Skip to product information
1 of 2

M. R. Dattathri

ದ್ವೀಪವ ಬಯಸಿ

ದ್ವೀಪವ ಬಯಸಿ

Publisher - ಛಂದ ಪ್ರಕಾಶನ

Regular price Rs. 250.00
Regular price Rs. 250.00 Sale price Rs. 250.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 254

Type - Paperback

Gift Wrap
Gift Wrap Rs. 15.00

ಭಾರತದಿಂದ ಅಮೆರಿಕೆಗೆ, ಅಮೆರಿಕೆಯಿಂದ ಭಾರತಕ್ಕೆ ತುಯ್ಯುವ ಕಥಾನಕವು ಈ ವಿರುದ್ಧ ಚಲನೆಗಳಿಂದಲೇ ಕರ್ಷಣದ್ರವ್ಯವನ್ನು ಪಡೆಯುತ್ತದೆ. ಚಿತ್ರಗಳು ಒಗ್ಗೂಡಿ ಕಟ್ಟುವ ಕಥಾನಕ ಮನಸ್ಸನ್ನು ತಲ್ಲಣಗೊಳಿಸುವಷ್ಟು ಪ್ರಭಾವಶಾಲಿಯಾಗಿ ಬಂದಿದೆ. ಇದೀಗಿನ ತುರ್ತುವರ್ತಮಾನಕ್ಕೆ ಆಕಾರ ಕೊಡಲು ಬಯಸುವ ಅಧುನಾಪ್ರಜ್ಞೆಯ ಈ ಕಥಾಕೃತಿಯು ಈಚಿನ ದಿನಗಳಲ್ಲಿ ಕನ್ನಡದಲ್ಲಿ ಕಾಣಿಸಿಕೊಂಡ ಮಹತ್ವದ ಸಂಕಲನಗಳಲ್ಲಿ ಒಂದಾಗಿದೆ.

-ಎಚ್. ಎಸ್. ವೆಂಕಟೇಶಮೂರ್ತಿ

ಆಧುನಿಕ ಭಾರತದ ಮಹತ್ವದ ಕವಿ ಎಂದು ಮನ್ನಿತರಾದ ಗೋಪಾಲಕೃಷ್ಣ ಅಡಿಗರು ನಗರದ ಒತ್ತಡಭರಿತ ಯಾಂತ್ರಿಕ ಜೀವನದ ಆದಾನ ಪ್ರದಾನಗಳನ್ನು ಮನಮುಟ್ಟುವಂತೆ ಚಿತ್ರಿಸಿದ್ದ ಕವಿತೆ ಶರದ್ದೀತ ಅಚಾನಕವಾಗಿ ನೆನಪಾದಾಗ, ಅದೇತಾನೆ ಓದಿಮುಗಿಸಿದ 'ದೀಪವ ಬಯಸಿ' ಕಾದಂಬರಿ ಹೊಸ ನಿಟ್ಟುಗಳಿಂದ ಹೊಸ ಅರ್ಥಗಳನ್ನು ಬಿಚ್ಚಿಡತೊಡಗಿತು. ಹಣವೊಂದೇ ಪ್ರಧಾನವಾಗಿರುವ ಒಂದು ವ್ಯವಸ್ಥೆಯ ಬಗ್ಗೆ ಅಡಿಗರು ವ್ಯಕ್ತಪಡಿಸಿದ ಅಳಲನ್ನು ಐವತ್ತು ವರ್ಷಗಳ ನಂತರ ಪುನನಿರ್ಮಿಸಿದಂತಿರುವ ಕಾದಂಬರಿಯು ಶರದ್ಗೀತದ ಶ್ಲೇಷೆ, ಸಂಕೀರ್ಣತೆ ಮತ್ತು ಅರ್ಥವ್ಯಾಪ್ತಿಗಳನ್ನು ದಕ್ಕಿಸಿಕೊಂಡು ಬೆಳೆದಂತೆ ಕಾಣಿಸತೊಡಗಿತು.

ಬೆಳಗೋಡು ರಮೇಶ್ ಭಟ್

ಗೊಲ್ಲರಹಳ್ಳಿಯಿಂದ ಲಾಸ್ ಏಂಜಲಿಸ್ವರೆಗೆ, ಲಾಸ್ ಏಂಜಲಿಸ್ಮಿಂದ ಅಮೂರ್ತದೆಡೆಗೆ. ಪ್ರತಿ ಪುಟದಲ್ಲೂ ಮುಂದಿನ ಪುಟದಲ್ಲೇನಾಗುತ್ತದೋ ಎನ್ನುವ ಕುತೂಹಲವನ್ನು ಹುಟ್ಟಿಸುತ್ತ, ಸಸ್ಪೆನ್ನು ಬೆಳೆಸುತ್ತ, ಹೊಸ ರೂಪಗಳೊಂದಿಗೆ, ಹೊಸ ರಾಗಗಳೊಂದಿಗೆ, ಹೊಸ ಹೊಳಹುಗಳೊಂದಿಗೆ ಸಾಗುವ ನಿಮ್ಮ ಕಾದಂಬರಿ ಓದಿದ್ದು ನನಗೆ ತುಂಬಖುಷಿ ನೀಡಿತು. ಮುಕ್ತವಾಗಿ, ತುಂಬ ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ ಇತ್ತೀಚಿಗೆ ನಾನುಓದಿದ ಅತ್ಯುತ್ತಮ ಕಾದಂಬರಿ ಇದು.

-ಸುಶ್ರುತ ದೊಡ್ಡರಿ

ದ್ವೀಪವ ಬಯಸಿ ಕಾದಂಬರಿಯು ವಿಷಯ ಗ್ರಹಣ ಹಾಗು ಕಥಾವಸ್ತುವಿನ ವಿಶಿಷ್ಟ ಸಂಯೋಜನೆಯಿಂದ ಕನ್ನಡ ಕಾದಂಬರಿಗಳಲ್ಲಿ ವಿಶೇಷ ಸ್ಥಾನದಲ್ಲಿ ನಿಲ್ಲುತ್ತದೆ. ಇದರಲ್ಲಿ ಪ್ರೇಮವಿದೆ, ಯುದ್ಧವಿದೆ, ರಕ್ತವಿದೆ, ಗುಲಾಬಿಯಿದೆ, ಒಣತೆವಲುಗಳಿವೆ, ಗಂಭೀರ ಕನಸುಗಳಿವೆ. ಎಲ್ಲ ಪಾತ್ರಗಳೂ ಆಳವಾಗಿ ಮನಸ್ಸಿನಲ್ಲಿ ಉಳಿಯುತ್ತವೆ.

-ಎಚ್.ಬಿ. ಇಂದ್ರಕುಮಾರ್

View full details