Malini Malya
ಡಾ. ಶಿವರಾಮ ಕಾರಂತರ ಸಮಗ್ರ ನಾಟಕಗಳು
ಡಾ. ಶಿವರಾಮ ಕಾರಂತರ ಸಮಗ್ರ ನಾಟಕಗಳು
Publisher - ರವೀಂದ್ರ ಪುಸ್ತಕಾಲಯ
Regular price
Rs. 500.00
Regular price
Rs. 500.00
Sale price
Rs. 500.00
Unit price
/
per
- Free Shipping Above ₹250
- Cash on Delivery (COD) Available
Pages -
Type -
ಸುಮಾರು ೯೦ರಷ್ಟು ನಾಟಕಗಳನ್ನು ಬರೆದು, ರಂಗಭೂಮಿಯ ಪ್ರಯೋಗಗಳಿಗೂ ಅಳವಡಿಸಿ ನಿರ್ದೇಶಕರಾಗಿ, ನಟರಾಗಿ, ನಾಟಕಕರ್ತರಾಗಿ ಕಾರಂತರು ಪ್ರಸಿದ್ಧರಾದುದು ಈ ಶತಮಾನದ ೩ ೪ನೇ ದಶಕಗಳಲ್ಲಿ, ಇದರಿಂದಾಗಿ, ಇಂದಿನ ಅನೇಕರಿಗೆ ಶಿವರಾಮ ಕಾರಂತರ ರಂಗಾಯಣದ ಪರಿಚಯವೇ ಇಲ್ಲ ೧೯೨೩ - ೨೪ರ ಅವಧಿಯಲ್ಲಿ ತಮ್ಮ ಮೊದಲ ಕವನ ಸಂಗ್ರಹ, ಕಾದಂಬರಿಗಳನ್ನು ಪ್ರಕಟಸಿದ ಕಾರಂತರು, ಇದೇ ಅವಧಿಯಲ್ಲಿ 'ದುರ್ಗಾದಾಸ' ಎಂಬೊಂದು ಹಿಂದೀ ನಾಟಕವನ್ನು ಕನ್ನಡಕ್ಕೆ ಭಾಷಾಂತರಿಸಿ, ಅದನ್ನು ರಂಗಪ್ರಯೋಗಕ್ಕೂ ಅಳವಡಿಸಿ, ಸ್ವತಃ ನಟಿಸಿದ್ದ ಬಗ್ಗೆ ಉಲ್ಲೇಖವಿದೆ. ಕಾರಂತರು ಇಂದು ಸಾಹಿತಿಯಾಗಿ ಪ್ರಸಿದ್ಧರಾಗಿರುವರಾದರೂ, ಮೂಲತಃ ಅವರೊಬ್ಬ ಕಲಾವಿದ ಎನ್ನುವುದೇ ಹೆಚ್ಚು ಸೂಕ್ತವಾಗುತ್ತದೆ. ತಮ್ಮ ಆದರ್ಶಗಳಿಗೆ ದೇಶೋದ್ಧಾರ, ಸಮಾಜೋದ್ಧಾರದ ಕನಸುಗಳಿಗೆ ಸಮರ್ಥ ಅಭಿವ್ಯಕ್ತಿ ಮಾಧ್ಯಮ ರಂಗಭೂಮಿ ಎಂಬುದನ್ನು ಅವರು ಕಂಡುಕೊಂಡುದಕ್ಕಿರಬೇಕು ಇಪ್ಪತ್ತರ ದಶಕದಷ್ಟು ಪೂರ್ವದಲ್ಲಿಯೇ ಅವರು ಡುಮಿಂಗೊ, ಕರ್ಣಾರ್ಜುನ, ಮುಕ್ತದ್ವಾರ ಮುಂತಾದ ನಾಟಕಗಳನ್ನು ರಚಿಸಿ, ಪ್ರದರ್ಶಿಸಿದ ಬಗ್ಗೆ ದಾಖಲೆಗಳಿವೆ. ಅವರ ಹಲವು ನಾಟಕಗಳು ಗ್ರಂಥ ರೂಪದಲ್ಲಿ ಪ್ರಕಟಗೊಳ್ಳುವ ಮುನ್ನ, ಹಲವಾರು ರಂಗಪ್ರದರ್ಶನಗಳನ್ನು ಕಂಡು, ಹಲವು ವರ್ಷಗಳ ಬಳಿಕ ಅಂತಹ ಬಿಡಿ ನಾಟಕಗಳೇ ಸಂಕಲನ ರೂಪದಲ್ಲಿ ಪ್ರಕಟಗೊಂಡುದರಿಂದ, ಅವರು ನಾಟಕ ಬರೆದು, ಪ್ರದರ್ಶಿಸಿದ ಇಸವಿಯೇ ಬೇರೆ, ಅದು ಗ್ರಂಥ ರೂಪದಲ್ಲಿ ಹೊರಬಂದ ಅವಧಿಯೇ ಬೇರೆಯಾಗಿದೆ. ಹೀಗಾಗಿ, ಅವರ ಹಲವು ನಾಟಕಗಳು ನಿಜವಾಗಿ ರಚನೆಗೊಂಡ ನಿಶ್ಚಿತ ಕಾಲಾವಧಿಯ ಕುರಿತು ಅಧಿಕೃತ ಮಾಹಿತಿ ಸಿಗುವುದಿಲ್ಲ, ಆದರೂ, ಈ ಶತಮಾನದ ೨, ೩, ೪ನೇ ದಶಕಗಳಲ್ಲಿ ಶಿವರಾಮ ಕಾರಂತರು ನಾಟಕಕರ್ತರಾಗಿ, ನಟರಾಗಿ, ಹೆಸರಾಂತ ರಂಗಭೂಮಿ ನಿರ್ದೇಶಕರಾಗಿ ಮರದ ಬಗ್ಗೆ ಅಚಿತ ದಾಖಲೆಗಳವೆ. ಕರ್ನಾಟಕ ಸಾಹಿತ್ಯ ಪರಿಷತ್ತು ಅಂದಿನ ತನಕ ತಿರುಗಿಸುತ್ತಿದ್ದ ನಾವು ಗೋಷ್ಠಿಗಳಲ್ಲಿ ಸಾಹಿತ್ಯ ಗೋಷ್ಠಿ, ಕವಿಗೋಷ್ಠಿಗಳ ಜತೆಯಲ್ಲಿ, ೧೯೩೯ರಲ್ಲಿ ಮೊದಲ ಬಾರಿಗೆ, ಬಳ್ಳಾರಿಯ ಸಾಹಿತ್ಯ ಸಮ್ಮೇಳನದಲ್ಲಿ ನಾಟಕ ಗೋಷ್ಠಿಯನ್ನು ಏರ್ಪಡಿಸಿ, ಅದರ ಅಧ್ಯಕ್ಷ ಪಟ್ಟವನ್ನು ಶಿವರಾಮ ಕಾರಂತರಿಗೆ ವಹಿಸಿದುದರ ಬಗ್ಗೆ ಓದುವಾಗ, ನಾಟಕಕಾರರಾಗಿ ಕಾರಂತರು ಇಂದು ಗಳಿಸಿದ್ದ ಪ್ರಸಿದ್ಧಿಯನ್ನು ಊಹಿಸಬಹುದು. ಗೀತನಾಟಕ, ಜಾನಪದ ನಾಟಕ, ಛಾಯಾ ನಾಟಕ, ಮುಖವಾಡ, ಅಣಕವಾಡ, ಸಾಮಾಜಿಕ, ಐತಿಹಾಸಿಕ, ಪೌರಾಣಿಕ, ಮಕ್ಕಳ ನಾಟಕ, ಹಾಸ್ಯ ನಾಟಕ ಮುಂತಾದ ವಿವಿಧ ವರ್ಗದ ನಾಟಕಗಳಲ್ಲಿ ಅಸಂಖ್ಯ ರೀತಿಯ ವಸ್ತುವನ್ನು ಬಳಸಿಕೊಂಡು ನಾಟಕ ಕಲೆಯನ್ನು ಹಲವು ರೂಪಗಳಲ್ಲಿ ಪ್ರದರ್ಶಿಸುವ ಸಾಧ್ಯತೆಗಳನ್ನು ತೋರಿಸಿಕೊಟ್ಟಿದ್ದಾರೆ. ಸ್ಥತಃ ನಾಟಕಗಳನ್ನು ಬರೆದವರು, ಸ್ವತಃ ನಟಿಸಿದವರು, ನಾಟಕ ಮಾಧ್ಯಮದ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲ ಯೋಗ್ಯತೆಯಿದ್ದವರು ಎಂಬ ದೃಷ್ಟಿಯಿಂದ ಪರಿಶೀಲಸಿದಾಗ, ಕರ್ನಾಟಕದಲ್ಲಿ ಅಂದು ಕೈಲಾಸಂ, ಶಿವರಾಮ ಕಾರಂತ ಮತ್ತು ಶ್ರೀರಂಗರು ನಾಟಕರಂಗದ ತ್ರಿಮೂರ್ತಿಗಳಾಗಿದ್ದರು ಎಂಬುದಾಗಿ ತಿಳಿದುಕೊಳ್ಳಬಹುದು.
-ಮಾಲಿನಿ ಮಲ್ಯ
-ಮಾಲಿನಿ ಮಲ್ಯ
Share
Subscribe to our emails
Subscribe to our mailing list for insider news, product launches, and more.