Themi
ದ್ರೌಣಿ
ದ್ರೌಣಿ
Publisher - ಸಸಿ ಪ್ರಕಾಶನ
- Free Shipping Above ₹350
- Cash on Delivery (COD) Available*
Pages - 216
Type - Paperback
Couldn't load pickup availability
ಆತ್ಮೀಯ ಥೇಮಿ ಅವರೇ,
ನೀವು ಕಳಿಸಿದ ಕಾದಂಬರಿಯನ್ನು ಓದಿದೆ. ಸಂತೋಷವಾಯಿತು.
ಕೆಳಗೆ ದಪ್ಪಕ್ಷರದಲ್ಲಿ ಗುರುತಿಸಲಾದ ಕೆಲವು ಮಾತುಗಳನ್ನು ಬರೆದಿದ್ದೇನೆ.
ಪುಸ್ತಕದ ಬೆನ್ನುಡಿಯಾಗಿ ಇದನ್ನು ಬಳಸಬಹುದು.
ಒಳಿತಾಗಲಿ.
ನನ್ನ ಗೆಳೆಯರಾದ ಥೇಮಿ ಅವರೊಳಗೆ ಒಬ್ಬ ಲೇಖಕನಿದ್ದಾನೆ ಎಂಬುದು ನನಗೆ ಹಲವು ವರುಷಗಳಿಂದ ತಿಳಿದಿತ್ತು. ನಮ್ಮ ಸಂಸ್ಥೆಯಿಂದ ತಯಾರಿಸುತ್ತಿದ್ದ ಹಲವು ಟೆಲಿಫಿಲ್ಮ್ಗಳಿಗೆ, ಕಿರುಚಿತ್ರಗಳಿಗೆ ಅವರನ್ನು ಚರ್ಚೆಗಳಲ್ಲಿ, ಕಥಾವಿಸ್ತರಣೆಯಲ್ಲಿ ಬಳಸಿಕೊಂಡದ್ದಿದೆ. ವೃತ್ತಿಯಿಂದ ಪತ್ತೇದಾರರೇ ಆದ ಅವರ ಅನುಭವ ಲೋಕವೂ ದೊಡ್ಡದು. ಅವರ ಓದಿನ ಹರಹೂ ವಿಸ್ತಾರವಾದದ್ದು. ಹೀಗಾಗಿ ಅವರು ಕಾದಂಬರಿ ಬರೆದಿದ್ದಾರೆ ಎಂದಾಗ ಅತ್ಯಂತ ಕುತೂಹಲದಿಂದ ಓದಿದೆ. ನನಗಿಷ್ಟವಾಯಿತು.
* ಅವರ ಭಾಷೆಯ ಬಳಕೆಯಲ್ಲಿ ಅನುಭವಸ್ಥ ಲೇಖಕರ ಹದವನ್ನು ಕಂಡುಕೊಂಡಿದ್ದಾರೆ. ನಿರೂಪಣೆಯಲ್ಲಿ ಹಲವು ತಿರುವುಗಳನ್ನು ಸೃಷ್ಟಿಸುತ್ತಾ ಓದುಗನನ್ನು ಕತೆಯ ಲೋಕದೊಳಗೆ ಉಳಿಸಿಕೊಳ್ಳುವ ಕಥನ ತಂತ್ರವನ್ನೂ ಕಲಿತಿದ್ದಾರೆ. ಕಾದಂಬರಿ ಬೆಳೆಯುತ್ತಾ ಬೆಳೆಯುತ್ತಾ ನೋಡುಗನೆದುರು ಚಿತ್ರವಾಗುವಂತೆ ಕತೆಯನ್ನು ನಿರೂಪಿಸುವ ಶಕ್ತಿಯೂ ಅವರಿಗೆ ಒಲಿದಿದೆ.*
ಈ ಎಲ್ಲಾ ಕಾರಣಗಳಿಗಾಗಿ ನಿಮ್ಮ ಕೈಯಲ್ಲಿ ಈಗಿರುವ "ದ್ರೌಣಿ" ಕಾದಂಬರಿಯು ಒಂದೊಳ್ಳೆಯ ಓದು ಮತ್ತು ನಿಮಗೂ ಗೊತ್ತಿಲ್ಲದ ಅನುಭವಲೋಕವನ್ನು ನಿಮ್ಮೆದುರು ತೆರೆದಿಡುತ್ತದೆ. ಪುರಾಣದ ಹಲವು ವಿವರಗಳ ಜೊತೆಗೆ ಸಮಕಾಲೀನ ಬದುಕನ್ನು ಸಮಾನವಾಗಿರಿಸಿ ಕಥನ ಬಿಚ್ಚಿಡುವ ಈ ಕ್ರಮ ಪ್ರತಿ ಓದುಗರನ್ನೂ ಒಳಗೊಳ್ಳುತ್ತದೆ ಹಾಗೂ ಮತ್ತೆ ಮತ್ತೆ ಮಿರಾಂಡ ಅವರ ಹೊಸ ಬರಹಗಳನ್ನು ಓದಲು ಪ್ರೇರೇಪಿಸುತ್ತದೆ ಎಂದು ಭಾವಿಸಿದ್ದೇನೆ.
ಥೇಮಿ ಅವರು ತಮ್ಮ ಮೊದಲ ಕಾದಂಬರಿಯ ಅನುಭವದ ಹಿನ್ನೆಲೆಯಲ್ಲಿ ಮತ್ತಷ್ಟು ಈ ಬಗೆಯ ಹೊಸ ಲೋಕವನ್ನು ಕನ್ನಡ ಓದುಗರಿಗೆ ಪರಿಚಯಿಸುತ್ತಾ ಇರಲಿ ಎಂದು ಹಾರೈಸುತ್ತೇನೆ.
- ಬಿ. ಸುರೇಶ
(ರಂಗಕರ್ಮಿ, ನಾಟಕಕಾರ/ಚಲನಚಿತ್ರ ನಿರ್ಮಾಪಕ-ನಿರ್ದೇಶಕ-ಕಲಾವಿದ)
Share

Subscribe to our emails
Subscribe to our mailing list for insider news, product launches, and more.