬ ಆಶಯವನ್ನು ಹೊತ್ತಿರುವ ಅಲ್ಲಿನ ಜನತೆಯ ಅಭಿಮಾನವನ್ನು ನಾನು ಮುಂದಿನ ಬರವಣಿಗೆಯಲ್ಲಿ ನಿಮ್ಮೊಡನೆ ಹಂಚಿಕೊಳ್ಳುತ್ತೇನೆ. ನಿಮ್ಮೆಲ್ಲರ ಅಪಾರ ಪ್ರೀತಿ ಮತ್ತು ಬಾಂಧವ್ಯಕ್ಕೆ ನಾನು ಆಭಾರಿಯಾಗಿದ್ದೇನೆ.

-ಬಾನು ಮುಸ್ತಾಕ್

View full details