Praveen Kumar G
ಎಡೆ
ಎಡೆ
Publisher -
- Free Shipping Above ₹400
- Cash on Delivery (COD) Available*
Pages -
Type - Paperback
Couldn't load pickup availability
ತಪ್ಪುತ್ತಿರುವ ಉಸಿರನ್ನು ನಿಯಂತ್ರಿಸಿಕೊಳ್ಳುತ್ತಾ “ಯಾರ‍್ದಣ್ಣಾ ಟೆಲಿಗ್ರಾಮು?” ಅಂದಳು. ಅದಕ್ಕೆ ಪೋಸ್ಟ್‌ಮ್ಯಾನ್ ರಂಗಣ್ಣ “ನಿಮ್ಮೂರಿಂದವ್ವಾ” ಎಂದಾಗ ರೇಣುಕಾಳ ಮೈ ಅಲ್ಲಾಡಿದಂತಾಗಿ ಗಂಟಲು ಕಟ್ಟಿಕೊಂಡಿತು.
- ಅವ್ವನ ಟೆಲಿಗ್ರಾಂ
ಬಸಜ್ಜ ಮಾಡುವ ಮಣ್ಣಿನ ಕಾರ್ಯ ನೋಡಿದವರಿಗೆ “ಸತ್ತ್ ಮ್ಯಾಲೆ ಹಿಂಗ್ ನೋಡಿಕೊಂಡ್ರೆ, ಸಾಯಾಕ್ ಯಾಕ ಹೆದುರ‍್ಬೇಕು?” ಎನ್ನಿಸುತ್ತಿತ್ತು. ಇದೇ ಹೆಮ್ಮೆಯಿಂದ ಕೆಲವರು ಅವನನ್ನು “ನಮ್ ಕಾಲುದ್ ಸತ್ಯ್ ಹರಿಶ್ಚಂದ್ರ” ಎನ್ನುತ್ತಿದ್ದರು.
- ಎಡೆ
ಆಯಣ್ಣ ಜೇಬಿನಿಂದ ಹತ್ತತ್ತು ರೂಪಾಯಿಯ ಎರಡು ಡೈರಿ ಮಿಲ್ಕ್ ಚಾಕ್ಲೇಟ್‌ಗಳನ್ನು ತೆಗೆದು ನನ್ನ ಕೈಯೊಳಗಿಟ್ಟು ಮುಖ ನೋಡಿದ. ಆಯಣ್ಣ ಚಾಕ್ಲೇಟ್‌ಗಳನ್ನು ಕೊಟ್ಟಿರದೇ ಇದ್ದಿದ್ದರೆ, ಏನು ಹೇಳುತ್ತಿದ್ದೆನೋ? ಗೊತ್ತಿಲ್ಲ.
- ಡೈರಿ ಮಿಲ್ಕ್ ಚಾಕ್ಲೇಟು
"ಹುಡುಗಿ ಹೆಂಗಾನಾ ಇರ‍್ಲೆಜಾ, ರೊಟ್ಟೀನ ರೌಂಡುಗ ಮಾಡಾಕ ಬರ‍್ಬೇಕು. ಜೊತೀಗೆ ಬೆಂಡೀಕಾಯಿ ಚಟ್ನಿಗೂಡ ಬರ‍್ಬೇಕು. ಅಜಾ, ಹಂಗೇ ಅಜ್ಜಿಯಂಗ ಸಂಸಾರಾನೂ ಮಾಡ್ಬೇಕು" ಎಂದ ವಿಜಯ್.
- ರೊಟ್ಟಿ ಬೆಂಡಿಕಾಯಿ ಚಟ್ನಿ
ಬಾಲ್ಯ-ಮನಸು-ದೇಹ-ಸಿನಿಮಾ ಎಲ್ಲವೂ ತಲೆಯ ಬೀಸೋ ಕಲ್ಲಿನಲ್ಲಿ ಪುಡಿ ಪುಡಿಯಾದವು. ಒಂದು ಸಿನಿಮಾ ಅವಶ್ಯಕತೆಗೂ ಮೀರಿ ಅವಳನ್ನು ಚಿಂತೆಗತ್ತಿಸಿದ್ದು ಇದೇ ಮೊದಲು.
- ರಾಧಾ ಮೋಹನ
“ನಮ್ಮಪ್ಪ ಸತ್ತ. ತಗಳ್ರಿ ನಿಮ್ ದುಡ್ಡು ತಗಳ್ರಿ” ಎಂದು ರಾತ್ರಿ ಕನವರಿಸುತ್ತಿದ್ದ ಗಂಡನನ್ನು ತಿವಿದು ಎಬ್ಬಿಸಿದ ಮಂಗ್ಳವ್ವ, “ಥೂ ನಿನ್ನ ಬಾಯಾಗ ಮಣ್ಣಾಕ, ಏನಾಗೆತೆ ನಿನೀಗೆ?” ಎಂದು ಉಗಿದು ಮಲಗಿದಳು.
- ಹಲಗೆ ಬಡಿತ
“ಉಡ ಅಂದ್ರೆ ಅದ್ರಷ್ಟುಕ್ಕ ಅದೇ ಕಣ್ಣಿಗೆ ಬೀಳ್ಬೇಕು, ಹುಡಿಕ್ಕೆಂಡ್ ಹೋದ್ರೆ ಉಡ ಸಿಗಲ್ಲ” ಎಂಬ ತಾನು ಕಂಡುಕೊಂಡ ಸತ್ಯವನ್ನು ತನಗೆ ತಾನೇ ಹೇಳಿಕೊಂಡ ದುರುಗಪ್ಪ.
- ಉಡ
ಕಿರಣ ಮಾತಾಡುವ ಮೊದಲೇ ಶೇಖರ, “ಯಾರಿಗೂ ಹೇಳ್ಬ್ಯಾಡಲೇ, ಇನ್ಮ್ಯಾಲೆ ಹಿಂಗ ಮಾಡಲ್ಲ. ನಿನೀಗೆ ಹತ್ರುಪಾಯಿ ಕೊಡ್ತೀನಿ” ಎಂದ. ಕಿರಣ ಏನೂ ಮಾತಾಡಲಿಲ್ಲ.
- ಗುಟ್ಟು
ಊರೆಂದರೆ ಬರೀ ನೆಲವಲ್ಲ, ಊರೆಂದರೆ ಮಂದಿ ಕೂಡ ಎಂಬುದು ಹನುಮಜ್ಜನಿಗೆ ಅರ್ಥವಾಗಿ ಕೆಂಪು ಬಸ್ಸು ಹತ್ತಿ ಬೆಂಗಳೂರನ್ನು ಸೇರಿಕೊಂಡ.
- ಹನುಮಜ್ಜನ ಸಿನಿಮಾಕತೆ
Share

Feeling like stories we imagines...
ಎಡೆ
Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.