Skip to product information
1 of 1

Devanoora Mahadeva

ಎದೆಗೆ ಬಿದ್ದ ಅಕ್ಷರ

ಎದೆಗೆ ಬಿದ್ದ ಅಕ್ಷರ

Publisher - ಅಭಿನವ ಪ್ರಕಾಶನ

Regular price Rs. 400.00
Regular price Rs. 400.00 Sale price Rs. 400.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

ಕಡುಬಡತನದ ಜೊತೆಗೆ ಅವಮಾನವೂ ಸೇರಿದ ಬಡತನ ಆಸ್ಪೃಶ್ಯರದು, ಸಾಮಾಜಿಕ ಸಾಂಸ್ಕೃತಿಕ ಚಲನೆ ಇರುವವರ ಬಡತನ ಲೆಕ್ಕಪಕ್ಕ ಇರುವ ಬಡತನವಾದರೆ, ಸಾಮಾಜಿಕ ಸಾಂಸ್ಕೃತಿಕ ಚಲನೆ ಇಲ್ಲದ ದಲಿತರ, ಹಿಂದುಳಿದವರ ಬಡತನವು ರೆಕ್ಕೆಪುಕ್ಕ ಕಿತ್ತ, ತೆವಳುವ ಬಡತನವಾಗಿದೆ.

ಬಸ್ಸು ರೈಲು ಕಾರಣಕ್ಕಾಗಿ ಅಕ್ಕಪಕ್ಕ ಕೂತಿದ್ದೇವೆ, ಹೊಟೇಲ್ ಕಾರಣಕ್ಕಾಗಿ ಸಹಪಂಕ್ತಿ ಭೋಜನ ಮಾಡಿದ್ದೇವೆ. ನೌಕರಿ ಕಾರಣಕ್ಕಾಗಿ ಒಟ್ಟಾಗಿ ಓಡಾಡಿದ್ದೇವೆ. ಅಲ್ಲಿ ಇಲ್ಲಿ ಮದುವೆಗಳೂ ಆಗಿವೆ. ಇಲ್ಲಿ ಆಗುತ್ತಿರುವ ಬದಲಾವಣೆಗಳು ಹೆಚ್ಚಾಗಿ ಬಹಿರಂಗ ಒತ್ತಡದವು. ಅಂತರಂಗ ಕತ್ತಲಲ್ಲೆ ಇದೆ.

ಪಂಪ ಈಗೇನಾದರೂ ಬದುಕಿದ್ದರೆ ಅಂಚಿಕಡ್ಡಿ ಊರ್ವಶಿಯರು ಮಾತ್ರ ಆಯ್ಕೆ ಆಗುವಂತಿರುವ ವಿಶ್ವಸುಂದರಿ ಮಾನದಂಡಗಳನ್ನು ಪ್ರತಿಭಟಿಸುತ್ತಿದ್ದ ಹಾಗೂ ಟಿ.ವಿ.ಯಲ್ಲಿ ಬರುವ ಎಫ್ ಚಾನಲ್ ಆಫ್ ಮಾಡಿಬಿಡುತ್ತಿದ್ದ ಎಂದು ಕಾಣುತ್ತದೆ. ಈ ಅಭಿರುಚಿಯಲ್ಲಿ ಪಂಪ ದಕ್ಷಿಣ ಧ್ರುವವಾದರೆ, ನಮ್ಮ ಲಂಕೇಶ್ ಉತ್ತರಧ್ರುವದಲ್ಲಿ ನಿಲ್ಲುತ್ತಾರೆ. ಇಬ್ಬರೂ ಪರಸ್ಪರ ಸಂಧಿಸಿದ್ದರೆ 'ಛೇ ಇವನಿಗೆ ಒಳ್ಳೇ ಟೇಸ್ಟ್ ಇಲ್ಲ' ಅಂತ ಪರಸ್ಪರ  ಅಂದುಕೊಂಡಿರಲೂಬಹುದು.

ನಿಂಗಯ್ಯ ಕುಸ್ತಿಯ ಉಸ್ತಾದ್ ಆಗಿದ್ದರು ಎಂದಾಗ ಅವರ ಅಂಗಾಂಗಗಳನ್ನು ಉದ್ದೇಶಪೂರ್ವಕವಾಗಿ ನಾನು ನೋಡಿದೆ. ಅವರ ಯಾವ ಅಂಗವೂ ಅವರು ಒಂದಾನೊಂದು ಕಾಲದಲ್ಲಿ ಕುಸ್ತಿಯ ಪಟುವಾಗಿದ್ದರು ಎಂಬುದನ್ನು ನನಗೆ ರುಜುವಾತುಪಡಿಸಲಿಲ್ಲ. ಬಡತನವು ಅವರ ಕುಸ್ತಿಯ ಅಂಗಾಂಗಗಳನ್ನು ನಿರ್ದಯವಾಗಿ ಊಟಮಾಡಿದ್ದಿರಬಹುದು..

ಇಂದು ನಗರ ಉಸಿರಾಡಲು ಕಷ್ಟಪಡುತ್ತಿದೆ. ಹಳ್ಳಿ ನಡೆದಾಡಲು ತಾಣವಿಲ್ಲದೆ ಕಷ್ಟಪಡುತ್ತಿದೆ. ಅನ್ನ ನೀಡುವಾತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಎಲ್ಲರಿಗೂ ಈಗ ಉಳಿಯಲು ಇರುವ ದಾರಿ ಒಂದೇ- ಇಲ್ಲಿ ಮತ್ತೆ ಸಮಾನತೆಯ ಕನಸನ್ನು ಬಿತ್ತಬೇಕಾಗಿದೆ.

View full details