Skip to product information
1 of 2

Manjunath Kunigal

ದೂರ ದೇಶದ ದೇವರು

ದೂರ ದೇಶದ ದೇವರು

Publisher - ವೀರಲೋಕ ಬುಕ್ಸ್

Regular price Rs. 160.00
Regular price Rs. 160.00 Sale price Rs. 160.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 128

Type - Paperback

Gift Wrap
Gift Wrap Rs. 15.00

ದೂರ ದೇಶದ ದೇವರು' ಕಥಾಸಂಕಲನದ ಪಾತ್ರಗಳಲ್ಲಿ ನೈಜತೆಯಿದ್ದು ಅವು ಬಹು ಆಯಾಮವನ್ನು ಹೊಂದಿವೆ. ಕತೆ ಸಾಗುತ್ತಿದ್ದಂತೆ ಅಲ್ಲೊಂದು ಬೆಳವಣಿಗೆ, ಒಂದು ಬದಲಾವಣೆ ಕಂಡುಬರುತ್ತದೆ. ಅಲ್ಲಿನ ಸಂಬಂಧ-ಸಂಘರ್ಷಗಳು ನೈಜವಾಗಿ ನಡೆಯುವಂತೆ ಕತೆಯನ್ನು ಮುಂದಕ್ಕೆ ಕೊಂಡೊಯ್ಯಲಾಗಿದೆ. ಪ್ರತಿ ಕತೆಯಲ್ಲೂ ಇರುವ ಸಂಘರ್ಷದಲ್ಲಿ ಓದುಗನೂ ಪಾಲುಗೊಳ್ಳುವಂತಾಗುವುದು ಇಲ್ಲಿನ ವಿಶೇಷ.

ಕುಣಿಗಲರು ಕತೆ ಹೇಳುವ ರೀತಿಯೂ ಸ್ವಾರಸ್ಯಕರವಾಗಿದ್ದು, ಕತೆಗಳು ಆಸಕ್ತಿಯಿಂದ ಓದಿಸಿಕೊಂಡು ಹೋಗುತ್ತವೆ. ಕತೆಯ ಭಾಷೆ, ನಿರೂಪಣಾ ಶೈಲಿ, ಪದಗಳ ಆಯ್ಕೆಯಲ್ಲಿರುವ ಶಿಸ್ತು ಮತ್ತು ವಿಷಯವನ್ನು ಕೆಲವೇ ಶಬ್ದಗಳಲ್ಲಿ ಹೇಳುವ ಅಚ್ಚುಕಟ್ಟುತನ - ಈ ಎಲ್ಲ ಅಂಶಗಳು ಅನಾಯಾಸವಾಗಿ, ಸಹಜವಾಗಿ ಬಂದು, ಅಲ್ಲೊಂದು ಸಮತೋಲನವಿದೆ. ಓದಿ ಮುಗಿದ ನಂತರವೂ ಓದುಗರೊಂದಿಗೆ ಉಳಿಯುವ ಗುಣವಿದೆ.

ಮಾನವ ಸ್ವಭಾವದ ಬಗ್ಗೆ ಸೂಕ್ಷ್ಮವಾದ ಒಳನೋಟವನ್ನು ನೀಡುವ ಈ ಸಂಕಲನದ ಕತೆಗಳು ವೈಯುಕ್ತಿಕವಾಗಿದ್ದಂತೆ ಅಲ್ಲೊಂದು ಸಾರ್ವತ್ರಿಕತೆಯೂ ಇದೆ. ಮುಖ್ಯವಾಗಿ, ಕತೆಯ ಓಘವು ಎಲ್ಲವನ್ನೂ ಕಾಗುಣಿತಗೊಳಿಸದೆ ಬದುಕಿನ ವ್ಯಾಖ್ಯಾನಕ್ಕೆ ಅವಕಾಶವನ್ನು ನೀಡುತ್ತವೆ. ಹೊಸ ಆಲೋಚನೆಗಳು ವೈಯಕ್ತಿಕ ಮಟ್ಟದಲ್ಲಿ ಆಳವಾಗಿ ಪ್ರತಿಧ್ವನಿಸುವಂತಿದ್ದು, ಕೆಲವು ಕತೆಗಳು ಓದುಗನ ದೃಷ್ಟಿಕೋನಕ್ಕೆ ಸವಾಲೊಡ್ಡುವಂತಿವೆ.

-ಮಿತ್ರಾ ವೆಂಕಟ್ರಾಜ | ಹಿರಿಯ ಕಥೆಗಾರ್ತಿ | ಮುಂಬಯಿ

View full details